ಕಾಳಿಂಗ ಸರ್ಪ ಹೆಸರೇ ಹೇಳಿದ ಕೂಡಲೇ ಮೈಯಲ್ಲಿ ನಡುಕ ಶುರುವಾಗುತ್ತದೆ. ವಿಶ್ವದ ಅತ್ಯಂತ ಅಪಾಯಕಾರಿ ಮತ್ತು ವಿಷಕಾರಿ ಜೀವಿಗಳಲ್ಲಿ ಒಂದಾಗಿದ್ದು, ಕಚ್ಚಿದರೆ ಸಾವನಪ್ಪುವುದು ಖಂಡಿತ. ಈ ಕಾಳಿಂಗ ಸರ್ಪವನ್ನು ಇಲ್ಲಿಯವರೆಗೆ ಒಂದೇ ಜಾತಿಯೆಂದು ಪರಿಗಣಿಸಲಾಗಿದೆ. ಆದರೆ ಇದೀಗ ಈ ವಿಷಕಾರಿ ಕಾಳಿಂಗ ಸರ್ಪವು ನಾಲ್ಕು ವಿಭಿನ್ನ ಪ್ರಭೇದಗಳನ್ನು ಹೊಂದಿದೆ ಎಂದು ಆಗುಂಬೆಯ ಖ್ಯಾತ ಉರಗ ತಜ್ಞರು ಪಿ ಗೌರಿ ಶಂಕರ್ ತಮ್ಮ ಸಂಶೋಧನೆಯಲ್ಲಿ ದೃಢಪಡಿಸಿದ್ದಾರೆ.
ಈ ಹಿಂದೆ ಅನೇಕ ವಿಜ್ಞಾನಿಗಳು ನಾಲ್ಕು ಪ್ರಭೇದ ಕುರಿತಾದ ತಮ್ಮ ಊಹೆಗಳನ್ನು ಪ್ರಸ್ತಾಪಿಸಿದ್ದರು, ಆದರೆ ಅವುಗಳ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದಲೇ ಗೌರಿ ಶಂಕರ್ ಅವರು ಪಿಎಚ್‌ಡಿ ಸಂಶೋಧನೆಗೆ ಈ ವಿಷಯವನ್ನೇ ಆಯ್ಕೆ ಮಾಡಿಕೊಂಡರು. ಹೀಗಾಗಿ 2012 ರಲ್ಲಿ, ಅವರು ತಮ್ಮ ಅಧ್ಯಯನವನ್ನು ಯೋಜಿಸಲು ಹಾಗೂ ಕಾರ್ಯಗತಗೊಳಿಸಲು ವಿವಿಧ ಸಂಸ್ಥೆಗಳು, ವಿಶ್ವವಿದ್ಯಾಲಯಗಳೊಂದಿಗೆ ಸೇರಿಕೊಂಡರು.
ಐಐಎಸ್‌ಸಿಯ ಡಾ ಕಾರ್ತಿಕ್ ಶಂಕರ್ ಅವರ ಮೇಲ್ವಿಚಾರಣೆಯಲ್ಲಿ, ಸ್ವೀಡನ್‌ನ ಉಪ್ಸಲಾ ವಿಶ್ವವಿದ್ಯಾಲಯದ ಡಾ ಎಸ್‌ಕೆ ದತ್ತಾ (ಪ್ರೊ. ಎಮೆರಿಟಸ್) ಮತ್ತು ಪ್ರೊ ಜೇಕಬ್ ಹೊಗ್ಲುಂಡ್ ಅವರು ವಿವಿಧ ಆವಾಸಸ್ಥಾನಗಳಲ್ಲಿ ಕಾಳಿಂಗ ಸರ್ಪಗಳ ಅಂಗಾಂಶ ಮಾದರಿಗಳನ್ನು ಸಂಗ್ರಹಿಸಿ ವಿವಿಧ ರೂಪಾಂತರಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ ಖ್ಯಾತ ಉರಗ ತಜ್ಞ ಗೌರಿ ಶಂಕರ್ ಅವರು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಹಲವಾರು ದೇಶಗಳಲ್ಲಿ ಅಧ್ಯಯನದ ನೇತೃತ್ವ ವಹಿಸಿದ್ದು, 10 ವರ್ಷಗಳ ಕಾಲ ನಡೆಸಿದ ಅಧ್ಯಯನ ಬಳಿಕ ನಾಲ್ಕು ಪ್ರಭೇದಗಳನ್ನು ಒಳಗೊಂಡಿದೆ. ಅವುಗಳ ಆವಾಸ ಸ್ಥಳ, ಪ್ರಾಣಿಸಂಗ್ರಹಾಲಯಗಳು ಹಾಗೂ ವಸ್ತುಸಂಗ್ರಹಾಲಯಗಳಿಂದ ಅಂಗಾಂಶ ಮಾದರಿಗಳನ್ನು ಸಂಗ್ರಹಿಸಿದ್ದೇವೆ. ನಂತರದಲ್ಲಿ ಡಿಎನ್ಎ ಅನುಕ್ರಮಗಳನ್ನು ಪಡೆಯಲು ಈ ಮಾದರಿಗಳನ್ನು ಸಂಸ್ಕರಿಸಿತು. ನಾವು ವಿವಿಧ ಪ್ರದೇಶಗಳ ರಾಜ ನಾಗರಹಾವುಗಳ ಛಾಯಾಚಿತ್ರಗಳನ್ನು ತೆಗೆದುಕೊಂಡಿದ್ದು, ಅವುಗಳ ಭೌತಿಕ ಗುಣಲಕ್ಷಣಗಳನ್ನು ಅಧ್ಯಯನ ಮಾಡಿದ್ದೇವೆ. ಆ ಬಳಿಕ ಕಾಳಿಂಗ ಸರ್ಪವು ನಾಲ್ಕು ಪ್ರಭೇದಗಳಿವೆ ಎಂದು ನಿರ್ಣಯಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಈ ಕಾಳಿಂಗ ಸರ್ಪದ ನಾಲ್ಕು ಪ್ರಭೇದಗಳಲ್ಲೂ ಎರಡು ಭಾರತದಲ್ಲಿ ಕಂಡುಬರುತ್ತವೆ. ಭಾರತದಲ್ಲಿರುವ ಒಂದು ಕಾಳಿಂಗ ಸರ್ಪಗಳಲ್ಲಿ ಒಂದನ್ನು ಓಫಿಯೋಫಾಗಸ್ ಕಾಳಿಂಗ ಎಂದು ಹೆಸರಿಸಿದ್ದಾರೆ. ರಾಜ್ಯ ಅರಣ್ಯ ಇಲಾಖೆ ಈ ತಿಂಗಳು ಘೋಷಣೆ ಮಾಡುವ ನಿರೀಕ್ಷೆಯಿದೆ. IUCN ರೆಡ್ ಲಿಸ್ಟ್ ಆಫ್ ಥ್ರೆಟೆನ್ಡ್ ಸ್ಪೀಷೀಸ್ ಅಸೆಸ್‌ಮೆಂಟ್ (IUCN, 2012) ಅಡಿಯಲ್ಲಿ ರಾಜ ನಾಗರಹಾವನ್ನು “ದುರ್ಬಲ” ಎಂದು ವರ್ಗೀಕರಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಇನ್ನು ಎರಡೇ ತಿಂಗಳಲ್ಲಿ ನಡೆಯಲಿದೆ 48 ಲಕ್ಷ ಮದುವೆ, 6 ಲಕ್ಷ ಕೋಟಿ ವ್ಯವಹಾರ, ವರದಿಯಲ್ಲಿ ಬಹಿರಂಗ
ಕಾಳಿಂಗ ಸರ್ಪದ ಆವಾಸಸ್ಥಾನ ನಾಶ, ಚರ್ಮದ ವ್ಯಾಪಾರ, ಆಹಾರ, ಔಷಧ ಸೇರಿದಂತೆ ವಿವಿಧ ಕಾರಣಗಳಿಂದ ಅವುಗಳ ಸಂತತಿಯೂ ನಾಶವಾಗುತ್ತಿದೆ. ಈ ಕಾಳಿಂಗ ಸರ್ಪದ ವಿಷಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಮೂಲಭೂತ ಮತ್ತು ಸೈದ್ಧಾಂತಿಕ ಪ್ರಶ್ನೆಗಳಿಗೆ ಉತ್ತರಿಸುವುದರ ಹೊರತಾಗಿ, ಈ ಅಧ್ಯಯನವು ಯಾವ ಜಾತಿಯ ಕಾಳಿಂಗ ಸರ್ಪಗಳ ಸಂರಕ್ಷಣಾ ಕ್ರಮಗಳ ಕೈಗೊಳ್ಳುವ ಅಗತ್ಯವಿದೆ ಎಂಬುದನ್ನು ನಿರ್ಣಯಿಸಲು ತಕ್ಷಣವೇ ಸಹಾಯ ಮಾಡುತ್ತದೆ. ಇದು ಈ ಜಾತಿಗಳ ವಿಷದ ಸಂಯೋಜನೆ ಹಾಗೂ ಹಾವು ಕಡಿತದ ತಗ್ಗಿಸುವಿಕೆಯ ಪರಿಣಾಮಕಾರಿತ್ವದ ಮೇಲೆ ನೇರ ಪರಿಣಾಮ ಬೀರುವ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ