ಭಾರತದಲ್ಲಿ ಇನ್ನು ಎರಡೇ ತಿಂಗಳಲ್ಲಿ ನಡೆಯಲಿದೆ 48 ಲಕ್ಷ ಮದುವೆ, 6 ಲಕ್ಷ ಕೋಟಿ ವ್ಯವಹಾರ, ವರದಿಯಲ್ಲಿ ಬಹಿರಂಗ

ಇತ್ತೀಚೆಗಿನ ದಿನಗಳಲ್ಲಿ ಮದುವೆಯೆನ್ನುವುದು ಆಡಂಬರದಿಂದ ಕೂಡಿರುತ್ತದೆ. ಹೀಗಾಗಿ ತಮ್ಮ ಆದಾಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ಖರ್ಚು ಮಾಡಿ ಮಕ್ಕಳ ಮದುವೆ ಮಾಡುತ್ತಾರೆ. ಈ ವರ್ಷ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಸುಮಾರು 48 ಲಕ್ಷ ವಿವಾಹಗಳು ನಡೆಯಲಿವೆ, ಇದು ಸುಮಾರು 6 ಲಕ್ಷ ಕೋಟಿ ರೂಪಾಯಿ ವ್ಯವಹಾರವನ್ನು ನಿರೀಕ್ಷಿಸಲಾಗಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ವರದಿಯಿಂದ ತಿಳಿದು ಬಂದಿದೆ.

ಭಾರತದಲ್ಲಿ ಇನ್ನು ಎರಡೇ ತಿಂಗಳಲ್ಲಿ ನಡೆಯಲಿದೆ 48 ಲಕ್ಷ ಮದುವೆ, 6 ಲಕ್ಷ ಕೋಟಿ ವ್ಯವಹಾರ, ವರದಿಯಲ್ಲಿ ಬಹಿರಂಗ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 04, 2024 | 11:16 AM

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎನ್ನುವ ಗಾದೆಯಿದೆ. ಮನೆಗೆ ಹಾಗೂ ಮದುವೆಗೆ ಎಷ್ಟೇ ದುಡ್ಡು ಹಾಕಿದರೂ ಸಾಕಾಗುವುದೇ ಇಲ್ಲ. ಅದರಲ್ಲಿಯೂ ಇತ್ತೀಚೆಗಿನ ವರ್ಷಗಳಲ್ಲಿ ಭಾರತೀಯರಿಗೆ ಮದುವೆ ಮಾಡುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹೀಗಾಗಿ ಎಷ್ಟೇ ದುಡ್ಡು ಖರ್ಚಾದರೂ ಸರಿಯೇ, ಸಾಲ ಮಾಡಿಯಾದರು ಮದುವೆ ಮಾಡುವವರೇ ಹೆಚ್ಚು. ದೇಶದಾದಂತ್ಯ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಮದುವೆ ಸೀಸನ್ ಆರಂಭವಾಗಲಿದೆ. ಇದೀಗ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ವರದಿಯ ಪ್ರಕಾರ, ಈ ವರ್ಷ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಸುಮಾರು 48 ಲಕ್ಷ ವಿವಾಹಗಳು ನಡೆಯಲಿವೆ, ಈ ಬಾರಿ ಸುಮಾರು 6 ಲಕ್ಷ ಕೋಟಿ ರೂಪಾಯಿ ವ್ಯವಹಾರವನ್ನು ನಿರೀಕ್ಷಿಸಲಾಗಿದೆ.

ದೇಶದಾದ್ಯಂತ 75 ಪ್ರಮುಖ ನಗರಗಳಲ್ಲಿ ಮದುವೆಗೆ ಸಂಬಂಧಿಸಿದ ಸರಕುಗಳು ಮತ್ತು ಸೇವೆಗಳಲ್ಲಿ ವ್ಯವಹರಿಸುತ್ತಿರುವ ಪ್ರಮುಖ ವ್ಯಾಪಾರಿ ಸಂಸ್ಥೆಗಳೊಂದಿಗೆ ಚರ್ಚೆಯಿಂದ ಪಡೆದ ಡೇಟಾವನ್ನು ಆಧರಿಸಿ ಸಿಎಐಟಿಯೂ ಈ ಅಂದಾಜನ್ನು ಮಾಡಿದೆ. 2024 ರಿಂದ ಫೆಬ್ರವರಿ 2025 ರವರೆಗೆ ಬಿಡುವಿಲ್ಲದ ಮದುವೆಯ ಋತುವಿಗಾಗಿ ಅನೇಕ ಗ್ರಾಹಕರು ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ ಎನ್ನುವುದು ತಿಳಿದು ಬಂದಿದೆ.

ವರದಿಯ ಪ್ರಕಾರವಾಗಿ ದೆಹಲಿಯೊಂದರಲ್ಲೇ ಅಂದಾಜು 4.5 ಲಕ್ಷ ಮದುವೆಗಳು ನಡೆಯಲಿದ್ದು, ಈ ಋತುವಿನಲ್ಲಿ 1.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ವ್ಯವಹಾರವನ್ನು ನಿರೀಕ್ಷಿಸಲಾಗಿದೆಯಂತೆ. ಅದಲ್ಲದೇ, ಕಳೆದ ವರ್ಷ, ಈ ಋತುವಿನಲ್ಲಿ 35 ಲಕ್ಷ ವಿವಾಹಗಳಿಂದ ಒಟ್ಟು 4.25 ಲಕ್ಷ ಕೋಟಿ ರೂಪಾಯಿಗಳಷ್ಟೇ ಆದಾಯವಾಗಿತ್ತು. ಆದರೆ ಈ ಋತುವಿನಲ್ಲಿ ದೇಶಾದ್ಯಂತ ಸುಮಾರು 40 ಲಕ್ಷ ಮದುವೆಗಳನ್ನು 3 ಲಕ್ಷದಿಂದ ಪ್ರಾರಂಭವಾಗಿ 15 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆಸಲಾಗುವುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ : ಅನ್ನ, ಚಪಾತಿ ಇವುಗಳಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು?

ಅದಲ್ಲದೇ ಏಳು ಲಕ್ಷ ಮದುವೆಗೆ 25 ಲಕ್ಷ ರೂ, 50 ಸಾವಿರ ಮದುವೆಗಳಿಗೆ 50 ಲಕ್ಷ ರೂ ಹಾಗೂ ಇನ್ನುಳಿದಂತೆ 50 ಸಾವಿರ ಮದುವೆ ಸಮಾರಂಭಗಳಿಗೆ ಒಂದು ಕೋಟಿ ಅಥವಾ ಅದಕ್ಕಿಂತ ಹೆಚ್ಚು ವೆಚ್ಚವಾಗಲಿದೆ ಎನ್ನಲಾಗಿದೆ. ಈ ಬಾರಿಯ ಮದುವೆಯ ವೆಚ್ಚಗಳನ್ನು ಸರಕು ಮತ್ತು ಸೇವೆಗಳ ನಡುವೆ ವಿಂಗಡಿಸಲಾಗಿದೆ. ಇದರಲ್ಲಿ ಮುಖ್ಯವಾಗಿ ಜವಳಿ, ಸೀರೆಗಳು, ಲೆಹೆಂಗಾಗಳು, ಎಲೆಕ್ಟ್ರಾನಿಕ್ಸ್, ವಿದ್ಯುತ್ ಉಪಕರಣಗಳು ಸೇರಿದಂತೆ ಗ್ರಾಹಕ ಬಾಳಿಕೆ ಬರುವ ವಸ್ತುಗಳು ಸೇರಿದಂತೆ ಉಡುಪುಗಳು ಒಳಗೊಂಡಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ