Kitchen Hacks : ಸುಲಭವಾಗಿ ಶುಂಠಿ ಸಿಪ್ಪೆ ತೆಗೆಯೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ಅಡುಗೆಯ ರುಚಿ ಹೆಚ್ಚಿಸುವ ಶುಂಠಿಯನ್ನು ಆಹಾರದಲ್ಲಿ ಎಲ್ಲರೂ ಬಳಸುತ್ತಾರೆ. ಆದರೆ ಮಾರುಕಟ್ಟೆ, ಅಂಗಡಿಗಳಿಂದ ತರುವ ಶುಂಠಿಯಂತೂ ಮಣ್ಣಿನಿಂದ ಕೂಡಿರುತ್ತದೆ. ಎಷ್ಟೇ ತೊಳೆದರೂ ಕೂಡ ಇದರ ಮೇಲಿರುವ ಮಣ್ಣು ಹೋಗುವುದೇ ಇಲ್ಲ, ಹೀಗಾಗಿ ಶುಂಠಿ ಸಿಪ್ಪೆ ತೆಗೆದೇ ಅಡುಗೆಗೆ ಬಳಸಬೇಕು. ಆದರೆ ಈ ಶುಂಠಿಯೂ ಬೇರಾಗಿದ್ದು, ಇದರಲ್ಲಿ ಕವಲುಗಳು ಇರುತ್ತದೆ. ಸಿಪ್ಪೆ ತೆಗೆಯುವುದೇ ಕಷ್ಟದ ಕೆಲಸ. ಈ ಕೆಲವು ಟ್ರಿಕ್ಸ್ ಬಳಸಿಕೊಂಡರೆ ಸಿಪ್ಪೆ ತೆಗೆಯುವುದು ಸುಲಭದಾಯಕವಾಗಿದೆ.

Kitchen Hacks : ಸುಲಭವಾಗಿ ಶುಂಠಿ ಸಿಪ್ಪೆ ತೆಗೆಯೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 04, 2024 | 3:23 PM

ವೆಜ್ ಇರಲಿ, ನಾನ್ ವೆಜ್ ಇರಲಿ ಎಲ್ಲಾ ವಿಧದ ಅಡುಗೆಗೂ ಶುಂಠಿ ಇರಲೇಬೇಕು. ಅಡುಗೆಗೆ ಮಾತ್ರವಲ್ಲದೇ ಆರೋಗ್ಯ ಸಮಸ್ಯೆಗೂ ಔಷಧವಾಗಿ ಇದನ್ನು ಬಳಸಲಾಗುತ್ತದೆ. ಕೆಲವರಂತೂ ಶುಂಠಿ ಟೀಯನ್ನು ಇಷ್ಟ ಪಟ್ಟು ಸೇವಿಸುತ್ತಾರೆ. ಆದರೆ ಅಡುಗೆಗೆ ಬಳಸುವ ಮುನ್ನ ಇದರ ಸಿಪ್ಪೆ ಸುಲಿದು ಬಳಸುವುದು ಉತ್ತಮ. ಈ ಸಿಪ್ಪೆಯೂ ಅಂಟಿಕೊಂಡಿರುವುದರಿಂದ ಇದನ್ನು ಸುಲಿಯುವುದು ತುಂಬಾ ಕಿರಿಕಿರಿ ಉಂಟುಮಾಡುವ ಕೆಲಸವಾಗಿದೆ. ಎಳೆ ಶುಂಠಿಯ ಸಿಪ್ಪೆಯನ್ನು ಕೈ ಬೆರಳು ಸಹಾಯದಿಂದಲೇ ಸುಲಿಯ ಬಹುದು. ಆದರೆ ಬಲಿತ ಶುಂಠಿ ಸಿಪ್ಪೆಯನ್ನು ಕೈ ಬೆರಳಿನಲ್ಲಿ ತೆಗೆಯಲು ಹೋದರೆ ಕೈ ನೋವು ಶುರುವಾಗುತ್ತದೆ. ಹೀಗಾಗಿ ಸಿಪ್ಪೆ ತೆಗೆಯಲು ಇಲ್ಲಿದೆ ಕೆಲವು ಟಿಪ್ಸ್

  • ಶುಂಠಿ ಮಣ್ಣಿನೊಳೆಗೆ ಬೆಳೆಯುವುದರಿಂದ, ಶುಂಠಿಯನ್ನು ಚೆನ್ನಾಗಿ ತೊಳೆದುಕೊಳ್ಳಿ. ಸ್ವಲ್ಪ ಸಮಯದವರೆಗೆ ಅದನ್ನು ನೀರಿನಲ್ಲಿ ನೆನೆ ಹಾಕಿದರೆ ಸುಲಭವಾಗಿ ಸಿಪ್ಪೆ ತೆಗೆಯಬಹುದು.
  • ಚಾಕುವಿನಲ್ಲಿ ಸಿಪ್ಪೆ ತೆಗೆದರೆ ಶುಂಠಿಯ ಅರ್ಧ ಭಾಗವೇ ಸಿಪ್ಪೆಯೊಂದಿಗೆ ಹೋಗುತ್ತವೆ. ಹೀಗಾಗಿ ಇದರ ಸಿಪ್ಪೆ ತೆಗೆಯಲು ಸ್ಪೂನ್‌ ಬಳಸುವುದು ಉತ್ತಮ ಮಾರ್ಗವಾಗಿದೆ. ಚಮಚದ ಮುಂಭಾಗವನ್ನು ಬಳಸಿ ಶುಂಠಿಯ ಸಿಪ್ಪೆಯನ್ನು ತೆಗೆಯಿರಿ.
  • ಶುಂಠಿಯನ್ನು ಸ್ವಲ್ಪ ಸಮಯದವರೆಗೆ ಬಿಸಿ ನೀರಿನಲ್ಲಿ ನೆನೆಸಿಡಬೇಕು. ಆ ಬಳಿಕ ಶುಂಠಿ ಸಿಪ್ಪೆಯಲ್ಲಿ ಕೈಯಿಂದಲೇ ತೆಗೆಯಬಹುದು.
  • ಅಡುಗೆಗೆ ಮುನ್ನ ಅರ್ಧ ಗಂಟೆಗಳ ಕಾಲ ಶುಂಠಿಯನ್ನು ಫ್ರಿಡ್ಜ್‌ನಲ್ಲಿ ಇಡಬೇಕು. ಆಗ ಸಿಪ್ಪೆ ಮೃದುವಾಗುತ್ತದೆ, ಚಾಕು ಸಹಾಯದಿಂದ ಸುಲಭವಾಗಿ ತೆಗೆಯಬಹುದು.
  • ಶುಂಠಿ ಕತ್ತರಿಸುವ ಸಾಧನಗಳು ಮಾರುಕಟ್ಟೆಯಲ್ಲಿ ಸಿಗುತ್ತದೆ. ಇದನ್ನು ಬಳಸಿಕೊಂಡು ಶುಂಠಿಯ ಮೇಲ್ಪದರ ತೆಗೆಯುವುದು ಕಷ್ಟವೇನಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಡ್ರಮ್​ನಲ್ಲಿ ರಾಕೆಟ್ ಇಟ್ಟು ಪಟಾಕಿ ಸಿಡಿಸಿದ ಐಐಟಿ ವಿದ್ಯಾರ್ಥಿಗಳು
ಡ್ರಮ್​ನಲ್ಲಿ ರಾಕೆಟ್ ಇಟ್ಟು ಪಟಾಕಿ ಸಿಡಿಸಿದ ಐಐಟಿ ವಿದ್ಯಾರ್ಥಿಗಳು
ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಪಟಾಕಿ ಹೊಡೆಯುತ್ತಿದ್ದ ವ್ಯಕ್ತಿ ಸಾವು
ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಪಟಾಕಿ ಹೊಡೆಯುತ್ತಿದ್ದ ವ್ಯಕ್ತಿ ಸಾವು
ಚುನಾವಣೆಗೆ ಸಜ್ಜಾದ ಜಾರ್ಖಂಡ್​ನಲ್ಲಿ ಪ್ರಧಾನಿ ಮೋದಿ ಮೊದಲ ರ್ಯಾಲಿ
ಚುನಾವಣೆಗೆ ಸಜ್ಜಾದ ಜಾರ್ಖಂಡ್​ನಲ್ಲಿ ಪ್ರಧಾನಿ ಮೋದಿ ಮೊದಲ ರ್ಯಾಲಿ
ಲೋಕಾಯುಕ್ತ ನೋಟೀಸ್​​ನಿಂದ ಸಿಎಂ ಸಿದ್ದರಾಮಯ್ಯ ವಿಚಲಿತರಾದಂತೆ ಕಾಣುತ್ತಿದೆ!
ಲೋಕಾಯುಕ್ತ ನೋಟೀಸ್​​ನಿಂದ ಸಿಎಂ ಸಿದ್ದರಾಮಯ್ಯ ವಿಚಲಿತರಾದಂತೆ ಕಾಣುತ್ತಿದೆ!
ಜನರ ಕಷ್ಟ ಗೊತ್ತಿರುವ ಯೋಗೇಶ್ವರ್ ಚನ್ನಪಟ್ಟಣಕ್ಕೆ ರೆಡಿಮೇಡ್ ಗಂಡು: ಡಿಕೆಶಿ
ಜನರ ಕಷ್ಟ ಗೊತ್ತಿರುವ ಯೋಗೇಶ್ವರ್ ಚನ್ನಪಟ್ಟಣಕ್ಕೆ ರೆಡಿಮೇಡ್ ಗಂಡು: ಡಿಕೆಶಿ
ಆಗ್ರಾ ಬಳಿ ಮಿಗ್-29 ಫೈಟರ್ ಜೆಟ್ ಪತನ; ಪೈಲಟ್‌ಗಳು ಪಾರು
ಆಗ್ರಾ ಬಳಿ ಮಿಗ್-29 ಫೈಟರ್ ಜೆಟ್ ಪತನ; ಪೈಲಟ್‌ಗಳು ಪಾರು
ಆರತಿ ತಟ್ಟೆಗೆ ಹಾಕಲು ಮುಖಂಡನೊಬ್ಬ ಹಣ ನೀಡಿದರೂ ತೆಗೆದುಕೊಳ್ಳದ ನಿಖಿಲ್
ಆರತಿ ತಟ್ಟೆಗೆ ಹಾಕಲು ಮುಖಂಡನೊಬ್ಬ ಹಣ ನೀಡಿದರೂ ತೆಗೆದುಕೊಳ್ಳದ ನಿಖಿಲ್
ಹಾಸ್ಯದ ಪೆಟ್ಟೇ ದುಬಾರಿ ಆಯ್ತು; ಚೈತ್ರಾ-ಅನುಷಾ ಮಧ್ಯೆ ಘನಘೋರ ಫೈಟ್
ಹಾಸ್ಯದ ಪೆಟ್ಟೇ ದುಬಾರಿ ಆಯ್ತು; ಚೈತ್ರಾ-ಅನುಷಾ ಮಧ್ಯೆ ಘನಘೋರ ಫೈಟ್
ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದಾಗ ಒಂದು ಗುಂಪು ಅದ್ಯಾಕೆ ಗಲಾಟೆ ಮಾಡಿತೋ!
ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದಾಗ ಒಂದು ಗುಂಪು ಅದ್ಯಾಕೆ ಗಲಾಟೆ ಮಾಡಿತೋ!
ಟೀಂ ಇಂಡಿಯಾದ ಜಿಕೆ ಟೆಸ್ಟ್! ಯಾರು ಎಷ್ಟು ಬುದ್ಧಿವಂತರು ನೀವೇ ನೋಡಿ
ಟೀಂ ಇಂಡಿಯಾದ ಜಿಕೆ ಟೆಸ್ಟ್! ಯಾರು ಎಷ್ಟು ಬುದ್ಧಿವಂತರು ನೀವೇ ನೋಡಿ