ಜಗತ್ತು ಅಭಿವೃದ್ಧಿಯತ್ತ ಸಾಗುತ್ತಿದ್ದಂತೆ ಮಾನವನ ವಿವೇಚನಾರಹಿತ ಚಟುವಟಿಕೆಯಿಂದ ಸಾಗರಗಳ ಮಾಲಿನ್ಯದ ವೇಗವೂ ಹೆಚ್ಚಾಗುತ್ತಿದೆ. ಹೀಗಾಗಿ ವಿದ್ಯಾವಂತರೆನಿಸಿಕೊಂಡಿರುವ ಜನರುಗಳೇ ಸಮುದ್ರವನ್ನು ಕಲುಷಿತಗೊಳಿಸುತ್ತಿದ್ದಾರೆ. ಹೀಗಾಗಿ ಪ್ಲಾಸ್ಟಿಕ್ ಮಾಲಿನ್ಯ ಸಮುದ್ರಕ್ಕೆ ದೊಡ್ಡ ಮಟ್ಟದಲ್ಲಿ ಅಪಾಯವನ್ನು ಉಂಟು ಮಾಡಿದೆ. ಇದರಿಂದ ಪ್ರತಿ ವರ್ಷ 13 ಮಿಲಿಯನ್ ಟನ್ ಪ್ಲಾಸ್ಟಿಕ್ ಸಮುದ್ರವನ್ನು ಸೇರುತ್ತಿದೆ. ವಾರ್ಷಿಕವಾಗಿ ಸಾಗರದಲ್ಲಿ ವಾಸಿಸುತ್ತಿರುವ ಒಂದು ಲಕ್ಷಕ್ಕೂ ಅಧಿಕ ಸಮುದ್ರ ಜೀವಿಗಳು ಸಾಯುತ್ತಿವೆ. ಹೀಗಾಗಿ ಭೂಮಿಯ ಮೇಲ್ಮೈ ಮೇಲಿನ ಸುಮಾರು 71% ರಷ್ಟು ಭಾಗವನ್ನು ಈ ಸಾಗರಗಳು ಆವರಿಸಿದ್ದು, ಇದರ ರಕ್ಷಣೆಯೂ ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ಪ್ರತಿ ವರ್ಷ ಜೂನ್ 8 ರಂದು ವಿಶ್ವ ಸಾಗರ ದಿನವನ್ನು ಆಚರಿಸಲಾಗುತ್ತಿದೆ.
1992 ರಲ್ಲಿ ರಿಯೊ ಡಿ ಜನೈರೊದಲ್ಲಿ ನಡೆದ ‘ಪ್ಲಾನೆಟ್ ಅರ್ಥ್’ ವೇದಿಕೆಯಲ್ಲಿ ಪ್ರತಿ ವರ್ಷ ವಿಶ್ವ ಸಾಗರ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಕೆನಡಾದ ಅಂತರಾಷ್ಟ್ರೀಯ ಸಾಗರ ಅಭಿವೃದ್ಧಿ ಕೇಂದ್ರ ಮತ್ತು ಓಶಿಯನ್ ಇನ್ಸ್ಟಿಟ್ಯೂಟ್ ಆಫ್ ಕೆನಡಾ ಭೂ ಶೃಂಗಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಯಿತು. ಆದಾದ ಬಳಿಕ ಜಗತ್ತಿನಾದಂತ್ಯ ನಡೆಯುತ್ತಿರುವ ಸಾಗರ ರಕ್ಷಣೆಯ ಕುರಿತು ನಡೆಯುತ್ತಿರುವ ಕಾರ್ಯಕ್ರಗಳನ್ನು ವಿಶ್ವಸಂಸ್ಥೆಯು 2008 ರಲ್ಲಿ ಅಧಿಕೃತವಾಗಿ ಘೋಷಿಸಿತು. ಪ್ರತಿ ವರ್ಷ ಜೂನ್ 8 ರಂದು ದಿ ಓಷನ್ ಪ್ರಾಜೆಕ್ಟ್ ಮತ್ತು ವರ್ಲ್ಡ್ ಓಷನ್ ನೆಟ್ವರ್ಕ್ ಸಹಯೋಗದೊಂದಿಗೆ ಈ ದಿನವನ್ನು ಅಂತರಾಷ್ಟ್ರೀಯವಾಗಿ ಆಚರಿಸಲಾಯಿತು.
ಇದನ್ನೂ ಓದಿ: ಅತ್ತೆ ಸೊಸೆ ಜಗಳ ಶುರುವಾಗುವುದೇ ಇಲ್ಲಿಂದ!
ಸಾಗರವು ಭೂಮಿಯ ಹೆಚ್ಚಿನ ಜೀವವೈವಿಧ್ಯತೆಯ ನೆಲೆಯಾಗಿದೆ. ಅನೇಕ ಜೀವಿಗಳ ವಾಸಸ್ಥಾನವಾಗಿದ್ದು, ಮಾನವನ ಆಹಾರ ಮೂಲವು ಈ ಸಮುದ್ರವೇ ಆಗಿದೆ. ಅದಲ್ಲದೇ, ಆರ್ಥಿಕತೆಯ ಮೂಲವಾಗಿರುವ ಸಾಗರವನ್ನು ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ದಿನ ಹೊಂದಿದೆ. ಸುಸ್ಥಿರ ಅಭಿವೃದ್ಧಿಗೆ ಸಮುದ್ರವನ್ನು ಮತ್ತು ಇದರಾಳದಲ್ಲಿರುವ ಸಂಪನ್ಮೂಲಗಳನ್ನು ಸಂರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಹೀಗಾಗಿ ಈ ದಿನದಂದು ಸಮುದ್ರವನ್ನು ಸಂರಕ್ಷಿಸುವ ಬಗ್ಗೆ ಜಾಗೃತಿ ಅಭಿಯಾನಗಳು ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:17 pm, Fri, 7 June 24