ಜೀವನಶೈಲಿ: ನಿಮ್ಮ ಮಕ್ಕಳು ನಿದ್ರೆಯಿಂದ ದೂರವಾಗುತ್ತಿದ್ದಾರೆಯೇ? ತಜ್ಞರು ಏನು ಎಚ್ಚರಿಕೆ ನೀಡಿದ್ದಾರೆ ನೋಡಿ
Lifestyle: ಸ್ಮಾರ್ಟ್‌ಫೋನ್‌ಗಳು ಮತ್ತು ವಿವಿಧ ಗ್ಯಾಜೆಟ್‌ಗಳು ಅಂಗೈಗೆ ಬಂದ ಮೇಲೆ ಬಹುತೇಕ ಮಕ್ಕಳು ನಿದ್ರೆಯನ್ನು ಕಳೆದುಕೊಳ್ಳುತ್ತಿದ್ದಾರೆ. ನಿದ್ರೆಯಿಂದ ದೂರವಾಗುತ್ತಿದ್ದಾರೆ. ತಡರಾತ್ರಿಯಾದರೂ ಸ್ಮಾರ್ಟ್ ಪರದೆಗಳಿಗೆ ಅಂಟಿಕೊಂಡಿರುತ್ತಾರೆ. ಇದರಿಂದಾಗಿ ದೊಡ್ಡವರಿಗೆ ಮಾತ್ರ ಸೀಮಿತವಾಗಿದ್ದ ನಿದ್ರಾಹೀನತೆ ಇಂದು ಮಕ್ಕಳನ್ನೂ ಕಾಡುತ್ತಿದೆ!
ಸ್ಮಾರ್ಟ್‌ಫೋನ್‌ಗಳು ಮತ್ತು ವಿವಿಧ ಗ್ಯಾಜೆಟ್‌ಗಳು ಅಂಗೈಗೆ ಬಂದ ಮೇಲೆ ಬಹುತೇಕ ಮಕ್ಕಳು ನಿದ್ರೆಯನ್ನು ಕಳೆದುಕೊಳ್ಳುತ್ತಿದ್ದಾರೆ. ನಿದ್ರೆಯಿಂದ ದೂರವಾಗುತ್ತಿದ್ದಾರೆ. ತಡರಾತ್ರಿಯಾದರೂ ಸ್ಮಾರ್ಟ್ ಪರದೆಗಳಿಗೆ ಅಂಟಿಕೊಂಡಿರುತ್ತಾರೆ. ಇದರಿಂದಾಗಿ ದೊಡ್ಡವರಿಗೆ ಮಾತ್ರ ಸೀಮಿತವಾಗಿದ್ದ ನಿದ್ರಾಹೀನತೆ ಇಂದು ಮಕ್ಕಳನ್ನೂ (Children) ಕಾಡುತ್ತಿದೆ! ನಿದ್ರೆಯ (Sleeping) ಸಮಸ್ಯೆಯು ವಯಸ್ಕರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವಂತೆ, ಮಕ್ಕಳ ಮೇಲೆ ಗಂಭೀರ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಅದರಲ್ಲೂ ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ (Mental Health) ನಿದ್ದೆಯ ಕೊರತೆ ತೀವ್ರ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ನಿದ್ರಾಹೀನತೆಯು ಮಕ್ಕಳಲ್ಲಿ ಯಾವ ರೀತಿಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂಬುದನ್ನು ಈಗ ತಿಳಿಯೋಣ.
* ಮಕ್ಕಳು ಸರಿಯಾಗಿ ನಿದ್ದೆ ಮಾಡದಿದ್ದರೆ ಅದು ಅವರ ಓದಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ದುರ್ಬಲಗೊಂಡ ಏಕಾಗ್ರತೆಯಿಂದಾಗಿ ಅಧ್ಯಯನದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಪ್ರತಿದಿನ ಕನಿಷ್ಠ 8 ಗಂಟೆಗಳ ನಿದ್ದೆಯು ಮೆದುಳನ್ನು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಇಲ್ಲದಿದ್ದರೆ ನಕಾರಾತ್ಮಕ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ತಜ್ಞರು.
* ಮಕ್ಕಳಲ್ಲಿ ನಿದ್ರೆಯ ಕೊರತೆಯು ಜ್ಞಾಪಕಶಕ್ತಿಯ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞರು. ಓದಿದ್ದನ್ನೆಲ್ಲ ಮರೆತು ಬಿಡುತ್ತೀರಿ ಎನ್ನುತ್ತಾರೆ.
* ಸರಿಯಾದ ನಿದ್ರೆಯ ಕೊರತೆಯು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸುತ್ತಾರೆ. ಇದರಿಂದಾಗಿ ಚಿಕ್ಕ ಚಿಕ್ಕ ವಿಷಯಗಳಿಗೆ ಕೋಪಗೊಳ್ಳುವುದು, ಸಿಟ್ಟಿಗೆದ್ದು ಎಲ್ಲರನ್ನೂ ಬೈಯುವುದು ಮುಂತಾದ ಲಕ್ಷಣಗಳು ಮಕ್ಕಳಲ್ಲಿ ಕಂಡುಬರುತ್ತವೆ. ನಿದ್ರೆಯ ಕೊರತೆಯು ಚಿಕ್ಕ ಮಕ್ಕಳ ಮಾನಸಿಕ ನಡವಳಿಕೆಯ ಮೇಲೆ ಆಳವಾದ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಲಾಗಿದೆ.
* ನಿದ್ರೆಯ ಕೊರತೆಯು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಮಗುವಿಗೆ ಸಾಕಷ್ಟು ನಿದ್ರೆ ಬರದಿದ್ದರೆ ಮಗುವಿನ ಬೆಳವಣಿಗೆ ನಿಧಾನವಾಗುತ್ತದೆ.
ಇವುಗಳನ್ನು ಅನುಸರಿಸಿ..
ಗ್ಯಾಜೆಟ್ ಗಳನ್ನು ಮಕ್ಕಳಿಂದ ಆದಷ್ಟು ದೂರವಿಡಬೇಕು ಎನ್ನುತ್ತಾರೆ ತಜ್ಞರು. ಅದರಲ್ಲೂ ರಾತ್ರಿ ಮಲಗುವ ಮುನ್ನ ಸ್ಮಾರ್ಟ್ ಫೋನ್ ಬಳಸುವುದರಿಂದ ಅವರ ಕಣ್ಣುಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದು ನಿದ್ರಾಹೀನತೆಗೆ ಕಾರಣವಾಗುತ್ತದೆ. ಹಾಗೆಯೇ ಟಿವಿ ಪರದೆಗೆ ಅಂಟಿಕೊಳ್ಳದೆ ಸ್ವಲ್ಪ ದೈಹಿಕ ಚಟುವಟಿಕೆಯನ್ನು ಮಾಡಲು ಪ್ರಯತ್ನಿಸಬೇಕು. ಹೊರಗಡೆ ಮೈದಾನದಲ್ಲಿ ಆಟವಾಡುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಮಕ್ಕಳು ಸುಸ್ತಾಗಿ ರಾತ್ರಿ ಬೇಗ ಮಲಗುತ್ತಾರೆ.
ಆರೋಗ್ಯ ಕುರಿತಾದ ಹೆಚ್ಚಿನ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ