ಹಾಲು ಕುಡಿಯುವುದರಿಂದ ಮೂಳೆ ದುರ್ಬಲವಾಗುತ್ತಾ?; ಮನೇಕಾ ಗಾಂಧಿ ಹೇಳಿದ್ದೇನು?
ಹಾಲು ಕುಡಿಯುವುದರಿಂದ ನಮ್ಮ ದೇಹಕ್ಕೆ ಬೇಕಾದ ಕ್ಯಾಲ್ಸಿಯಂ ಸಿಗುವುದರಿಂದ ಮೂಳೆಗಳು ಸದೃಢವಾಗುತ್ತದೆ ಎಂಬುದು ಮೊದಲಿನಿಂದಲೂ ಇರುವ ನಂಬಿಕೆ. ವೈದ್ಯರು ಕೂಡ ಇದನ್ನೇ ಹೇಳುತ್ತಾರೆ. ಆದರೆ, ಬಿಜೆಪಿ ನಾಯಕಿ ಮನೇಕಾ ಗಾಂಧಿ ಹೇಳಿರುವ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗಿದೆ. ಹಾಗಾದರೆ, ಅವರು ಹೇಳಿದ ವಿಷಯಗಳೇನು? ಹಾಲು ನಮ್ಮ ಆರೋಗ್ಯಕ್ಕೆ ನಿಜಕ್ಕೂ ಒಳ್ಳೆಯದಾ?
ಹಾಲು ಕುಡಿಯುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಹೆಚ್ಚಾಗುತ್ತದೆ ಎಂಬುದು ಸುಳ್ಳಾ? ಹಾಲು ನಮ್ಮ ದೇಹದ ಕ್ಯಾಲ್ಸಿಯಂ ಅನ್ನು ಖಾಲಿ ಮಾಡುತ್ತಿದೆಯೇ? ಈ ಬಗ್ಗೆ ಬಿಜೆಪಿ ನಾಯಕಿ ಮನೇಕಾ ಗಾಂಧಿಯವರ ಇತ್ತೀಚಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅತಿ ಹೆಚ್ಚು ಹಾಲು ಕುಡಿಯುವವರಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆ ಇರುತ್ತದೆ ಎಂದು ಅವರು ಹೇಳಿದ್ದಾರೆ. ಹಾಲು ಲ್ಯಾಕ್ಟಿಕ್ ಆಮ್ಲದ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದು ಅವರು ವಾದಿಸಿದ್ದಾರೆ. ಇದು ದೇಹವು ಮೂಳೆಗಳಿಂದ ಕ್ಯಾಲ್ಸಿಯಂ ಅನ್ನು ಹೀರಿಕೊಂಡು, ಮೂಳೆಗಳನ್ನು ದುರ್ಬಲಗೊಳಿಸುತ್ತದೆ ಎಂದಿದ್ದಾರೆ.
ಹೀಗಾಗಿ, ಹಾಲು ಕ್ಯಾಲ್ಸಿಯಂನ ಶ್ರೀಮಂತ ಮೂಲವಾಗಿದೆಯೇ ಅಥವಾ ಇಲ್ಲವೇ? ಎಂಬ ಕುರಿತು ಇದೀಗ ಚರ್ಚೆಗಳು ಶುರುವಾಗಿವೆ. ಹಾಲು ನಮ್ಮ ದೇಹಕ್ಕೆ ಸಾಕಷ್ಟು ಕ್ಯಾಲ್ಸಿಯಂ ಅನ್ನು ಒದಗಿಸಲು ಸಹಾಯ ಮಾಡುತ್ತದೆ ಎಂಬುದು ಹಳೆಯ ಕಾಲದ ನಂಬಿಕೆ. ಆದರೆ, ಮನೇಕಾ ಗಾಂಧಿ ಹೇಳಿರುವ ಮಾತು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಹೆಚ್ಚು ಹಾಲು ಸೇವಿಸುವವರಲ್ಲಿ ಕಡಿಮೆ ಪ್ರಮಾಣದ ಕ್ಯಾಲ್ಸಿಯಂ ಇರುತ್ತದೆ ಎಂದು ಅವರು ಹೇಳಿದ್ದಾರೆ. ಇದು ಲ್ಯಾಕ್ಟಿಕ್ ಆಮ್ಲದ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: Milk Tea: ಪ್ರತಿದಿನ ಹಾಲು ಹಾಕಿದ ಟೀ ಕುಡಿಯುವ ಮುನ್ನ ಈ ಬಗ್ಗೆಯೂ ಯೋಚಿಸಿ
ಈ ಬಗ್ಗೆ ಇತರೆ ವೈದ್ಯರು ಕೂಡ ಹೇಳಿಕೆಗಳನ್ನು ನೀಡಿದ್ದು, ಹಾಲು ಕುಡಿಯುವುದರಿಂದ ದೇಹದಲ್ಲಿ ಲ್ಯಾಕ್ಟಿಕ್ ಆಸಿಡ್ ಶೇಖರಣೆಗೆ ಕಾರಣವಾಗಬಹುದು. ಅದರ ಕ್ಯಾಲ್ಸಿಯಂ ಅಂಶ ಮತ್ತು ಇತರ ಪೌಷ್ಟಿಕಾಂಶದ ಪ್ರಯೋಜನಗಳಿಗಾಗಿ ಲೇಬಲ್ ಮಾಡಲಾಗಿದ್ದರೂ ಹಾಲು ಲ್ಯಾಕ್ಟೋಸ್ನಿಂದ ತುಂಬಿರುತ್ತದೆ. ಅದು ದೇಹದಲ್ಲಿ ವಿಭಜನೆಯಾದಾಗ ಲ್ಯಾಕ್ಟಿಕ್ ಆಮ್ಲದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಹೀಗಾಗಿ, ಇದು ದೇಹದಲ್ಲಿ ಲ್ಯಾಕ್ಟಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸಬಹುದು ಮತ್ತು ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು ಎಂದಿದ್ದಾರೆ.
ಇದನ್ನೂ ಓದಿ: ರಾತ್ರಿ ಹಾಲು ಕುಡಿದು ಮಲಗಿದರೆ ಜೀರ್ಣಕ್ರಿಯೆ ಸುಲಭವಾಗುತ್ತಾ?
ಲ್ಯಾಕ್ಟೋಸ್ ಅಸಹಿಷ್ಣುತೆ ಅಥವಾ ಡೈರಿ ಉತ್ಪನ್ನಗಳಿಗೆ ಸೂಕ್ಷ್ಮವಾಗಿರುವವರಿಗೆ, ಹಾಲು ಕುಡಿಯುವುದು ಒಳ್ಳೆಯದಲ್ಲ ಎಂದು ವೈದ್ಯರು ಹೇಳಿದ್ದಾರೆ. ಅತಿಯಾದ ಲ್ಯಾಕ್ಟಿಕ್ ಆಮ್ಲವು ಸ್ನಾಯು ಸೆಳೆತ, ಆಯಾಸ ಮತ್ತು ಆಮ್ಲೀಯತೆಯಂತಹ ಅಹಿತಕರ ಲಕ್ಷಣಗಳನ್ನು ಉಂಟುಮಾಡುತ್ತದೆ. ಆದ್ದರಿಂದ, ಲ್ಯಾಕ್ಟಿಕ್ ಆಮ್ಲದ ಸಂಗ್ರಹವನ್ನು ಕಡಿಮೆ ಮಾಡಲು ಬಯಸುವವರಿಗೆ ಬಾದಾಮಿ ಹಾಲಿನಂತಹ ಆಯ್ಕೆಗಳು ಪ್ರಯೋಜನಕಾರಿಯಾಗಿದೆ.
ಹಾಲು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ ಎಂಬುದು ಸತ್ಯ. ಆದರೆ ಕ್ಯಾಲ್ಸಿಯಂನ ಇತರ ಮೂಲಗಳೂ ಇವೆ. ಎಂಬುದು ನಿಮಗೆ ಗೊತ್ತಿರುವುದು ಉತ್ತಮ. ಹಸಿರು ಸೊಪ್ಪಿನ ತರಕಾರಿಗಳಾದ ಬ್ರೊಕೊಲಿ ಮತ್ತು ತೋಫು ಕೂಡ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಅನ್ನು ಒದಗಿಸುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ