ಬಾದಾಮಿ ಹಾಲು ಪಕ್ಕಕ್ಕಿಡಿ, ವಾಲ್‌ನಟ್ ಹಾಲು ಕುಡಿದು ನೋಡಿ!
ವಾಲ್‌ನಟ್ಸ್ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆಲವು ಜನರು ವಾಲ್‌ನಟ್ ಅನ್ನು ನೆನೆಸಿಟ್ಟು ಬೆಳಗ್ಗೆ ಸೇವಿಸುತ್ತಾರೆ. ಇನ್ನು ಕೆಲವರು ವಾಲ್‌ನಟ್ ಅನ್ನು ಹಾಗೆಯೇ ಸ್ನಾಕ್ಸ್ ರೀತಿಯಲ್ಲಿ ಸೇವಿಸುತ್ತಾರೆ. ಮೆದುಳಿನ ಆರೋಗ್ಯದಿಂದ ಹಿಡಿದು ಜೀರ್ಣಕ್ರಿಯೆಯವರೆಗೆ ವಾಲ್‌ನಟ್ಸ್ ಪ್ರಯೋಜನ ಒಂದೆರಡಲ್ಲ.
ವಾಲ್‌ನಟ್ಸ್ ನಮ್ಮ ಆರೋಗ್ಯವನ್ನು ಸುಧಾರಿಸುವ ಅನೇಕ ಪೌಷ್ಟಿಕಾಂಶಗಳನ್ನು ಹೊಂದಿದೆ. ತೀರಾ ರುಚಿಯಾದ ಡ್ರೈಫ್ರೂಟ್ ಅಲ್ಲದಿದ್ದರೂ ಮೆದುಳಿನ ಆಕಾರದಲ್ಲಿರುವ ಈ ವಾಲ್‌ನಟ್ (Walnuts) ಮೆದುಳಿನ ಬೆಳವಣಿಗೆಗೆ ಬಹಳ ಪ್ರಯೋಜನಕಾರಿ. ಹೀಗಾಗಿ, ಮಕ್ಕಳಿಗೆ ಹೆಚ್ಚು ವಾಲ್‌ನಟ್ ನೀಡಲು ವೈದ್ಯರು ಸೂಚಿಸುತ್ತಾರೆ. ದಿನವೂ ಬೆಳಗ್ಗೆ ಎದ್ದಕೂಡಲೆ ಅಥವಾ ಸಂಜೆಯ ವೇಳೆಗೆ ನೀವು ಬಾದಾಮಿ ಹಾಲು ಕುಡಿಯುವ ಅಭ್ಯಾಸವನ್ನು ಹೊಂದಿದ್ದರೆ ಅದರ ಬದಲು ವಾಲ್‌ನಟ್ ಹಾಲು (Walnut Milk) ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.
ವಾಲ್‌ನಟ್ಸ್ ಮೂಳೆಗಳು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ವಾಲ್‌ನಟ್ಸ್ ಹಾಲು ವಾಲ್‌ನಟ್ ಮತ್ತು ನೀರಿನಿಂದ ಮಾಡಿದ ಸಸ್ಯ ಆಧಾರಿತ ಹಾಲಿನ ಪರ್ಯಾಯವಾಗಿದೆ. ವಾಲ್‌ನಟ್ಸ್‌ನ ಪೌಷ್ಟಿಕಾಂಶದ ಪ್ರೊಫೈಲ್‌ನಿಂದಾಗಿ ಇದು ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
ವಾಲ್‌ನಟ್ ಹಾಲು ಕುಡಿಯುವುದರಿಂದ ಆಗುವ 6 ಪ್ರಯೋಜನಗಳು:
ಪೋಷಕಾಂಶಭರಿತ ಹಾಲು:
ಒಮೆಗಾ-3 ಕೊಬ್ಬಿನಾಮ್ಲಗಳು, ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಸೇರಿದಂತೆ ವಾಲ್‌ನಟ್‌ಗಳಲ್ಲಿ ಕಂಡುಬರುವ ಅನೇಕ ಪೋಷಕಾಂಶಗಳನ್ನು ವಾಲ್‌ನಟ್ ಹಾಲು ಉಳಿಸಿಕೊಂಡಿದೆ. ಇದರಲ್ಲಿರುವ ಒಮೆಗಾ -3 ಕೊಬ್ಬಿನಾಮ್ಲ ನಮ್ಮ ಹೃದಯದ ಆರೋಗ್ಯ ಮತ್ತು ಮೆದುಳಿನ ಕಾರ್ಯಕ್ಕೆ ಪ್ರಯೋಜನಕಾರಿ.
ಇದನ್ನೂ ಓದಿ: ಹೆರಿಗೆ ಬಳಿಕ ಆಲಿಯಾ ಭಟ್ ತೂಕ ಇಳಿಸಿದ್ದು ಹೇಗೆ?
ಹೃದಯದ ಆರೋಗ್ಯ:
ವಾಲ್‌ನಟ್ಸ್‌ನಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ಹೃದ್ರೋಗದ ಅಪಾಯವನ್ನು ಕಡಿಮೆಗೊಳಿಸುತ್ತವೆ. ಸಮತೋಲಿತ ಆಹಾರದ ಭಾಗವಾಗಿ ವಾಲ್‌ನಟ್ ಹಾಲನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ರಕ್ತನಾಳಗಳ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.
ಉತ್ಕರ್ಷಣ ನಿರೋಧಕ ಸಮೃದ್ಧ:
ವಾಲ್‌ನಟ್‌ಗಳು ಪಾಲಿಫಿನಾಲ್‌ಗಳು ಮತ್ತು ವಿಟಮಿನ್ ಇಯಂತಹ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇದು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತದ ವಿರುದ್ಧ ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದು ಜೀವಕೋಶದ ಹಾನಿಗೆ ಕಾರಣವಾಗುವ ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುತ್ತದೆ.
ಮೂಳೆ ಆರೋಗ್ಯ:
ವಾಲ್‌ನಟ್ ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂನಂತಹ ಖನಿಜಗಳಿವೆ. ಇದು ಬಲವಾದ ಮೂಳೆಗಳನ್ನು ಕಾಪಾಡಿಕೊಳ್ಳಲು ಮುಖ್ಯವಾಗಿದೆ. ವಾಲ್‌ನಟ್ ಹಾಲನ್ನು ಸೇವಿಸುವುದರಿಂದ ಮೂಳೆಯ ಆರೋಗ್ಯ ಉತ್ತಮವಾಗುತ್ತದೆ. ಇದು ಆಸ್ಟಿಯೊಪೊರೋಸಿಸ್ನಂತಹ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Black Coffee Benefits: ತೂಕ ಇಳಿಸಬೇಕಾ? ದಿನವೂ ಬ್ಲಾಕ್ ಕಾಫಿ ಕುಡಿಯಿರಿ
ರಕ್ತದಲ್ಲಿನ ಸಕ್ಕರೆ ನಿರ್ವಹಣೆ:
ವಾಲ್‌ನಟ್ ಫೈಬರ್ ಅಂಶದಿಂದ ಸಮೃದ್ಧವಾಗಿದೆ. ಇದು ಕಡಿಮೆ ಗ್ಲೈಸೆಮಿಕ್ ಆಹಾರವಾಗಿದೆ. ಆದ್ದರಿಂದ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇದು ಅತ್ಯುತ್ತಮ ಆಹಾರಗಳಲ್ಲಿ ಒಂದಾಗಿದೆ.
ಜೀರ್ಣಕಾರಿ ಆರೋಗ್ಯ:
ಫೈಬರ್‌ನ ಹೆಚ್ಚಿನ ಅಂಶದಿಂದಾಗಿ ಇದು ಕರುಳಿನ ಚಲನೆಗೆ ಸಹಾಯ ಮಾಡುತ್ತದೆ, ಮಲಬದ್ಧತೆಯನ್ನು ನಿವಾರಿಸುತ್ತದೆ. ವಾಲ್‌ನಟ್ಸ್ ಇತರ ಜೀರ್ಣಕಾರಿ ಸಮಸ್ಯೆಗಳನ್ನು ಪರಿಹರಿಸುತ್ತದೆ. ಆಹಾರದ ಫೈಬರ್ ಆರೋಗ್ಯಕರ ಕರುಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ