ಅತ್ತೆ ಸೊಸೆ ಜಗಳ ಶುರುವಾಗುವುದೇ ಇಲ್ಲಿಂದ!

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 07, 2024 | 4:51 PM

ಕುಟುಂಬವೆಂದ ಮೇಲೆ ಜಗಳ ಸರ್ವೇ ಸಾಮಾನ್ಯ. ಆದರೆ ಅತ್ತೆ ಸೊಸೆ ಜಗಳ ವೆಂದರೆ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಆದರೆ ಮನೆಗೆ ಸೊಸೆ ಬಂದ ಕೂಡಲೇ ಮಗನನ್ನು ನನ್ನಿಂದ ದೂರ ಮಾಡುತ್ತಾಳೆ ಎನ್ನುವ ಭಯ ಕಾಡುವುದು ಸಹಜ. ಇತ್ತ ಅತ್ತೆಯೆಂದರೆ ವಿಲನ್ ಎಂದು ನೋಡುವ ಸೊಸೆ. ಇವರಿಬ್ಬರ ನಡುವೆ ಗಂಡನು ಮಾತ್ರ ಜೀವನ ಪರ್ಯಂತ ಒದ್ದಾಡಬೇಕಾಗುತ್ತದೆ. ಆದರೆ ಹೆಚ್ಚಿನವರ ಮನೆಯಲ್ಲಿ ಅತ್ತೆ ಸೊಸೆ ಜಗಳವು ಈ ಕಾರಣಕ್ಕೆ ಶುರುವಾಗುತ್ತದೆಯಂತೆ.

ಅತ್ತೆ ಸೊಸೆ ಜಗಳ ಶುರುವಾಗುವುದೇ ಇಲ್ಲಿಂದ!
Follow us on

ವೈವಾಹಿಕ ಜೀವನದಲ್ಲಿ ಎಲ್ಲವೂ ಸರಿಯಿದ್ದರೂ ಅದೆಷ್ಟೋ ಮನೆಗಳಲ್ಲಿ ಅತ್ತೆ ಸೊಸೆ ನಡುವಿನ ಸಂಬಂಧವು ಸರಿ ಇರುವುದೇ ಇಲ್ಲ. ಹೌದು, ಈ ಅತ್ತೆ ಸೊಸೆ ಒಂದೇ ಮನೆಯಲ್ಲಿ ಇದ್ದ ಮೇಲೆ ಜಗಳ, ಗಲಾಟೆ ಮಾಮೂಲಿ. ಸಣ್ಣ-ಪುಟ್ಟ ವಿಷಯಕ್ಕೂ ಇಬ್ಬರ ನಡುವೆ ಜಗಳಗಳು ನಡೆಯುತ್ತಲೇ ಇರುತ್ತದೆ. ಇದ್ರಿಂದ ಮನೆಯ ನೆಮ್ಮದಿಯಂತೂ ಹಾಳು, ಅದಲ್ಲದೇ ಅತ್ತೆ ಸೊಸೆಯಿಬ್ಬರೂ ಆಡಿಕೊಳ್ಳುವ ಬಾಯಿಗೂ ಸಿಕ್ಕಿಕೊಳ್ಳಬೇಕಾಗುತ್ತದೆ.

ಅತ್ತೆ ಸೊಸೆ ಜಗಳಕ್ಕೆ ಕಾರಣಗಳಿವು

  • ಸೊಸೆಯನ್ನು ಒಪ್ಪಿಕೊಳ್ಳದ ಅತ್ತೆ : ಒಂದು ವೇಳೆ ಮಗನದ್ದು ಪ್ರೇಮ ವಿವಾಹವಾದರೆ, ಅತ್ತೆ ಮನಸ್ಸಿನಲ್ಲಿ ತಾನು ನೋಡಿದ ಹುಡುಗಿಯನ್ನು ಮಗನು ಮದುವೆಯಾಗಲಿಲ್ಲ ಎನ್ನುವುದು ಸದಾ ಕಾಡುತ್ತಿರುತ್ತದೆ. ಹೀಗಾಗಿ ಅತ್ತೆಯೂ ಸೊಸೆಯನ್ನು ಒಪ್ಪಿಕೊಳ್ಳಲು ಸಿದ್ಧಳಿರುವುದಿಲ್ಲ. ಸೊಸೆಯೂ ಮಾಡುವ ಎಲ್ಲಾ ಕೆಲಸದಲ್ಲಿಯೂ ತಪ್ಪನ್ನು ಹುಡುಕುತ್ತ, ಅದೇ ಜಗಳಕ್ಕೆ ಕಾರಣವಾಗುತ್ತದೆ.
  • ಅಸ್ತಿತ್ವ ಕಳೆದುಕೊಳ್ಳುವ ಭಯ : ಇಷ್ಟು ದಿನ ಏನೇ ಮಾಡುವುದಾದರೂ ತನ್ನನ್ನು ಕೇಳುತ್ತಿದ್ದ ಮಗ, ಆದರೆ ಈಗ ಪತ್ನಿ ಮಾತು ಕೇಳುತ್ತಾನೆ. ತನ್ನ ಮಾತಿಗೆ ಬೆಲೆಯಿಲ್ಲ, ತನಗೆ ಅಸ್ತಿತ್ವವೇ ಇಲ್ಲ, ಸೊಸೆಯೂ ನನ್ನಿಂದ ಮಗನನ್ನು ದೂರ ಮಾಡುತ್ತಿದ್ದಾಳೆ ಎನ್ನುವ ಭಯದಿಂದಲೇ ಅತ್ತೆ ಸೊಸೆ ನಡುವೆ ಜಗಳಗಳು ನಡೆಯುತ್ತವೆ.
  • ತಾವೇ ಸರಿ ಎನ್ನುವ ಮನೋಭಾವ : ಅತ್ತೆ ಸೊಸೆ ಇಬ್ಬರೂ ಕೂಡ ತಾವೇ‌ ಸರಿ, ತಮ್ಮಿಂದ ಏನೂ ತಪ್ಪು ಆಗಿಯೇ ಇಲ್ಲ ಎಂದುಕೊಳ್ಳುವುದರಿಂದಲೇ ಹೆಚ್ಚಿನ ಮನೆಯಲ್ಲಿ ಜಗಳಗಳು ಆರಂಭವಾಗುತ್ತದೆ. ಇಲ್ಲಿ ಅತ್ತೆ ಸೊಸೆ ಇಬ್ಬರೂ ಕೂಡ ತಾವೇ ಸರಿಯೆಂದುಕೊಳ್ಳದೇ ತಪ್ಪಿದ್ದರೆ ಒಪ್ಪಿಕೊಂಡು ಹೊಂದಿಕೊಂಡು ಹೋಗುವುದು ಮುಖ್ಯ.
  • ಅಧಿಕಾರ ಸೊಸೆ ಪಾಲಾದರೆ ಎನ್ನುವ ಆತಂಕ : ಮನೆಯ ಎಲ್ಲಾ ಆಗು ಹೋಗುಗಳನ್ನು ನೋಡಿಕೊಳ್ಳುತ್ತಿದ್ದ ಅತ್ತೆಯೂ, ಮಗನಿಗೆ ಮದುವೆಯಾದ ಕೂಡಲೇ ಎಲ್ಲಾ ಅಧಿಕಾರವು ಸೊಸೆಯ ಪಾಲಾಗುತ್ತದೆ ಎನ್ನುವ ಭಯವಿರುತ್ತದೆ. ಇದನ್ನು ಯಾರೊಂದಿಗೂ ಹೇಳಿಕೊಳ್ಳಲಾಗದೇ ಅತ್ತೆಯೂ ಸೊಸೆಯೊಂದಿಗೆ ಜಗಳಕ್ಕೆ ಇಳಿಯಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: