World Oceans Day 2024 : ನಾವು ಬದುಕೋಣ, ಸಾಗರದಾಳದಲ್ಲಿರುವ ಜೀವಿಗಳನ್ನು ಬದುಕಲು ಬಿಡೋಣ

ಹಲವಾರು ಜೀವಿಗಳಿಗೆ ಆಶ್ರಯತಾಣವಾಗಿರುವ ಸಮುದ್ರವನ್ನು ತನ್ನ ಸ್ವಾರ್ಥದ ಚಟುವಟಿಕೆಗಳಿಗಾಗಿ ಕಲುಷಿತ ಮಾಡುತ್ತಿದ್ದಾನೆ. ಈ ಸಾಗರಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಮುಖ್ಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಸದುದ್ದೇಶದಿಂದ ಜೂನ್ 8 ಅನ್ನು ವಿಶ್ವ ಸಾಗರ ದಿನ ಎಂದು ಆಚರಿಸಲಾಗುತ್ತಿದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಮಾಹಿತಿಯೂ ಇಲ್ಲಿದೆ.

World Oceans Day 2024 : ನಾವು ಬದುಕೋಣ, ಸಾಗರದಾಳದಲ್ಲಿರುವ ಜೀವಿಗಳನ್ನು ಬದುಕಲು ಬಿಡೋಣ
World Oceans Day 2024
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on:Jun 07, 2024 | 6:25 PM

ಜಗತ್ತು ಅಭಿವೃದ್ಧಿಯತ್ತ ಸಾಗುತ್ತಿದ್ದಂತೆ ಮಾನವನ ವಿವೇಚನಾರಹಿತ ಚಟುವಟಿಕೆಯಿಂದ ಸಾಗರಗಳ ಮಾಲಿನ್ಯದ ವೇಗವೂ ಹೆಚ್ಚಾಗುತ್ತಿದೆ. ಹೀಗಾಗಿ ವಿದ್ಯಾವಂತರೆನಿಸಿಕೊಂಡಿರುವ ಜನರುಗಳೇ ಸಮುದ್ರವನ್ನು ಕಲುಷಿತಗೊಳಿಸುತ್ತಿದ್ದಾರೆ. ಹೀಗಾಗಿ ಪ್ಲಾಸ್ಟಿಕ್ ಮಾಲಿನ್ಯ ಸಮುದ್ರಕ್ಕೆ ದೊಡ್ಡ ಮಟ್ಟದಲ್ಲಿ ಅಪಾಯವನ್ನು ಉಂಟು ಮಾಡಿದೆ. ಇದರಿಂದ ಪ್ರತಿ ವರ್ಷ 13 ಮಿಲಿಯನ್ ಟನ್ ಪ್ಲಾಸ್ಟಿಕ್ ಸಮುದ್ರವನ್ನು ಸೇರುತ್ತಿದೆ. ವಾರ್ಷಿಕವಾಗಿ ಸಾಗರದಲ್ಲಿ ವಾಸಿಸುತ್ತಿರುವ ಒಂದು ಲಕ್ಷಕ್ಕೂ ಅಧಿಕ ಸಮುದ್ರ ಜೀವಿಗಳು ಸಾಯುತ್ತಿವೆ. ಹೀಗಾಗಿ ಭೂಮಿಯ ಮೇಲ್ಮೈ ಮೇಲಿನ ಸುಮಾರು 71% ರಷ್ಟು ಭಾಗವನ್ನು ಈ ಸಾಗರಗಳು ಆವರಿಸಿದ್ದು, ಇದರ ರಕ್ಷಣೆಯೂ ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ಪ್ರತಿ ವರ್ಷ ಜೂನ್ 8 ರಂದು ವಿಶ್ವ ಸಾಗರ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ಸಾಗರ ದಿನದ ಇತಿಹಾಸ:World Oceans Day 2024

1992 ರಲ್ಲಿ ರಿಯೊ ಡಿ ಜನೈರೊದಲ್ಲಿ ನಡೆದ ‘ಪ್ಲಾನೆಟ್ ಅರ್ಥ್’ ವೇದಿಕೆಯಲ್ಲಿ ಪ್ರತಿ ವರ್ಷ ವಿಶ್ವ ಸಾಗರ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಕೆನಡಾದ ಅಂತರಾಷ್ಟ್ರೀಯ ಸಾಗರ ಅಭಿವೃದ್ಧಿ ಕೇಂದ್ರ ಮತ್ತು ಓಶಿಯನ್ ಇನ್ಸ್ಟಿಟ್ಯೂಟ್ ಆಫ್ ಕೆನಡಾ ಭೂ ಶೃಂಗಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಯಿತು. ಆದಾದ ಬಳಿಕ ಜಗತ್ತಿನಾದಂತ್ಯ ನಡೆಯುತ್ತಿರುವ ಸಾಗರ ರಕ್ಷಣೆಯ ಕುರಿತು ನಡೆಯುತ್ತಿರುವ ಕಾರ್ಯಕ್ರಗಳನ್ನು ವಿಶ್ವಸಂಸ್ಥೆಯು 2008 ರಲ್ಲಿ ಅಧಿಕೃತವಾಗಿ ಘೋಷಿಸಿತು. ಪ್ರತಿ ವರ್ಷ ಜೂನ್ 8 ರಂದು ದಿ ಓಷನ್ ಪ್ರಾಜೆಕ್ಟ್ ಮತ್ತು ವರ್ಲ್ಡ್ ಓಷನ್ ನೆಟ್ವರ್ಕ್ ಸಹಯೋಗದೊಂದಿಗೆ ಈ ದಿನವನ್ನು ಅಂತರಾಷ್ಟ್ರೀಯವಾಗಿ ಆಚರಿಸಲಾಯಿತು.

ಇದನ್ನೂ ಓದಿ: ಅತ್ತೆ ಸೊಸೆ ಜಗಳ ಶುರುವಾಗುವುದೇ ಇಲ್ಲಿಂದ!

ವಿಶ್ವ ಸಾಗರ ದಿನದ ಮಹತ್ವ:

ಸಾಗರವು ಭೂಮಿಯ ಹೆಚ್ಚಿನ ಜೀವವೈವಿಧ್ಯತೆಯ ನೆಲೆಯಾಗಿದೆ. ಅನೇಕ ಜೀವಿಗಳ ವಾಸಸ್ಥಾನವಾಗಿದ್ದು, ಮಾನವನ ಆಹಾರ ಮೂಲವು ಈ ಸಮುದ್ರವೇ ಆಗಿದೆ. ಅದಲ್ಲದೇ, ಆರ್ಥಿಕತೆಯ ಮೂಲವಾಗಿರುವ ಸಾಗರವನ್ನು ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ದಿನ ಹೊಂದಿದೆ. ಸುಸ್ಥಿರ ಅಭಿವೃದ್ಧಿಗೆ ಸಮುದ್ರವನ್ನು ಮತ್ತು ಇದರಾಳದಲ್ಲಿರುವ ಸಂಪನ್ಮೂಲಗಳನ್ನು ಸಂರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಹೀಗಾಗಿ ಈ ದಿನದಂದು ಸಮುದ್ರವನ್ನು ಸಂರಕ್ಷಿಸುವ ಬಗ್ಗೆ ಜಾಗೃತಿ ಅಭಿಯಾನಗಳು ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:17 pm, Fri, 7 June 24

ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ