AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Monsoon Hair Care Tips : ಮಳೆಗಾಲದಲ್ಲಿ ಕೇಶರಾಶಿಯ ಆರೈಕೆ ಮಾಡುವುದೇಗೆ? ಈ ಟಿಪ್ಸ್ ಪಾಲಿಸಿ

ಮಳೆಗಾಲ ಎಂದರೆ ಕೆಲವರಿಗೆ ಇಷ್ಟ, ಇನ್ನು ಕೆಲವರಿಗೆ ಕಷ್ಟ. ಈ ಋತುವಿನಲ್ಲಿ ತಂಪಾದ ವಾತಾವರಣ, ಹೊರಗೆ ಹೋಗಿ ಬಂದರೆ ಮನಸ್ಸಿಗೂ ಉಲ್ಲಾಸ. ಆದರೆ ಜೋರಾ ಗಿ ಮಳೆ ಸುರಿಯುತ್ತಿದ್ದರೆ ಯಾರು ಕೂಡ ಹೊರಗೆ ಹೋಗಲು ಇಷ್ಟ ಪಡುವುದಿಲ್ಲ. ಕೆಲಸವಿತ್ತೆಂದೂ ಹೊರಗೆ ಹೋದರೆ, ಮಳೆರಾಯನಿಗೆ ನಮ್ಮನ್ನು ಒದ್ದೆಯಾಗಿಸಿ ಬಿಟ್ಟರೇನೇ ಸಮಾಧಾನ. ಈ ಸಮಯದಲ್ಲಿ ಮೈ ಕೈ, ಬಟ್ಟೆ, ಕೂದಲು ಒದ್ದೆಯಾಗುವುದು ಸಾಮಾನ್ಯ. ಆದರೆ ಈ ಸಮಯದಲ್ಲಿ ಕೂದಲ ಆರೈಕೆಯ ಕಡೆಗೂ ಗಮನ ಕೊಡುವುದು ತುಂಬಾನೇ ಮುಖ್ಯ.

Monsoon Hair Care Tips : ಮಳೆಗಾಲದಲ್ಲಿ ಕೇಶರಾಶಿಯ ಆರೈಕೆ ಮಾಡುವುದೇಗೆ? ಈ ಟಿಪ್ಸ್ ಪಾಲಿಸಿ
ಸಾಯಿನಂದಾ
| Edited By: |

Updated on: Jun 08, 2024 | 12:36 PM

Share

ಮಳೆಗಾಲದಲ್ಲಿ ಕೂದಲಿನ ಆರೈಕೆ ಮಾಡುವುದು ಸವಾಲಿನ ಕೆಲಸ. ಈ ಮಳೆಗೆ ಕೂದಲು ಒದ್ದೆಯಾಗಿಯೋ, ತಲೆ ಸ್ನಾನ ಮಾಡಿದ ನಂತರ ತಲೆ ಕೂದಲು ಒಣಗದೇ ಇದ್ದರೆಯೂ ಕೂದಲಿನ ಆರೋಗ್ಯವು ಹಾಳಾಗುತ್ತದೆ. ಈ ಸಮಯದಲ್ಲಿ ತಲೆ ಕೂದಲುದುರುವಿಕೆ, ತಲೆ ಹೊಟ್ಟಿನ ಸಮಸ್ಯೆ ಹೀಗೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಮಳೆಗಾಲದಲ್ಲಿ ಕೂದಲಿನ ಆರೈಕೆಯತ್ತ ಹೆಚ್ಚು ಗಮನ ನೀಡಬೇಕು. ಹೆಚ್ಚು ಕಾಲ ಕೂದಲು ಒದ್ದೆಯಾಗಿರಲು ಬಿಡಬಾರದು.

ಮಳೆಗಾಲದಲ್ಲಿ ಕೂದಲಿನ ಆರೈಕೆಗೆ ಸರಳ ಸಲಹೆಗಳಿವು

  • ಆಂಟಿ ಡ್ಯಾಂಡ್ರಫ್ ಶಾಂಪೂ ಬಳಸಿ ವಾರಕ್ಕೆ ಕನಿಷ್ಠ 3 ಬಾರಿ ತಲೆ ಕೂದಲನ್ನು ಸ್ವಚ್ಛಗೊಳಿಸಿ. ಅದಲ್ಲದೇ, ಮೈಲ್ಡ್ ಶಾಂಪೂ ಜೊತೆಗೆ ಆ್ಯಂಟಿ ಡ್ಯಾಂಡ್ರಫ್ ಶಾಂಪೂ ಬಳಸಿ ಸ್ನಾನ ಮಾಡುವುದು ಒಳ್ಳೆಯದು.
  • ಮಳೆಗಾಲದಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚು. ಹೀಗಾಗಿ ಶಾಂಪೂ ಬಳಸಿದ ನಂತರ ಕಂಡೀಷನರ್ ಬಳಸಲು ಮರೆಯದಿರಿ. ಕಂಡೀಷನ್ ಬಳಸುವುದಿಲ್ಲ ಎಂದಾದರೆ ಕೂದಲಿನ ತೇವಾಂಶವನ್ನು ಉಳಿಸಿಕೊಳ್ಳಲು ತೆಂಗಿನ ಎಣ್ಣೆಯನ್ನು ಸಹ ಬಳಸಬಹುದು.
  • ಮಳೆಗಾಲದಲ್ಲಿ ಸ್ನಾನದ ಬಳಿಕ ಕೂದಲನ್ನು ಚೆನ್ನಾಗಿ ಒಣಗಿಸಿ. ಫ್ಯಾನ್‌ನಿಂದ ಕೂದಲನ್ನು ಒಣಗಿಸುವುದರಿಂದ ಒದ್ದೆ ಕೂದಲು ಬ್ಯಾಕ್ಟೀರಿಯಾದ ಸೋಂಕಿಗೆ ಒಳಗಾಗುವುದನ್ನು ತಪ್ಪಿಸಬಹುದು.
  • ಈ ಋತುವಿನಲ್ಲಿ ನೆತ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಬೇಕು. ಈ ಅಭ್ಯಾಸವು ತಲೆಬುರುಡೆಯಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸಿ, ಕೂದಲಿನ ಸಮಸ್ಯೆ ಕಡಿಮೆ ಮಾಡುತ್ತದೆ.
  • ಕೂದಲು ಆರೋಗ್ಯಕರವಾಗಿರಲು, ದೈನಂದಿನ ಆಹಾರದ ಕಡೆಗೂ ಗಮನ ಕೊಡಿ. ಕೆಲವೊಮ್ಮೆ ದೇಹದಲ್ಲಿ ಪೋಷಕಾಂಶಗಳು ಇಲ್ಲದಿದ್ದರೂ ಕೂದಲಿನ ಸಮಸ್ಯೆಗಳು ಹೆಚ್ಚಾಗುತ್ತವೆ. ಹೀಗಾಗಿ ಸಾಕಷ್ಟು ನೀರು, ತರಕಾರಿಗಳು, ಹಣ್ಣುಗಳನ್ನು ಸೇವಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ನಾನು ತಂದೆ ಆಗ್ತಿರೋದು ಇನ್​​​ಸ್ಟಾಗ್ರಾಮ್​​​ಗೂ ಗೊತ್ತಾಗಿದೆ: ಧನಂಜಯ್
ನಾನು ತಂದೆ ಆಗ್ತಿರೋದು ಇನ್​​​ಸ್ಟಾಗ್ರಾಮ್​​​ಗೂ ಗೊತ್ತಾಗಿದೆ: ಧನಂಜಯ್
'ಹ್ಯಾಟ್ರಿಕ್' ಹೀರೋ ಸ್ಯಾಮ್ ಕರನ್
'ಹ್ಯಾಟ್ರಿಕ್' ಹೀರೋ ಸ್ಯಾಮ್ ಕರನ್
ಎಲ್ಲಾ ಲಿಂಗಾಯತರು, ಬ್ರಾಹ್ಮಣರು ಮಾಂಸ ತಿಂತಾರಾ ಎಂದು ಕೇಳೋದು ತಪ್ಪು; ಧನಂಜಯ
ಎಲ್ಲಾ ಲಿಂಗಾಯತರು, ಬ್ರಾಹ್ಮಣರು ಮಾಂಸ ತಿಂತಾರಾ ಎಂದು ಕೇಳೋದು ತಪ್ಪು; ಧನಂಜಯ