Donald Duck Day: 90 ವರ್ಷಗಳಿಂದ ಪ್ರೇಕ್ಷಕರ ಮುಖದಲ್ಲಿ ನಗು ಮೂಡಿಸಿದ ಡೊನಾಲ್ಡ್ ಡಕ್ ಬಗ್ಗೆ ನಿಮಗೆಷ್ಟು ಗೊತ್ತು?

ಪ್ರತಿ ವರ್ಷ ಜೂನ್ 9 ರಂದು ರಾಷ್ಟ್ರೀಯ ಡೊನಾಲ್ಡ್ ಡಕ್​​​ ದಿನವನ್ನು ಅಂದರೆ ಈ ಬಾತುಕೋಳಿಯ ಹುಟ್ಟುಹಬ್ಬವನ್ನಾಗಿ ಆಚರಿಸಲಾಗುತ್ತದೆ. ಈ ಪ್ರೀತಿಯ ಡಿಸ್ನಿ ಪಾತ್ರವನ್ನು ಮೊದಲು ಜೂನ್ 9, 1934 ರಂದು ಜಗತ್ತಿಗೆ ಪರಿಚಯಿಸಲಾಯಿತು. ಈ ಡೊನಾಲ್ಡ್ ಡಕ್ ಕುರಿತ ಇನ್ನಷ್ಟು ಇಂಟರೆಸ್ಟಿಂಗ್​ ಸಂಗತಿ ಇಲ್ಲಿವೆ.

Donald Duck Day: 90 ವರ್ಷಗಳಿಂದ ಪ್ರೇಕ್ಷಕರ ಮುಖದಲ್ಲಿ ನಗು ಮೂಡಿಸಿದ ಡೊನಾಲ್ಡ್ ಡಕ್ ಬಗ್ಗೆ ನಿಮಗೆಷ್ಟು ಗೊತ್ತು?
Donald Duck's 90th anniversary
Follow us
ಅಕ್ಷತಾ ವರ್ಕಾಡಿ
|

Updated on: Jun 08, 2024 | 6:46 PM

ಡೊನಾಲ್ಡ್ ಡಕ್ ಮನುಷ್ಯ ದೇಹವನ್ನು ಹೋಲುವ ಈ ಬಾತು ಕೋಳಿ ವಾಲ್ಟ್ ಡಿಸ್ನಿ ಕಂಪನಿಯಿಂದ ರಚಿಸಲ್ಪಟ್ಟ ಕಾರ್ಟೂನ್ ಪಾತ್ರವಾಗಿದೆ . ಕಾರ್ಟೂನ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಪುಟಾಣಿ ಮಕ್ಕಳಿಂದ ಹಿಡಿದು ವೃದ್ಧರು ಕೂಡ ತುಂಬ ಖುಷಿ ಖುಷಿಯಿಂದ ಇದನ್ನು ನೋಡಿ ಎಂಜಾಯ್ ಮಾಡುವ ಪದ್ಧತಿ ಇನ್ನೂ ಚಾಲ್ತಿಯಲ್ಲಿದೆ. ಇದೊಂದು ಆನಿಮಲ್ ಕಾರ್ಟೂನ್ ಸಿರೀಸ್. ಇದು ಧ್ವನಿ ಇಲ್ಲದಿದ್ದರೂ ಕೂಡ ಜನರ ಹೃದಯವನ್ನು 90 ವರ್ಷಗಳಿಂದ ಗೆಲ್ಲುತ್ತಾ ಬಂದಿದೆ. ಡೊನಾಲ್ಡ್ ಡಕ್‌ನ  ಜೊತೆಗೆ ಗೆಳತಿ ಡೈಸಿ ಡಕ್ ಪ್ರೇಮಿ ಕಹಾನಿಗಳು ಕೂಡ ಸಾಕಷ್ಟು ಜನಮೆಚ್ಚುಗೆ  ಪಡೆದುಕೊಂಡಿದೆ.

ರಾಷ್ಟ್ರೀಯ ಡೊನಾಲ್ಡ್ ಡಕ್​​​ ದಿನವನ್ನು ಪ್ರತಿ ವರ್ಷ ಜೂನ್ 9 ರಂದು ಈ ಅನಿಮೇಟೆಡ್ ಬಾತುಕೋಳಿಯ ಜನ್ಮದಿನದ ನೆನಪಿಗಾಗಿ ಆಚರಿಸಲಾಗುತ್ತದೆ. ಈ ಪ್ರೀತಿಯ ಡಿಸ್ನಿ ಪಾತ್ರವನ್ನು ಮೊದಲು ಜೂನ್ 9, 1934 ರಂದು ಜಗತ್ತಿಗೆ ಪರಿಚಯಿಸಲಾಯಿತು.

ಡೊನಾಲ್ಡ್ ಡಕ್ ಮತ್ತು ಮಿಕ್ಕಿ ಮೌಸ್ ಇಂದಿಗೂ  ಜನಪ್ರಿಯತೆಯನ್ನು ಹೊಂದಿದೆ. ಡೊನಾಲ್ಡ್ ಡಕ್ ಅನ್ನು ಮೊದಲು ಜೂನ್ 1934 ರಲ್ಲಿ “ದಿ ವೈಸ್ ಲಿಟಲ್ ಹೆನ್” ಎಂಬ ಅನಿಮೇಟೆಡ್ ಕಿರುಚಿತ್ರದಲ್ಲಿ ಜಗತ್ತಿಗೆ ಪರಿಚಯಿಸಲಾಯಿತು. ಡೊನಾಲ್ಡ್ ಯಾವುದೇ ಇತರ ಡಿಸ್ನಿ ಪಾತ್ರಗಳಿಗಿಂತ ಹೆಚ್ಚು 200ರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದೆ.

ಡೊನಾಲ್ಡ್ ಡಕ್ ಬಗ್ಗೆ ಕೆಲವು ಇತರ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ:

  • 1940 ರ ದಶಕದಲ್ಲಿ ಮಿಕ್ಕಿ ಮೌಸ್ ವಾಲ್ಟ್ ಡಿಸ್ನಿಯ ಮೊದಲ ರಚನೆಯಾಗಿದ್ದರೆ, ಡೊನಾಲ್ಡ್ ಡಕ್ ಪಾತ್ರವು ಮಿಕ್ಕಿಯನ್ನು 128 ಕ್ಕೂ ಹೆಚ್ಚು ಕಿರು ಅನಿಮೇಷನ್ ವೀಡಿಯೊಗಳೊಂದಿಗೆ ಕಾಣಿಸಿಕೊಂಡಿವೆ.
  • 1943 ರಲ್ಲಿ ಅನಿಮೇಷನ್‌ಗಾಗಿ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದ “ಡೆರ್ ಫ್ಯೂರರ್ಸ್ ಫೇಸ್” ನಲ್ಲಿ ಡೊನಾಲ್ಡ್ ಡಕ್ ಕಾಣಿಸಿಕೊಂಡಿದೆ.
  • 1953 ರಲ್ಲಿ ಡೈಸಿ ಡಕ್ ಪಾತ್ರವನ್ನು ಡೊನಾಲ್ಡ್ ಡಕ್‌ನ ಗೆಳತಿಯಾಗಿ ಪರಿಚಯಿಸಲಾಯಿತು.
  • “ಡಾನ್ ಡೊನಾಲ್ಡ್” ಕಿರುಚಿತ್ರವಾಗಿದ್ದು ಬೆಳ್ಳಿತೆರೆಯಲ್ಲಿ ಡೊನಾಲ್ಡ್ ಡಕ್ ಜನಪ್ರಿಯತೆಯನ್ನು ಹೆಚ್ಚಿಸಿತು. ಈ ಚಿತ್ರದಲ್ಲಿ, ಡೊನಾಲ್ಡ್ ಡಕ್ ಡೈಸಿ ಡಕ್ ನ ಹೃದಯವನ್ನು ಗೆಲ್ಲಲು ಪ್ರಯತ್ನಿಸುವ ಹಾಸ್ಯಸ್ಪದ ತುಣುಕುಗಳನ್ನು ಕಾಣಬಹುದು.
  • ಡೊನಾಲ್ಡ್ ಡಕ್‌ನ ಪೂರ್ಣ ಹೆಸರು ಡೊನಾಲ್ಡ್ ಫಾಂಟ್ಲೆರಾಯ್ ಡಕ್ ಎಂದು 1942 ರ “ಡೊನಾಲ್ಡ್ ಗೆಟ್ಸ್ ಡ್ರಾಫ್ಟ್” ಕಿರುಚಿತ್ರದಲ್ಲಿ ಉಲ್ಲೇಖಿಸಲಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: