‘ಮಂಜುಮ್ಮೇಲ್ ಬಾಯ್ಸ್’ ಒಟಿಟಿ: ಯಾರೂ ಊಹಿಸದ ಡೇಟ್ ಅನೌನ್ಸ್ ಮಾಡಿದ ಡಿಸ್ನಿ
‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ ಈಗ ಒಟಿಟಿಯಲ್ಲಿ ಪ್ರಸಾರ ಕಾಣುತ್ತಿದೆ. ಸಿನಿಮಾಗಳು ರಿಲೀಸ್ ಆಗೋದು ಸಾಮಾನ್ಯವಾಗಿ ಶುಕ್ರವಾರ. ಥಿಯೇಟರ್ ಮಾತ್ರವಲ್ಲದೆ ಒಟಿಟಿಗಳೂ ಈ ತಂತ್ರ ಉಪಯೋಗಿಸುತ್ತಿವೆ. ಈ ಕಾರಣದಿಂದಲೇ ಮೇ 3ರಂದು ‘ಮಂಜುಮ್ಮೇಲ್ ಬಾಯ್ಸ್’ ಒಟಿಟಿಯಲ್ಲಿ ಪ್ರಸಾರ ಕಾಣಲಿದೆ ಎಂದು ಹೇಳಲಾಗಿತ್ತು.
ಮಲಯಾಳಂನ ಸೂಪರ್ ಹಿಟ್ ಸಿನಿಮಾ ‘ಮಂಜುಮ್ಮೇಲ್ ಬಾಯ್ಸ್’ ಚಿತ್ರ (Manjummel Boys) ರಿಲೀಸ್ ಆಗಿದ್ದು ಫೆಬ್ರವರಿ 22ರಂದು. ಇದಾಗಿ ಎರಡು ತಿಂಗಳೇ ಕಳೆದಿವೆ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದ ಗಳಿಕೆ ಮಾಡಿದೆ. 200 ಕೋಟಿ ರೂಪಾಯಿ ಗಳಿಕೆ ಮಾಡಿದ ಮೊದಲ ಮಲಯಾಳಂ ಸಿನಿಮಾ ಎನ್ನುವ ಖ್ಯಾತಿಯೂ ಈ ಚಿತ್ರಕ್ಕೆ ಸಿಕ್ಕಿದೆ. ವಿಶೇಷ ಎಂದರೆ ಈ ಚಿತ್ರ ಈಗ ಒಟಿಟಿಗೆ ಕಾಲಿಡುತ್ತಿದೆ. ಆದರೆ, ಯಾರೂ ಊಹಿಸದ ರಿಲೀಸ್ ದಿನಾಂಕವನ್ನು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ತಿಳಿಸಿದೆ.
‘ಮಂಜುಮ್ಮೇಲ್ ಬಾಯ್ಸ್’ ಪಕ್ಕಾ ಫ್ರೆಂಡ್ಶಿಪ್ ಕಥೆ. ಇದರ ಜೊತೆಗೆ ಒಂದಷ್ಟು ಅಡ್ವೆಂಚರ್ ಕೂಡ ಇದೆ. ಕೊಡೈಕೆನಲ್ನಲ್ಲಿರುವ ‘ಗುಣ ಕೇವ್’ನಲ್ಲಿ ನಡೆದ ಒಂದು ಶಾಕಿಂಗ್ ಘಟನೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. 2006ರಲ್ಲಿ ಇಲ್ಲಿಗೆ ಒಂದು ಗೆಳೆಯರ ತಂಡ ಟ್ರಿಪ್ ತೆರಳಿರುತ್ತದೆ. ಈ ಪ್ರವಾಸಿ ಸ್ಥಳದಲ್ಲಿರುವ ಡೆವಿಲ್ಸ್ ಕಿಚನ್ ಎಂಬ ಕಂದಕದಲ್ಲಿ ಓರ್ವ ಬೀಳುತ್ತಾನೆ. ಆತನ ರಕ್ಷಿಸೋ ಕಥೆಯೇ ‘ಮಂಜುಮ್ಮೇಲ್ ಬಾಯ್ಸ್’.
ಈ ಸಿನಿಮಾ ಈಗ ಒಟಿಟಿಯಲ್ಲಿ ಪ್ರಸಾರ ಕಾಣುತ್ತಿದೆ. ಸಿನಿಮಾಗಳು ರಿಲೀಸ್ ಆಗೋದು ಸಾಮಾನ್ಯವಾಗಿ ಶುಕ್ರವಾರ. ಥಿಯೇಟರ್ ಮಾತ್ರವಲ್ಲದೆ ಒಟಿಟಿಗಳೂ ಈ ತಂತ್ರ ಉಪಯೋಗಿಸುತ್ತಿವೆ. ಈ ಕಾರಣದಿಂದಲೇ ಮೇ 3ರಂದು ‘ಮಂಜುಮ್ಮೇಲ್ ಬಾಯ್ಸ್’ ಒಟಿಟಿಯಲ್ಲಿ ಪ್ರಸಾರ ಕಾಣಲಿದೆ ಎಂದು ಹೇಳಲಾಗಿತ್ತು. ಆದರೆ, ಇದಕ್ಕೆ ಟ್ವಿಸ್ಟ್ ನೀಡಲಾಗಿದೆ. ಮೇ 5 (ಭಾನುವಾರ) ಸಿನಿಮಾ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಪ್ರಸಾರ ಕಾಣಲಿದೆ.
ಇದನ್ನೂ ಓದಿ: ಹಾಟ್ಸ್ಟಾರ್ನಲ್ಲಿ ‘ಮಂಜುಮ್ಮೇಲ್ ಬಾಯ್ಸ್’; ಅಧಿಕೃತ ಮಾಹಿತಿ ಕೊಟ್ಟ ಒಟಿಟಿ ಸಂಸ್ಥೆ
‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ ಈವರೆಗೆ 236 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸುಮಾರು 20 ಕೋಟಿ ರೂಪಾಯಿ ಬಜೆಟ್ನಲ್ಲಿ ಈ ಚಿತ್ರ ಸಿದ್ಧವಾಗಿದೆ ಎನ್ನಲಾಗಿದೆ. ಚಿದಂಬರಂ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಸೌಬಿನ್ ಶಾಹಿರ್ ಈ ಚಿತ್ರದಲ್ಲಿ ಮುಖ್ಯ ಪಾತ್ರದ ಜೊತೆಗೆ ಸಿನಿಮಾ ನಿರ್ಮಾಣ ಕೂಡ ಮಾಡಿದ್ದಾರೆ. ಶ್ರೀನಾಥ್ ಬಾಶಿ, ಬಾಲು ವರ್ಗೀಶ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.