World Red Cross Day 2022: ವಿಶ್ವ ರೆಡ್​ ಕ್ರಾಸ್ ದಿನ; ಏನಿದರ ಇತಿಹಾಸ ಮತ್ತು ಮಹತ್ವ?

| Updated By: shivaprasad.hs

Updated on: May 08, 2022 | 8:24 AM

Red Crescent Day: ಅಂತರರಾಷ್ಟ್ರೀಯ ರೆಡ್‌ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಚಳವಳಿಯ ನಂಬಿಕೆಗಳು ಮತ್ತು ತತ್ವಗಳನ್ನು ಗೌರವಿಸಲು ‘ವಿಶ್ವ ರೆಡ್​ ಕ್ರಾಸ್ ದಿನ’ ಈ ದಿನವನ್ನು ಆಚರಿಸಲಾಗುತ್ತದೆ. ಅವಿರತವಾಗಿ ಕೆಲಸ ಮಾಡುವ ಹಾಗೂ ಅಗತ್ಯವಿರುವ ವ್ಯಕ್ತಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸ್ವಯಂಸೇವಕರು ಮತ್ತು ಕಾರ್ಮಿಕರ ಕೊಡುಗೆಯನ್ನು ಈ ದಿನದಂದು ಸ್ಮರಿಸಲಾಗುತ್ತದೆ. 

World Red Cross Day 2022: ವಿಶ್ವ ರೆಡ್​ ಕ್ರಾಸ್ ದಿನ; ಏನಿದರ ಇತಿಹಾಸ ಮತ್ತು ಮಹತ್ವ?
ಸಾಂಕೇತಿಕ ಚಿತ್ರ
Follow us on

ವಿಶ್ವ ರೆಡ್ ಕ್ರಾಸ್ (World Red Cross Day) ಮತ್ತು ರೆಡ್ ಕ್ರೆಸೆಂಟ್ ದಿನವನ್ನು ಪ್ರತಿ ವರ್ಷ ಮೇ 8 ರಂದು ಆಚರಿಸಲಾಗುತ್ತದೆ. ಈ ದಿನವನ್ನು ರೆಡ್ ಕ್ರಾಸ್ ಮತ್ತು ಅಂತರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಯ ಸಂಸ್ಥಾಪಕರಾದ ಹೆನ್ರಿ ಡ್ಯೂನಾಂಟ್ ಅವರ ಜನ್ಮ ವಾರ್ಷಿಕೋತ್ಸವವನ್ನು ಸೂಚಿಸಿ ಆಚರಿಸಲಾಗುತ್ತದೆ. ವಿಶ್ವ ರೆಡ್ ಕ್ರಾಸ್ ದಿನವನ್ನು ರೆಡ್ ಕ್ರಾಸ್ ಆಂದೋಲನ ಮತ್ತು ಅಂತರಾಷ್ಟ್ರೀಯ ರೆಡ್ ಕ್ರಾಸ್ ತತ್ವಗಳನ್ನು ಆಚರಿಸುವ ಗುರಿಯೊಂದಿಗೆ ಆಚರಿಸಲಾಗುತ್ತದೆ. ಸ್ವಯಂಸೇವಕರು ಮತ್ತು ಕಾರ್ಮಿಕರನ್ನು ಅವರ ಸೇವೆ ಹಾಗೂ ಕೊಡುಗೆಗಳಿಗಾಗಿ ಗೌರವಿಸಲಾಗುತ್ತದೆ.

ವಿಶ್ವ ರೆಡ್ ಕ್ರಾಸ್ ದಿನದ ಇತಿಹಾಸ:

ವಿಶ್ವ ರೆಡ್ ಕ್ರಾಸ್ ದಿನ’ವನ್ನು ‘ರೆಡ್ ಕ್ರೆಸೆಂಟ್ ಡೇ’ ಎಂದೂ ಕರೆಯುತ್ತಾರೆ. ಈ ದಿನವನ್ನು ಮೊದಲ ಬಾರಿಗೆ ಆಚರಿಸಿದ್ದು 1948 ರಲ್ಲಿ. ಇಂಟರ್ನ್ಯಾಷನಲ್ ಕಮಿಟಿ ಆಫ್ ದಿ ರೆಡ್‌ಕ್ರಾಸ್‌ನ ಸಂಸ್ಥಾಪಕ ಹೆನ್ರಿ ಡ್ಯೂನಾಂಟ್ ಜನಿಸಿದ್ದು 1828ರ ಮೇ 8ರಂದು. ಅವರು ತಮ್ಮ ಕೆಲಸಗಳಿಗಾಗಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಸಹ ಪಡೆದಿದ್ದರು. ವಿಶ್ವ ರೆಡ್​ ಕ್ರಾಸ್ ಸಂಸ್ಥೆಯನ್ನು 1863ರಲ್ಲಿ ಹುಟ್ಟುಹಾಕಲಾಯಿತು.

ಇದನ್ನೂ ಓದಿ
Mother’s Day 2022: ಪ್ರೀತಿ, ಆರೈಕೆ, ಸಹನೆಯ “ಅಮ್ಮ” ನನ್ನ ಜಗತ್ತು..
Mother’s Day 2022: ತಾಳ್ಮೆ ಮತ್ತು ಸಂಯಮದ ಕೈಗನ್ನಡಿ ನನ್ನಮ್ಮ
Mother’s Day 2022: ಅಮ್ಮ ನನ್ನ ಪಾಲಿನ ಸೂಪರ್ ಸ್ಟಾರ್

ಯುದ್ಧ ಸೇರಿದಂತೆ ಕಷ್ಟದ ಸಂದರ್ಭಗಳಲ್ಲಿ ಅಗತ್ಯವಿರುವವರಿಗೆ ಮಾನವೀಯ ನೆರವು ನೀಡುವುದು ರೆಡ್​ ಕ್ರಾಸ್​ನ ಧ್ಯೇಯೋದ್ದೇಶಗಳಲ್ಲಿ ಒಂದು. ಬಿಳಿ ಬಣ್ಣದ ಹಿನ್ನೆಲೆಯಲ್ಲಿ ಕೆಂಪು ಬಣ್ಣದ ಲಾಂಛನವನ್ನು ರೆಡ್​ಕ್ರಾಸ್ ಹೊಂದಿದೆ. ತುರ್ತು ಪರಿಸ್ಥಿತಿಗಳಲ್ಲೂ ಈ ಲಾಂಛನದೊಂದಿಗೆ ಕೆಲಸ ನಿರ್ವಹಿಸಲಾಗುತ್ತದೆ. ಈ ಲಾಂಛನ ಹೊಂದಿರುವ ವ್ಯಕ್ತಿಗಳನ್ನು ಸೇವಾ ಕಾರ್ಯದಲ್ಲಿ ತೊಡಗಿರುವವರು ಎಂದು ಗುರುತಿಸಲಾಗುತ್ತದೆ.

ವಿಶ್ವ ರೆಡ್ ಕ್ರಾಸ್ ದಿನದ ಮಹತ್ವ:

ಅಂತರರಾಷ್ಟ್ರೀಯ ರೆಡ್‌ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಚಳವಳಿಯ ನಂಬಿಕೆಗಳು ಮತ್ತು ತತ್ವಗಳನ್ನು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಅವಿರತವಾಗಿ ಕೆಲಸ ಮಾಡುವ ಹಾಗೂ ಅಗತ್ಯವಿರುವ ವ್ಯಕ್ತಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸ್ವಯಂಸೇವಕರು ಮತ್ತು ಕಾರ್ಮಿಕರ ಕೊಡುಗೆಯನ್ನು ಈ ದಿನದಂದು ಸ್ಮರಿಸಲಾಗುತ್ತದೆ.

ವಿಶ್ವ ರೆಡ್ ಕ್ರಾಸ್ ದಿನದ ಥೀಮ್:

ಈ ವರ್ಷದ ವಿಶ್ವ ರೆಡ್ ಕ್ರಾಸ್ ದಿನ ಮತ್ತು ರೆಡ್ ಕ್ರೆಸೆಂಟ್ ದಿನದ ಥೀಮ್ ‘BE Human Kind’ (ಮಾನವೀಯವಾಗಿರಿ) ಎಂದಾಗಿದೆ. COVID-19 ಸಾಂಕ್ರಾಮಿಕದ ಕಾರಣದಿಂದ ಪ್ರತಿಯೊಬ್ಬರ ಜೀವನ ಕಷ್ಟವಾಗಿರುವ ಕಾಲಘಟ್ಟದಲ್ಲಿ ಮತ್ತೊಬ್ಬರಿಗೆ ತೋರುವ ದಯೆಯನ್ನು ಪ್ರಶಂಸಿಸಿ ಎನ್ನುವುದು ಆಶಯವಾಗಿದೆ.

Published On - 8:20 am, Sun, 8 May 22