ದೇವ ಭಾಷೆ ಎಂದು ಕರೆಯಲ್ಪಡುವ ಸಂಸ್ಕೃತ ಭಾಷೆಯನ್ನು ಮಾತಾನಾಡುವವರ ಸಂಖ್ಯೆyಯೂ ತೀರಾ ಕಡಿಮೆಯಾಗಿದೆ. ಆದರೆ ಪುರಾತನ ಧರ್ಮ ಗ್ರಂಥ, ಉಪನಿಷತ್ತು, ರಾಮಯಾಣ, ಮಹಾಭಾರತ, ಸಾವಿರಾರು ವರ್ಷ ಹಳೆಯ ದೇವಾಲಯಗಳ ವಾಸ್ತು ಶಿಲ್ಪಗಳಲ್ಲಿ ವಿಶ್ವದ ಹಳೆಯ ಭಾಷೆಯಾಗಿರುವ ಸಂಸ್ಕೃತವನ್ನು ಕಾಣಬಹುದು. ಹೀಗಾಗಿ ವಿಶ್ವದ ಹಳೆಯ ಭಾಷೆಯನ್ನು ಮಾತನಾಡಲು ಉತ್ತೇಜಿಸಲು ಹಾಗೂ ಭಾಷೆಯ ಬಗ್ಗೆ ಅರಿವು ಮೂಡಿಸಲು ವಿಶ್ವ ಸಂಸ್ಕೃತ ದಿನವನ್ನು ಆಚರಿಸಲಾಗುತ್ತದೆ.
ಹಿಂದೂ ಸಂಸ್ಕೃತಿಯಲ್ಲಿ ಬೇರೂರಿದ ಹಳೆಯ ಭಾಷೆಯನ್ನು ಮುಂದಿನ ಪೀಳಿಗೆಗೆ ಹಾಗೂ ಜಗತ್ತಿಗೆ ತಿಳಿಸುವ ಉದ್ದೇಶದಿಂದ 1969 ರಲ್ಲಿ ಸಂಸ್ಕೃತ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ದಿನವನ್ನು ಆಚರಿಸಲಾಗುತ್ತಿದ್ದು, ಭಾರತದ ಪುರಾತನ ಭಾಷೆಯಾದ ಸಂಸ್ಕೃತದ ಕುರಿತು ಜಗತ್ತಿಗೆ ತಿಳಿಸುವುದು ಹಾಗೂ ಈ ಭಾಷೆಯ ಪ್ರಚಾರದ ಉದ್ದೇಶದಿಂದ ಈ ದಿನವು ಮಹತ್ವದ್ದಾಗಿದೆ.
* ಮತ್ತೂರು : ಈ ಗ್ರಾಮವೊಂದರ ಜನರು ಸಂಸ್ಕೃತ ಭಾಷೆಯನ್ನೇ ತಮ್ಮ ಉಸಿರಾಗಿಸಿಕೊಂಡಿದ್ದಾರೆ. ಶಿವಮೊಗ್ಗದಿಂದ ಕೇವಲ ಐದು ಕಿಲೋ ಮೀಟರ್ ದೂರದಲ್ಲಿರುವ ಮತ್ತೂರು ಗ್ರಾಮವು ಸಂಸ್ಕೃತ ಗ್ರಾಮ ಎಂದೇ ಖ್ಯಾತಿ ಪಡೆದಿದೆ. ಇಲ್ಲಿ ಕರ್ನಾಟಕದ ವಿರಳ ಜನ ಸಮುದಾಯವಾದ ಸಂಕೇತಿ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದು, ದೇವ ಭಾಷೆಯನ್ನೇ ಆಡುಭಾಷೆಯಾಗಿ ಬಳಸುತ್ತಿದ್ದಾರೆ. ನಲವತ್ತು ವರ್ಷಗಳ ಹಿಂದೆ ಸಂಸ್ಕೃತವನ್ನು ಉತ್ತೇಜಿಸಲು ಸಂಸ್ಕೃತ ಭಾರತಿ ಸಂಘವು ಮತ್ತೂರಿನಲ್ಲಿ ಹತ್ತು ದಿನಗಳ ಕಾರ್ಯಾಗಾರವನ್ನು ಆಯೋಜಿಸಿತ್ತು. ಆ ವೇಳೆ ಪೇಜಾವರ ಶ್ರೀಗಳು ಈ ಗ್ರಾಮ ಸಂಸ್ಕೃತ ಮಾತನಾಡುವ ಗ್ರಾಮವಾಗಿ ಪರಿವರ್ತಿತವಾಗಲಿ ಎಂದು ಕರೆ ನೀಡಿದ್ದರಂತೆ. ಆ ದಿನದಿಂದ ಇಲ್ಲಿಯವರೆಗೆ ಸಂಸ್ಕೃತದ ಅಭಿಯಾನವು ನಡೆಯುತ್ತಲೇ ಇದೆ.
* ಹೊಸಹಳ್ಳಿ : ಶಿವಮೊಗ್ಗ ಜಿಲ್ಲೆಯ ಹೊಸಹಳ್ಳಿಯ ಗ್ರಾಮದ ಜನರೂ ವ್ಯವಹಾರಿಕ ಭಾಷೆಯಾಗಿ ದೇವ ಭಾಷೆಯನ್ನು ಬಳಸುತ್ತಿದ್ದಾರೆ. ಇಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸಂಸ್ಕೃತವನ್ನೇ ತನ್ನ ಉಸಿರಾಗಿಸಿಕೊಂಡಿದ್ದಾರೆ. ಸ್ಥಳೀಯ ಶಾಲಾ ಪಠ್ಯಕ್ರಮವು ಸಂಸ್ಕೃತಕ್ಕೆ ಒತ್ತು ನೀಡಲಾಗುತ್ತಿದ್ದು, ದೈನಂದಿನ ಸಂವಹನಕ್ಕಾಗಿ ಈ ಭಾಷೆಯನ್ನೇ ಅವಲಂಬಿಸಿಕೊಂಡಿದ್ದು ಗ್ರಾಮವು ಸಂಪೂರ್ಣ ಸಂಸ್ಕೃತಮಯವಾಗಿದೆ.
ಇದನ್ನೂ ಓದಿ: ಪ್ರೀ ವೆಡ್ಡಿಂಗ್ ಶೂಟ್ಗೆ ಬೆಂಗಳೂರಿನ ಹೇಳಿ ಮಾಡಿಸಿದ ಸ್ಥಳಗಳಿವು
* ಸಸಾನಾ : ಒರಿಸ್ಸಾದ ಕರಾವಳಿ ಜಿಲ್ಲೆಯಾದ ಗಜಪತಿ ಜಿಲ್ಲೆಯ ದೂರದ ಹಳ್ಳಿ ಸಸಾನಾದ ಜನರ ಆಡುಭಾಷೆಯೇ ಸಂಸ್ಕೃತವಾಗಿದೆ. ಇಲ್ಲಿ ಸರಿಸುಮಾರು 50 ಕುಟುಂಬಗಳು ವಾಸವಾಗಿದೆ. ಪ್ರತಿಯೊಂದು ಕುಟುಂಬದಲ್ಲಿ ಕನಿಷ್ಠ ಒಬ್ಬ ಸಂಸ್ಕೃತ ಪಂಡಿತರಿದ್ದಾರೆ. 2002 ರಲ್ಲಿ ಸಂಸ್ಕೃತ ಭಾರತಿ ಕಾರ್ಯಕರ್ತೆ ವಿಮಲಾ ತಿವಾರಿ ಗ್ರಾಮದಲ್ಲಿ ಸಂಸ್ಕೃತ ಸಂಭಾಷಣಾ ಶಿಬಿರವನ್ನು ಪ್ರಾರಂಭಿಸಿದ್ದರು. ಈ ಶಿಬಿರದಿಂದಾಗಿ ಗ್ರಾಮದ ತುಂಬೆಲ್ಲ ಸಂಸ್ಕೃತ ಭಾಷೆಯ ಕಂಪು ಹರಡಿತು. ಹೀಗಾಗಿ ಸಣ್ಣ ಮಕ್ಕಳಿಂದ ಹಿಡಿದು ಮುದುಕರು, ಮಹಿಳೆಯರು ಕೂಡ ಸಂಸ್ಕೃತದಲ್ಲೇ ಮಾತನಾಡುತ್ತಾರೆ.
* ಜಿರಿ : ಮಧ್ಯಪ್ರದೇಶದ ರಾಜಘರ್ ಜಿಲ್ಲೆಯ ಸಾರಂಗ್ಪುರ ತಾಲೂಕಿನಲ್ಲಿರುವ ಜರಿ ಗ್ರಾಮವು ಸಂಸ್ಕೃತಮಯವಾಗಿದೆ. ಸಾರಂಗ್ಪುರದಿಂದ ಮೂವತ್ತು ಕಿಲೋಮೀಟರ್ ದೂರದಲ್ಲಿರುವ ಈ ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಹದಿನಾರು ವರ್ಷಗಳ ಹಿಂದೆ ಸ್ಥಳೀಯವಾಗಿ ಮಾಲ್ವಿ ಭಾಷಯನ್ನು ಬಳಕೆ ಮಾಡುತ್ತಿದ್ದರು. ಆದರೆ ಇದೀಗ ವ್ಯವಹಾರ ಹಾಗೂ ಆಡುಭಾಷೆಯಾಗಿ ಸಂಸ್ಕೃತವನ್ನೇ ಹೆಚ್ಚೆಚ್ಚು ಬಳಸುತ್ತಿದ್ದಾರೆ.
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ