ಜಿಮ್​ಗೆ ಹೋಗದೆಯೂ ದೇಹದ ತೂಕ ಇಳಿಸಿಕೊಳ್ಳಬಹುದು: ಇಲ್ಲಿವೆ ನೋಡಿ ಸಿಂಪಲ್​ ಸೂತ್ರಗಳು

| Updated By: Pavitra Bhat Jigalemane

Updated on: Mar 17, 2022 | 4:24 PM

ನಿದ್ದೆ ಸರಿಯಾಗಿ ಆದರೆ ಹಾರ್ಮೋನುಗಳ ಉತ್ಪತ್ತಿಯೂ ಸರಿಯಾದ ಪ್ರಮಾಣದಲ್ಲಿ ಆಗುತ್ತದೆ. ಇದರಿಂದ ದೇಹದ ತೂಕವೂ ಸಮತೋಲನದಲ್ಲಿರುತ್ತದೆ. 

ಜಿಮ್​ಗೆ ಹೋಗದೆಯೂ ದೇಹದ ತೂಕ ಇಳಿಸಿಕೊಳ್ಳಬಹುದು: ಇಲ್ಲಿವೆ ನೋಡಿ ಸಿಂಪಲ್​ ಸೂತ್ರಗಳು
ಪ್ರಾತಿನಿಧಿಕ ಚಿತ್ರ
Follow us on

ಆರೋಗ್ಯದ ವಿಷಯಕ್ಕೆ ಬಂದರೆ ಮೊದಲು ನೋಡುವುದೇ ದೇಹದ ತೂಕವನ್ನು. ದೇಹದ ತೂಕ ಸರಿಯಾದ ಪ್ರಮಾಣದಲ್ಲಿದ್ದರೆ ಬಹುತೇಕ ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆ. ದೇಹದ ತೂಕ ಇಳಿಸಿಕೊಳ್ಳಲು ಮಾಡುವ ಮೊದಲ ಪ್ರಯತ್ನವೇ ವ್ಯಾಯಾಮ ಅಥವಾ ಜಿಮ್​ಗಳಿಗೆ ತೆರಳಿ ವರ್ಕೌಟ್​ ಮಾಡುವುದು. ಆದರೆ ಇದೇ ಅಂತಿಮ ಪರಿಹಾರವಲ್ಲ. ಕೆಲವೊಮ್ಮೆ ಇಡೀ ದಿನದ ಕೆಲಸ ಮರುದಿನ ನಿಮ್ಮನ್ನು ವ್ಯಾಯಾಮ ಮಾಡಲು ಬಿಡದೇ ಇರಬಹುದು. ದೇಹ ವ್ಯಾಯಾಮ ಮಾಡುವಷ್ಟು ಶಕ್ತಿಯನ್ನು ಹೊಂದಿಲ್ಲದೇ ಇರಬಹುದು. ಹೀಗಾಗಿ ಜಿಮ್​, ವ್ಯಾಯಾಮ ಇಲ್ಲದೆಯೂ ದೇಹದ ತೂಕವನ್ನು ಇಳಿಸಿಕೊಳ್ಳಬಹುದಾಗಿದೆ. ಹೌದು ಅದಕ್ಕೆ ದಿನನಿತ್ಯದ ಜೀವನಶೈಲಿಯಲ್ಲಿ ಕೆಲವು ಅಭ್ಯಾಸಗಳನ್ನು ರೂಢಿಸಿಕೊಂಡರೆ ಅತಿಯಾದ ದೇಹದ ತೂಕವನ್ನು ಇಳಿಸಿಕೊಳ್ಳಬಹುದು. ಅದಕ್ಕಾಗಿ ಇಲ್ಲಿದೆ ಮಾಹಿತಿ.

ಆರೋಗ್ಯಕರ ಸ್ನ್ಯಾಕ್ಸ್​ ಸೇವನೆ:
ಸಂಜೆಯ ವೇಳೆ ಹಸಿವೆಯಾಗುವುದು ಸಹಜ. ಅದರೆ ಆ ಸಂದರ್ಭದಲ್ಲಿ ಯಾವ ರೀತಿಯ ಆಹಾರ ಸೇವನೆ ಮಾಡುತ್ತೇವೆ ಎನ್ನುವುದು ಮುಖ್ಯವಾಗಿರುತ್ತದೆ. ಹಸಿದಾಗ ಜಂಕ್​ ಪೂಡ್​ ಅಥವಾ ಕರಿದ ಪದಾರ್ಥಗಳನ್ನು ತಿಂದರೆ ದೇಹದಲ್ಲಿ ಬೇಡವೆಂದರೂ ದೇಹದ ತೂಕ ಹೆಚ್ಚಾಗುತ್ತದೆ. ಅದರ ಬದಲು ಹಣ್ಣು, ಜ್ಯೂಶ್​ ಅಥವಾ ಮೊಳಕೆ ಬರಿಸಿದ ಕಾಳುಗಳನ್ನು ಸೇವಿಸಿದರೆ ದೇಹಕ್ಕೆ ಬೇಕಾದ ಪ್ರೋಟೋನ್​ ಅಂಶಗಳೂ ದೊರಕುತ್ತವೆ ಜತೆಗೆ ತೂಕವೂ ಏರುವುದಿಲ್ಲ.

ಸರಿಯಾದ ನಿದ್ದೆ:
ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನಿದ್ದೆಯಾದರೆ ತೂಕ ಹೆಚ್ಚಾಗುವುದಿಲ್ಲ. ಪ್ರತಿ ಆರೋಗ್ಯವಂತ ವ್ಯಕ್ತಿಗೆ 6 ರಿಂದ 8 ಗಂಟೆಗಳ ಕಾಲ ನಿದ್ದೆ ಅಗತ್ಯವಾಗಿರುತ್ತದೆ. ನಿದ್ದೆ ಸರಿಯಾಗಿ ಆದರೆ ಹಾರ್ಮೋನುಗಳ ಉತ್ಪತ್ತಿಯೂ ಸರಿಯಾದ ಪ್ರಮಾಣದಲ್ಲಿ ಆಗುತ್ತದೆ. ಇದರಿಂದ ದೇಹದ ತೂಕವೂ ಸಮತೋಲನದಲ್ಲಿರುತ್ತದೆ.

ಬ್ಲ್ಯಾಕ್​ ಕಾಫಿ:
ಕಪ್ಪು ಕಾಫಿಯು ವಾರಕ್ಕೆ 500 ಕ್ಯಾಲೊರಿಗಳಷ್ಟು ತೂಕವನ್ನು ಇಳಿಕೆ ಮಾಡುತ್ತದೆ. ಕಪ್ಪು ಕಾಫಿಗೆ ಕಲ್ಲು ಸಕ್ಕರೆಯನ್ನು ಸೇರಿಸಿ ಸೇವಿಸಿ. 60 ಪ್ರತಿಶತದಷ್ಟು ಕ್ಯಾಲೋರಿ ಅಂಶವು ಅದಕ್ಕೆ ಸೇರಿಸುವ ಸಕ್ಕರೆಯಿಂದ ಬರುತ್ತದೆ. ಆದಾಗ್ಯೂ, ಸಕ್ಕರೆ ಇಲ್ಲದ ಕಪ್ಪು ಕಾಫಿಯ ರುಚಿಗೆ ನೀವು ಒಗ್ಗಿಕೊಳ್ಳಲು ಸಾಧ್ಯವಾಗದಿದ್ದರೆ, ನೀವು ಅದಕ್ಕೆ ಜೇನುತುಪ್ಪದ ಹನಿಗಳನ್ನು ಸೇರಿಸಬಹುದು. ಇದು ಕ್ಯಾಲೊರಿಗಳನ್ನು ಹೆಚ್ಚಿಸದೆ ಪಾನೀಯಕ್ಕೆ ಸಿಹಿಯನ್ನು ಸೇರಿಸುತ್ತದೆ.

ನೀರಿನ ಸೇವನೆ:
ದೇಹದಲ್ಲಿನ ನಿರುಪಯುಕ್ತ ಅಂಶಗಳನ್ನು ತೆಗೆದುಹಾಕಲು ನೀರು ಉತ್ತಮ ಪದಾರ್ಥವಾಗಿದೆ. ದೇಹವನ್ನು ಹೈಡ್ರೇಟ್ ಮಾಡಲು ನೀರನ್ನು ಕುಡಿಯಬೇಕು ಇದರಿಂದ ದೇಹದಲ್ಲಿ ಧಾರಣ ಶಕ್ತಿ ಹೆಚ್ಚಾಗುತ್ತದೆ, ಹೊಟ್ಟೆಯುಬ್ಬರ, ದೇಹದ ತೂಕ ಹೆಚ್ಚಾಗುವಿಕೆಯಂತಹ ಸಮಸ್ಯೆಗಳನ್ನು ನೀರು ನಿವಾರಿಸುತ್ತದೆ. 

ಇದನ್ನೂ ಓದಿ:

ಹೋಳಿಯಂದು ಮನೆಯ ಮುಂದೆ ರಂಗೋಲಿ ಹಾಕಲು ಇಲ್ಲಿದೆ ನೋಡಿ ಐಡಿಯಾಗಳು