ಹೋಳಿಯಂದು ಮನೆಯ ಮುಂದೆ ರಂಗೋಲಿ ಹಾಕಲು ಇಲ್ಲಿದೆ ನೋಡಿ ಐಡಿಯಾಗಳು
ಬಣ್ಣಗಳ ಹಬ್ಬ ಹೋಳಿಯ ಆಚರಣೆಗೆ ಎಲ್ಲೆಡೆ ಸಿದ್ಧತೆ ಆರಂಭವಾಗಿದೆ. ಹಬ್ಬಗಳಲ್ಲಿ ರಂಗೋಲಿ ಹಾಕುವುದು ಒಂದು ಸಂಪ್ರದಾಯ. ಹೋಳಿಯ ದಿನ ಹಾಕಲು ಸುಂದರ ರಂಗೋಲಿ ಚಿತ್ರಗಳು ಇಲ್ಲಿವೆ ನೋಡಿ.
ಫಾಲ್ಗುಣ ಶುಕ್ಲ ಪಕ್ಷದ ಹುಣ್ಣಿಮೆಯಂದು ಆಚರಿಸುವ ಬಣ್ಣಗಳ ಹಬ್ಬ ಹೋಳಿ (Holi) ಭಾರತೀಯರ ಪಾಲಿಗೆ ವಿಶೇಷ ಹಬ್ಬ. ಪರಸ್ಪರ ಬಣ್ಭಗಳನ್ನು ಹಚ್ಚಿ ಸಂಭ್ರಮಿಸುವ, ಬಾಂಧವ್ಯ ಬೆಸೆಯುವ ವಿಶೇಷ ದಿನ. ಮನೆಗಳಲ್ಲಿ ಸಿಹಿ ತಯಾರಿಸಿ, ಮನೆಯನ್ನು ಅಲಂಕರಿಸಿ ಹಬ್ಬವನ್ನು ಆಚರಿಸಲಾಗುತ್ತದೆ. ನಾಳೆ ಅಂದರೆ ಮಾರ್ಚ್ 18 ರಂದು ಹೋಳಿ ಹುಣ್ಣಿಮೆಯನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ವಿವಿಧ ರಾಜ್ಯಗಳಲ್ಲಿ ತಯಾರಿ ಜೋರಾಗಿದೆ. ವಸಂತಕಾಲದ ಆಗಮನ, ಚಳಿಗಾಲದ ಅಂತ್ಯದ ಈ ದಿನ ಆಪ್ತರೊಂದಿಗೆ ಸಿಹಿ ಹಂಚಿ ಆಚರಿಸಲಾಗುತ್ತದೆ. ದುಷ್ಟ ಶಕ್ತಿಯನ್ನು ವಧಿಸಿ ಜಯಗಳಿಸಿದ ಸಂಕೇತವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಮನೆಗಳನ್ನು ರಂಗೋಲಿಯಿಂದ ಅಲಂಕರಿಸುವುದನ್ನು ಮರೆಯುವ ಮಾತಿಲ್ಲ. ರಂಗೋಲಿ ಸಾಂಪ್ರದಾಯಿಕ ಪದ್ಧತಿ. ಹಬ್ಬ ಹರಿದಿನಗಳು ಯಾವುದೇ ಇರಲಿ ಮನೆಯ ಮುಂದೆ ರಂಗೋಲಿ ಇದ್ದರೆ ಅದರ ರಂಗೇ ಬೇರೆ. ಹೀಗಿದ್ದಾಗ ಬಣ್ಣಗಳ ಹಬ್ಬ ಹೋಳಿಯಂದು ಬಣ್ಣದ ರಂಗೋಲಿಯನ್ನು ಬಿಡಲು ಸಾಧ್ಯವಿಲ್ಲ. ಹೀಗಾಗಿ ಹೋಳಿಯ ದಿನ ಯಾವ ರೀತಿ ರಂಗೋಲಿಯನ್ನು ಹಾಕಬಹುದು ಎನ್ನುವುದನ್ನು ನೀವು ಯೋಚಿಸುತ್ತಿದ್ದರೆ ಇಲ್ಲಿದೆ ನೋಡಿ. ಈ ರೀತಿಯ ರಂಗೋಲಿಗಳನ್ನು ಮನೆಯ ಮುಂದೆ ಹಾಕಿ ಸಂಭ್ರಮದ ಹೋಳಿ ಆಚರಿಸಿ.
View this post on Instagram
View this post on Instagram
ಹೋಳಿಯಂದು ನೀವು ಕೇವಲ ಬಣ್ಣಗಳಿಂದ ಮಾತ್ರವಲ್ಲ. ವಿವಿಧ ಬಣ್ಣಗಳ ಹೂವಿನ ಎಸಳುಗಳಿಂದಲೂ ರಂಗೋಲಿಯನ್ನು ಹಾಕಬಹುದು.
View this post on Instagram