Theatre: ಅಂಕಪರದೆ: ‘ನಡುರಾತ್ರಿಯ ಪುಳಕ’ ನೋಡಲು ಜೂನ್ 1ಕ್ಕೆ ರಂಗಶಂಕರಕ್ಕೆ ಬನ್ನಿ

|

Updated on: Jun 01, 2022 | 3:05 PM

Play : ಸರಿಯಾಗಿ ಕೇಳುಸ್ಕೊಳಿ. ಅವ್ನತ್ರ ಇದ್ದಿದ್ದೇ ಎಲ್ಡು ಊ. ಇದೇನಾರ ಓಯ್ತು ಅಂದ್ರೆ ನಾಟಕ ಖಾತಮ್. ಇದು ರೋಜಾ ಕಲರ್ ಊ. ಇದುನ್ನ ಯಾರ ಮೂಗಿಗೆ ಹಿಡುದು ವಾಸನೆ ತೋರಿಸಿದ್ರೆ ಅವರ ಕಣ್ಣಿಗೆ ಯಾರು ಮೊದ್ಲು ಬೀಳ್ತಾರೋ ಅವರನ್ನ ಲೌ ಮಾಡ್ತಾರೆ.

Theatre: ಅಂಕಪರದೆ: ‘ನಡುರಾತ್ರಿಯ ಪುಳಕ’ ನೋಡಲು ಜೂನ್ 1ಕ್ಕೆ ರಂಗಶಂಕರಕ್ಕೆ ಬನ್ನಿ
ನಿರ್ದೇಶಕ ಎಸ್. ಸುರೇಂದ್ರನಾಥ್, ನಟರಾದ ಸಿಹಿಕಹಿ ಚಂದ್ರು, ಸುಂದರ ರಾಜ್, ಹುಲಗಪ್ಪ ಕಟ್ಟೀಮನಿ
Follow us on

ಅಂಕಪರದೆ | Ankaparade :  ಈ ನಾಟಕ ಹಗುರಾಗಿ ಶೇಕ್ಸ್‌ಪಿಯರನ ‘ಎ ಮಿಡ್‌ ಸಮ್ಮರ್‌ ನೈಟ್ಸ್‌ ಡ್ರೀಮ್‌’ ನಾಟಕವನ್ನು ಆಧರಿಸಿದೆ. ಹಾಗೆ ನೋಡಲು ಹೋದರೆ ಈ ನಾಟಕ ‘ಸಂಕೇತ್‌’ನ ಅತಿ ಯಶಸ್ವಿ ಕಾಮೆಡಿಯಾದ ‘ನೀನಾನಾದ್ರೆ ನಾನೀನೇನಾ’ ನಾಟಕದ ಮುಂದುವರೆದ ಭಾಗವೆಂದೇ ಹೇಳಬೇಕು. ಸದಾ ಅನುಮಾನದಲ್ಲಿ ಬೇಯುತ್ತಿರುವ ತನ್ನ ಹೆಂಡತಿಯನ್ನು ಓಲೈಸಲು ಸಿಕ್ಕೋಜಿ ಸತತ ಪ್ರಯತ್ನ ಮಾಡುತ್ತಲೇ ಇದ್ದಾನೆ. ಪ್ರಸ್ತುತ ಆತನಿಗೆ ಬೇಕಾಗಿರುವುದು ಒಂದು ತಾಯತ, ಅಥವಾ ಒಂದು ಮಂತ್ರ. ತನ್ನ ಸೆಕ್ರೆಟರಿ ಪಾಟೀಲನನ್ನು ಅದಕ್ಕಾಗಿ ಕಳುಹಿಸಿದ್ದಾನೆ. ಇತ್ತ ಮಾರ್ತಾಂಡರಾಯ ಸಿಕ್ಕೋಜಿಯಲ್ಲಿ ಒಂದು ಮನವಿ ಸಲ್ಲಿಸಲು ಬರುತ್ತಾನೆ – ಆತನ ಮಗಳು ಒಬ್ಬ ಕವಿಯನ್ನು ಪ್ರೀತಿಸುತ್ತಿದ್ದಾಳೆ, ಅದು ತನಗೆ ಇಷ್ಟವಿಲ್ಲ. ಅದನ್ನು ಹೇಗಾದರೂ ಮಾಡಿ ನಿಲ್ಲಿಸಬೇಕು. ಈ ಪ್ರಯತ್ನ ನಾಲ್ವರು ಪ್ರೇಮಿಗಳನ್ನು ಒಳಗೊಂಡಿದೆ. ಈ ಚತುಷ್ಕೋಣದಲ್ಲಿ ಸಿಲುಕಿರುವ ಪ್ರೇಮಿಗಳು ತಮ್ಮದೇ ಸುಳಿಯಲ್ಲಿದ್ದಾರೆ.

ಸಿಕ್ಕೋಜಿ ತನ್ನ ಮದುವೆಯ ಎರಡನೇ ವಾರ್ಷಿಕೋತ್ಸವವನ್ನು ಆಚರಿಸಲಿದ್ದಾನೆ. ಅದಕ್ಕಾಗಿ ತನ್ನ ಮನೆಯಲ್ಲಿ ಒಂದು ನಾಟಕ ಏರ್ಪಡಿಸಿದ್ದಾನೆ. ಈ ನಾಟಕ ಕಂಪನಿ ಕೂಡಾ ತನ್ನದೇ ತಾಪತ್ರಯಗಳಲ್ಲಿ ಸಿಕ್ಕಿ ಹಾಕಿಕೊಂಡಿದೆ. ಇಂಥಾ ಹೊತ್ತಿನಲ್ಲಿ ಆ ಮಂತ್ರ ಇಬ್ಬರು ಕುಡುಕರ ಕೈಲಿ ಸಿಕ್ಕರೆ ಏನಾಗಬೇಡ… ಸಿಕ್ಕೋಜಿಗೆ ತನ್ನ ಹೆಂಡತಿ ದೊರಕಿದಳೇ, ನಾಲ್ವರು ಪ್ರೇಮಿಗಳಿಗೆ ತಮ್ಮ ತಮ್ಮ ಪ್ರೇಮಿಗಳು ಸಿಕ್ಕರೇ… ನಾಟಕ ಕಂಪನಿ ಯಶಸ್ವಿಯಾಗಿ ತನ್ನ ನಾಟಕವನ್ನು ಪ್ರದರ್ಶಿಸಿತೇ…

ಇದನ್ನೂ ಓದಿ : ಅಂಕಪರದೆ : ಯಾರವರು ಖಳನಾಯಕರು ‘ಪ್ರಾಜೆಕ್ಟ್ ನಗ್ನ’ದಲ್ಲಿ ಮೇ 27ರಂದು ರಂಗಶಂಕರದಲ್ಲಿ ಬಯಲಾಗಲಿದೆ!

ಇದನ್ನೂ ಓದಿ
Gokak Falls: ಬಾಲ್ಯದ ಈ ಪಠ್ಯಪುಸ್ತಕಗಳೇ ನನ್ನಲ್ಲಿ ಮಾನವೀಯ ಪ್ರಜ್ಞೆ ಜಾಗೃತಗೊಳಿಸಿದ್ದು
ಅಂಕಪರದೆ : ಯಾರವರು ಖಳನಾಯಕರು ‘ಪ್ರಾಜೆಕ್ಟ್ ನಗ್ನ’ದಲ್ಲಿ ಮೇ 27ರಂದು ರಂಗಶಂಕರದಲ್ಲಿ ಬಯಲಾಗಲಿದೆ!
ಅಂಕಪರದೆ: ಇಂದು ಸಂಜೆ ‘ಶೇಕ್ಸಪಿಯರನ ಶ್ರೀಮತಿ’ ಬರುತ್ತಿದ್ದಾರೆ, ‘ವ್ಯೋಮ‘ಕ್ಕೆ ಬಂದುಬಿಡಿ
ಅಂಕಪರದೆ: ರಂಗಶಂಕರದಲ್ಲಿ ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’ ನಾಟಕ ಇಂದು ಪ್ರದರ್ಶನ

“ಸರಿಯಾಗಿ ಕೇಳುಸ್ಕೊಳಿ. ಅವ್ನತ್ರ ಇದ್ದಿದ್ದೇ ಎಲ್ಡು ಊ. ಇದೇನಾರ ಓಯ್ತು ಅಂದ್ರೆ ನಾಟಕ ಖಾತಮ್. ಇದು ರೋಜಾ ಕಲರ್ ಊ. ಇದುನ್ನ ಯಾರ ಮೂಗಿಗೆ ಹಿಡುದು ವಾಸನೆ ತೋರಿಸಿದ್ರೆ ಅವರ ಕಣ್ಣಿಗೆ ಯಾರು ಮೊದ್ಲು ಬೀಳ್ತಾರೋ ಅವರನ್ನ ಲೌ ಮಾಡ್ತಾರೆ. ಇದು ನೇರಳೆ ಕಲರ್ ಊ. ಇದುನ್ನ ಅವರ ಕಣ್ಣಿಗೆ ಸವರಿದೆ ಮೊದುಲಿನಂಗೆ ಆಗ್ತಾರೆ. ಸರಿ ನಾನು ಬರ್ತೀನಿ. ಒಂದು ಸಿಸ್ಟಿ ಟೇಬಲ್ ಮೇಲೆ ಅಂಗೇ ಇದೆ.”

ಸಂಭಾಷಣೆ ಕುತೂಹಲಕರವಾಗಿದೆ ಅಂದಮೇಲೆ ನಾಟಕ ಹೇಗಿರಬಹುದು? ಬನ್ನಿ ನಾಳೆ.

ನಾಟಕ : ನಡುರಾತ್ರಿಯ ಪುಳಕ
ತಂಡ : ಸಂಕೇತ್, ಬೆಂಗಳೂರು
ವಿನ್ಯಾಸ, ರಚನೆ, ನಿರ್ದೇಶನ : ಎಸ್. ಸುರೇಂದ್ರನಾಥ್
ನಟವರ್ಗ : ಸಿಹಿಕಹಿ ಚಂದ್ರು, ಹುಲುಗಪ್ಪ ಕಟ್ಟೀಮನಿ, ಸುಂದರರಾಜ್‌ ಮುಂತಾದವರು ನಟವರ್ಗದಲ್ಲಿದ್ದಾರೆ.
ದಿನಾಂಕ : ಜೂನ್ 2, 3
ಸಮಯ : ಸಂಜೆ 7.30
ಟಿಕೇಟ್ ದರ : ರೂ. 200 
ಟಿಕೆಟ್​ಗಾಗಿ ಕ್ಲಿಕ್ ಮಾಡಿ 

*

ಗಮನಿಸಿ : ‘ಅಂಕಪರದೆ’ಯ ಮೂಲಕ ಕಲಾಸಕ್ತರನ್ನು ನೀವು ತಲುಪಲು ಬಯಸಿದಲ್ಲಿ ಪ್ರದರ್ಶನಕ್ಕೆ ಒಂದು ವಾರವಿರುವಾಗ ನಮಗೆ ತಿಳಿಸಿ. ಹಾಗೆಯೇ ಕಲಾಸಕ್ತರು, ಕಲಾತಜ್ಞರು, ಪ್ರದರ್ಶನ ಕಲೆಗಳಿಗೆ ಸಂಬಂಧಿಸಿದ ಯಾವುದೇ ವಿಷಯ, ವಿಚಾರ, ಒಳನೋಟಗಳನ್ನು ಹಂಚಿಕೊಳ್ಳಲು ನಮ್ಮನ್ನು ಸಂಪರ್ಕಿಸಿ :tv9kannadadigital@gmail.com

Published On - 3:03 pm, Wed, 1 June 22