ಅಂಕಪರದೆ : ಯಾರವರು ಖಳನಾಯಕರು ‘ಪ್ರಾಜೆಕ್ಟ್ ನಗ್ನ’ದಲ್ಲಿ ಮೇ 27ರಂದು ರಂಗಶಂಕರದಲ್ಲಿ ಬಯಲಾಗಲಿದೆ!
Project Nagna : ‘ಆಳ್ವಿಕೆ ಹೆಸರಲ್ಲಿ ದಬ್ಬಾಳಿಕೆ ನಡೆಸೋ ಸಾಮ್ಯಾಜ್ಯಶಾಹಿ ಹಂದಿಗಳು. ಗುಲಾಮರು. ಬಾಡಿಗೆ ಬಂಟರು ಥೂ. ಆ ಗೂಂಡಾಗಳು ತಮ್ಮ ನಾಡದೋಣಿಗಳ ಮೇಲೆ ತಮ್ಮ ಹಡಗನ್ನ ಓಡಿಸಿದ್ರು. ಆಮೇಲೆ ಗುಂಡು ಹಾರಿಸಿದ್ರು’.
ಅಂಕಪರದೆ | Ankaparade : ರಾಮ್ ಗಣೇಶ್ ಕಮತಮ್ (Ram Ganesh Kamatam) ಇಂಗ್ಲಿಷ್ನಲ್ಲಿ ಬರೆದ ಈ ನಾಟಕವನ್ನು ಮೊದಲು ಓದಿದಾಗ ಒಂದು ಪ್ರಶ್ನೆ ಗಾಢವಾಗಿ ಕಾಡಿತು. ಈ ನಾಟಕದಲ್ಲಿ ನಾಯಕರು ಯಾರು? ಮತ್ತೆ ಮತ್ತೆ ಇದನ್ನು ಓದಿದಾಗ ಅನ್ನಿಸಿದ್ದು ಅವರಿಬ್ಬರೂ ಇಲ್ಲವೇ ಇಲ್ಲ ಎಂದು. ಇಲ್ಲಿ ನಿಜವಾದ ಕಥಾನಾಯಕರು ಚಿಕ್ಕ ದ್ವೀಪವೊಂದರಲ್ಲಿ ವಾಸಿಸುವ ಬುಡಕಟ್ಟು ಜನಗಳು. ದೊಡ್ಡದೊಡ್ಡ ಬಂಡವಾಳಶಾಹಿ ಕಂಪನಿಗಳ ದರ್ಪ, ದುರಾಸೆಗಳ ತುಳಿತವೇ ಖಳನಾಯಕರು. ರಂಗದ ಮೇಲೆ ಕಾಣಿಸಿಕೊಳ್ಳುವವರು ಕೇವಲ ಅವರು ಬಿಸಾಕುವ ದುಡ್ಡಿನ ಆಸೆಗೆ ಅವರ ಕೈಕೆಳಗೆ ಕೆಲಸ ಮಾಡುವ ಕೈಗೊಂಬೆಗಳು ಮಾತ್ರ. ವಿಕಾಸ ಎಂದರೇನು, ಪ್ರಗತಿ ಎಂದರೇನು? ಬಂಡವಾಳಶಾಹಿ ಕಂಪನಿಗಳು ಪ್ರಗತಿಯ ಹೆಸರಿನಲ್ಲಿ ಸುಳ್ಳು ಹೇಳಿಕೊಂಡು ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಹಾಳುಗೆಡವುವಾಗ ವಿಕಾಸ ಎನ್ನುವುದು ಯಾರದು? ಬುಡಕಟ್ಟು ಜನರು ಪ್ರಕೃತಿಯೊಂದಿಗೆ ಬೆರೆತು ಬದುಕುವಾಗ ನಿಜವಾಗಲೂ ಪ್ರಗತಿ ಹೊಂದುವವರು ಯಾರು? ಇವರಿಬ್ಬರ ನಡುವೆ ಅಲ್ಲಿರುವ ಚಿಕ್ಕಪುಟ್ಟ ಮೀನುಗಾರರನ್ನು ಭಯೋತ್ಪಾದಕರಾಗಿ ಪರಿವರ್ತಿಸುವ ಹಿಂದಿನ ಕೈಗಳು ಯಾರವು? ದ್ವೀಪದ ನೆಮ್ಮದಿಯನ್ನು ಕದಡುವ ವಿಕೃತ ಶಕ್ತಿಗಳು ಯಾವುವು? ಇಂಥ ಪ್ರಶ್ನೆಗಳೇ ಈ ನಾಟಕವನ್ನು ನಿರ್ದೇಶಿಸಿ ಪ್ರಯೋಗಿಸಲು ಪ್ರೇರೇಪಿಸಿತು. ಅರ್ಚನಾ ಶ್ಯಾಮ್, ನಿರ್ದೇಶಕಿ, ‘ಅಂತರಂಗ’
‘ನಾವು ಒಂದೇ ದಿನ 300 ಜನರನ್ನ ಕೆಲಸದಿಂದ ತೆಗೆದ್ ಹಾಕಿದ್ವಿ. ಯಾಕೆ? ಯಾಕಂದ್ರೆ ಅವ್ರು ನಮಗೆ ಉಪಯೋಗಕ್ಕೆ ಬರ್ತಿರಲಿಲ್ಲ. ನಾವು ಮ್ಯಾನುಫ್ಯಾಕ್ಚರಿಂಗ್ ಅಂಡ್ ಗೂಡ್ಸ್ ಯುಗದಿಂದ ಕಪ್ಪೆಗಳ ಹಾಗೆ ಇನ್ಫಾರ್ಮೇಷನ್ ಏಜ್ ಗೆ ಹಾರಿದೀವಿ. The knowledge economy and these people are still discovering fire? ಈ ಐಲ್ಯಾಂಡ್ ಜನ ಎಕ್ಸೆಸ್ ಬ್ಯಾಗೇಜ್ ಆಗಿದಾರೆ. ಈವತ್ ಈ ಹಿತರಕ್ಷಣೆ ಎಲ್ಲಾ ನಿಂತೋಗಬೇಕು.’
‘ಆಳ್ವಿಕೆ ಹೆಸರಲ್ಲಿ ದಬ್ಬಾಳಿಕೆ ನಡೆಸೋ ಸಾಮ್ಯಾಜ್ಯಶಾಹಿ ಹಂದಿಗಳು. ಗುಲಾಮರು. ಬಾಡಿಗೆ ಬಂಟರು ಥೂ. ಆ ಗೂಂಡಾಗಳು ತಮ್ಮ ನಾಡದೋಣಿಗಳ ಮೇಲೆ ತಮ್ಮ ಹಡಗನ್ನ ಓಡಿಸಿದ್ರು. ಆಮೇಲೆ ಗುಂಡು ಹಾರಿಸಿದ್ರು’.
‘ನಿಮಗೆ ಸಂತೋಷವಾಗುವಂಥ ವಿಷಯ ಇದೆ. ನಾವು ಡಿಸಾಸ್ಟರ್ ಫಂಡ್ ನಾ ರೇಸ್ ಮಾಡ್ತಿದೀವಿ. ನಾವು ಈ ಫಂಡ್ನಾ ಐಲ್ಯಾಂಡ್ ಜನರ ಪ್ರಯೋಜನಕ್ಕೆ ಉಪಯೋಗಿಸಬುದಾ ಮತ್ತು ಟಿಕ್ಕು ಕಪ್ಪೆ ಇದಕ್ಕೆ ಸಹಾಯ ಆಗೋ ಥರ ಪ್ರಾಜೆಕ್ಟ್ ನಗ್ನದಲ್ಲೇ ಒಂದು ಹೊಸ ಸ್ಕೀಮ್ ನಾ ರೆಡಿ ಮಾಡ್ತಿದೀವಿ.’ (‘ಪ್ರಾಜೆಕ್ಟ್ ನಗ್ನ’ದಿಂದ)
ಈ ನಾಟಕದಲ್ಲಿ ಅಮೂರ್ತ ಹಾಗೂ ವಿಡಂಬನೆ ಎರಡೂ ಅಂಶಗಳು ಇವೆ. ನಾಟಕದ ವಸ್ತು ಅರ್ಥವಾಗಲು ಸಭಿಕರು ಸ್ವಲ್ಪ ಆಸಕ್ತಿ, ಏಕಾಗ್ರತೆಯಿಂದ ನಾಟಕ ನೋಡಬೇಕಾಗುವುದರಿಂದ, ಅದನ್ನು ಸರಳೀಕರಿಸುವತ್ತ ನಿರ್ದೇಶಕರು ಶ್ರಮಿಸಿದ್ದಾರೆ. ‘ನಾಟಕಕಾರ ಹಾಗೂ ನಟರ ಜತೆ ಅನೇಕ ಚರ್ಚೆಗಳನ್ನು ಮಾಡಿ, ಅವರೆಲ್ಲರ ಅನುಭವ ಹಾಗೂ ಸಲಹೆಗಳನ್ನು ಗಣನೆಗೆ ತೆಗೆದುಕೊಂಡು ಪ್ರತಿಯೊಂದು ಅಂಶಗಳನ್ನೂ ಅಳೆದು, ತೂಗಿ ಒಂದು ಹದಕ್ಕೆ ತಂದಿದ್ದೇನೆ. ನನ್ನ ನಟವರ್ಗ ತುಂಬಾ ಕಷ್ಟಪಟ್ಟು ಇಷ್ಟಪಟ್ಟು ಅವರವರ ಪಾತ್ರಗಳಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಶ್ರಮ ಹಾಕಿ ಕೆಲಸ ಮಾಡಿದೆ. ಉಳಿದಂತೆ ಕಲಾವಿನ್ಯಾಸ, ಬೆಳಕು, ಸಂಗೀತವನ್ನು ನೋಡಿಯೇ ಅನುಭವಿಸಬೇಕು’ ಎನ್ನುತ್ತಾರೆ ಅರ್ಚನಾ.
ನಾಟಕ: ಪ್ರಾಜೆಕ್ಟ್ ನಗ್ನ
ತಂಡ : ಅಂತರಂಗ, ಬೆಂಗಳೂರು
ರಚನೆ, ಮೂಲ ಇಂಗ್ಲಿಷ್ :
ಕನ್ನಡಕ್ಕೆ : ಬಿ. ಸುರೇಶ
ಸ್ಥಳ : ರಂಗಶಂಕರ
ದಿನಾಂಕ : 27.5.2022
ಸಮಯ : ಸಂಜೆ 7.30
ಟಿಕೆಟ್ : ಕ್ಲಿಕ್ ಮಾಡಿ
*
ಗಮನಿಸಿ : ‘ಅಂಕಪರದೆ’ಯ ಮೂಲಕ ಕಲಾಸಕ್ತರನ್ನು ನೀವು ತಲುಪಲು ಬಯಸಿದಲ್ಲಿ ಪ್ರದರ್ಶನಕ್ಕೆ ಒಂದು ವಾರವಿರುವಾಗ ನಮಗೆ ತಿಳಿಸಿ. ಹಾಗೆಯೇ ಕಲಾಸಕ್ತರು, ಕಲಾತಜ್ಞರು, ಪ್ರದರ್ಶನ ಕಲೆಗಳಿಗೆ ಸಂಬಂಧಿಸಿದ ಯಾವುದೇ ವಿಷಯ, ವಿಚಾರ, ಒಳನೋಟಗಳನ್ನು ಹಂಚಿಕೊಳ್ಳಲು ನಮ್ಮನ್ನು ಸಂಪರ್ಕಿಸಿ :tv9kannadadigital@gmail.com