Lakshmibai Enagi Death : ‘ಇಕಿ ಬಂದಿದ್ದಕ್ಕನ ನನ್ನ ಉದ್ದ ಕೂದಲಿಗೆ ಮುಕ್ತಿ ಸಿಕ್ತು ನೋಡವಾ’

Theatre Artist : ಲಕ್ಷ್ಮೀಬಾಯಿ ಕೇವಲ ನಟಿಯಾಗಿರಲಿಲ್ಲ. ಕಲಾವಿದರಿಗೆಲ್ಲ ತಾಯಿಯ ಮಮತೆ ತೋರುತ್ತ, ತನ್ನ ಮಕ್ಕಳ ಶಿಕ್ಷಣವನ್ನೂ ನಿಭಾಯಿಸುತ್ತ ಕಂಪನಿಯ ಆಡಳಿತ ವ್ಯವಸ್ಥೆಯನ್ನೂ ನಿಭಾಯಿಸಬಲ್ಲವರಾಗಿದ್ದರು.

Lakshmibai Enagi Death : ‘ಇಕಿ ಬಂದಿದ್ದಕ್ಕನ ನನ್ನ ಉದ್ದ ಕೂದಲಿಗೆ ಮುಕ್ತಿ ಸಿಕ್ತು ನೋಡವಾ’
ರಂಗಕಲಾವಿದೆ ಲಕ್ಷ್ಮೀಬಾಯಿ ಏಣಗಿ. ಫೋಟೋ ಸೌಜನ್ಯ : ರಾಮಚಂದ್ರ ಕುಲಕರ್ಣಿ
Follow us
ಶ್ರೀದೇವಿ ಕಳಸದ
|

Updated on:May 04, 2022 | 2:50 PM

Lakshmibai Enagi : ಏಣಗಿ ಬಾಳಪ್ಪನವರ ಎರಡನೇ ಪತ್ನಿ  ಲಕ್ಷ್ಮೀಬಾಯಿಯವರು. ಅವರ ಮಕ್ಕಳು ನಟರಾಜ್ ಮತ್ತು ಭಾಗ್ಯಶ್ರೀ. ನಟರಾಜ ಈಗಿಲ್ಲ. 1986ರಲ್ಲಿ ನಟರಾಜ, ನಾನು ನನ್ನ ಪತಿ ಬಸಲಿಂಗಯ್ಯ ಹಿರೇಮಠ ಎಲ್ಲರೂ ನೀನಾಸಂ ರಂಗಶಿಕ್ಷಣದಲ್ಲಿ ಪರಸ್ಪರ ಪರಿಚಿತರಾದೆವು. ಅಲ್ಲಿಂದ ಧಾರವಾಡಕ್ಕೆ ಬಂದು ನಮ್ಮ ರಂಗಚಟುವಟಿಕೆಗಳನ್ನು ಶುರು ಮಾಡಿದೆವು. ಅದೇ ಹೊತ್ತಿಗೆ ಲಕ್ಷ್ಮೀಬಾಯಿ ಮತ್ತು ಬಾಳಪ್ಪನವರು ತಮ್ಮ ಕಲಾವೈಭವ ನಾಟ್ಯಸಂಘದ ಬಾಗಿಲು ಮುಚ್ಚಿ 1991ರಲ್ಲಿ ಧಾರವಾಡದ ಹವ್ಯಾಸಿ ರಂಗಭೂಮಿಯ ನಂಟನ್ನು ಬೆಳೆಸಿಕೊಳ್ಳಲು ಪ್ರಾರಂಭಿಸಿದರು. ಮಕ್ಕಳಾದ ನಟರಾಜ, ಭಾಗ್ಯಶ್ರೀ ಕಲಾಜೀವನಕ್ಕೊಂದು ಬುನಾದಿ ಹಾಕುವುದು ಅವರ ಉದ್ದೇಶವಾಗಿತ್ತು. ಆಗ ಬಂದಾಗೆಲ್ಲ ತಿಂಗಳುಗಟ್ಟಲೆ ನಮ್ಮ ಮನೆಯಲ್ಲಿಯೇ ವಾಸ್ತವ್ಯ ಹೂಡುತ್ತಿದ್ದರು. ಲಕ್ಷ್ಮೀಬಾಯಿಯವರನ್ನು ಇಡೀ ರಂಗಭೂಮಿ ಕುಟುಂಬ ಅವ್ವಾವ್ರು ಎಂದೇ ಕರೆಯುತ್ತಿತ್ತು. ಬಹಳ ಅಂತಃಕರಣದ ಜೀವ. ನಂತರ ಚಂಪಾ ಅವರೊಂದಿಗೆ ‘ಮ್ಯಾಳ’ ರಂಗತಂಡವನ್ನು ಕಟ್ಟಿದೆವು. ಗ್ರಾಮೀಣ, ಜಾನಪದ ರಂಗಭೂಮಿಯ ಬಗ್ಗೆ ಒಟ್ಟಾಗಿ ಸಾಕಷ್ಟು ಕೆಲಸವನ್ನು ಮಾಡಿದೆವು. ವಿಶ್ವೇಶ್ವರಿ ಬಸಲಿಂಗಯ್ಯ ಹಿರೇಮಠ, ಧಾರವಾಡ, ಜಾನಪದ-ರಂಗಭೂಮಿ ಕಲಾವಿದೆ

ಅವ್ವಾವ್ರು ಯಾವ ರಂಗತಾಲೀಮನ್ನೂ ತಪ್ಪಿಸುತ್ತಿರಲಿಲ್ಲ. ಒಂದೊಂದು ಸೂಕ್ಷ್ಮವನ್ನೂ ಗಮನಿಸುತ್ತಿದ್ದರು. ನಮ್ಮ ಓರೆಕೋರೆಗಳನ್ನು ಅತ್ಯಂತ ವಿನಯದಿಂದ ತಿದ್ದುತ್ತಿದ್ದರು. ಸ್ವತಃ ಅಭಿನಯಿಸಿ ಕಲಿಸುತ್ತಿದ್ದರು. ರಂಗಸಂಬಂಧಿ ಎಲ್ಲಾ ವಿಭಾಗಗಳಲ್ಲೂ ಅವರು ಒಳಗೊಳ್ಳುತ್ತಿದ್ದರು. ಆಗಿನ ಕಾಲದಲ್ಲಿ ಸ್ತ್ರೀಪಾತ್ರಗಳನ್ನು ಗಂಡಸರೇ ಮಾಡುತ್ತಿದ್ದುದರಿಂದ ಏಣಗಿ ಬಾಳಪ್ಪನವರು, ‘ಇಕಿ ಬಂದಿದ್ದಕ್ಕನ ನನ್ನ ಉದ್ದ ಕೂದಲಿಗೂ ಮುಕ್ತಿ ಸಿಕ್ತು ನೋಡವಾ’ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡು ನಗುತ್ತಿದ್ದರು. ಅಂದರೆ 1959ರ ತನಕವೂ ಏಣಗಿ ಬಾಳಪ್ಪನವರು ಸ್ತ್ರೀಪಾತ್ರಗಳನ್ನು ಮಾಡುತ್ತಿದ್ದರು. ಹೆಣ್ಣುಮಕ್ಕಳಿಗೆ ರಂಗಭೂಮಿ ನಿಷಿದ್ಧ ಎನ್ನುವುದು ಅಂಥ ಕಠಿಣಾವಸ್ಥೆಯಲ್ಲಿ ಇದ್ದ ಸಂದರ್ಭ. ಲಕ್ಷ್ಮೀಬಾಯಿ ಕೇವಲ ನಟಿಯಾಗಿರಲಿಲ್ಲ. ಕಂಪನಿಯ ಕಲಾವಿದರಿಗೆಲ್ಲ ತಾಯಿಯ ಮಮತೆ ತೋರುವುದರೊಂದಿಗೆ, ತನ್ನ ಮಕ್ಕಳ ಶಿಕ್ಷಣ ಮೊಟಕಾಗದಂತೆ ನೋಡಿಕೊಳ್ಳುತ್ತ, ಕಂಪನಿಯ ಆಡಳಿತ ವ್ಯವಸ್ಥೆಯನ್ನೂ ನಿಭಾಯಿಸಬಲ್ಲವರಾಗಿದ್ದರು.

ಎಂಥಾ ಚೆಂದ ಹೆಣ್ಣಮಗಳು ಅಂತೇನು ಹೇಳುತ್ತೇವಲ್ಲ ಅದಕ್ಕೆ ಅನ್ವರ್ಥಕ ಲಕ್ಷ್ಮೀಬಾಯಿ. ಸದಾ ಒಂದಿಲ್ಲೊಂದು ಕೆಲಸದಲ್ಲಿ ಮಗ್ನ. ಕೈಮೈಸೋತ ಮೇಲೂ ಕಸೂತಿ ಕೆಲಸದಲ್ಲಿ ತೊಡಗಿಕೊಂಡಿರುತ್ತಿದ್ದರು. ಮೊಣಕಾಲು ದಾಟಿ ಬರುವ ಅವರ ಕೂದಲು, ನೀಳ ಮೂಗು, ಆಕರ್ಷಕ ಕಣ್ಣುಗಳು.. ಬಹಳ ಅಪರೂಪದ ಅಂತರಂಗ ಮತ್ತು ವ್ಯಕ್ತಿತ್ವ. ಕೆಲ ತಿಂಗಳುಗಳ ಹಿಂದೆ ನನ್ನ ಗಂಡ ಬಸಲಿಂಗಯ್ಯನವರನ್ನು ಕಳೆದುಕೊಂಡೆ ಈಗ ಈ ಅವ್ವಾವ್ರು.

ಇದನ್ನೂ ಓದಿ : Lakshmibai Enagi Death : ಲಕ್ಷ್ಮೀಬಾಯಿ ಏಣಗಿಯವರ ‘ಕುಂಕುಮ’ ಕೀರ್ತಿಯ ಸಾಹಸಗಾಥೆ

ಇದನ್ನೂ ಓದಿ : Lakshmibai Enagi death : ಹಿರಿಯ ರಂಗಕಲಾವಿದೆ ಲಕ್ಷ್ಮೀಬಾಯಿ ಏಣಗಿ ನಿಧನ

Published On - 2:46 pm, Wed, 4 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ