LPG Price: ಎಲ್​ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ 102 ರೂಪಾಯಿ ಇಳಿಕೆ

| Updated By: Srinivas Mata

Updated on: Jan 01, 2022 | 12:12 PM

2022ರ ಜನವರಿ ತಿಂಗಳ ವಾಣಿಜ್ಯ ಸಿಲಿಂಡರ್ ಬೆಲೆಯು 102.50 ರೂಪಾಯಿ ಇಳಿಕೆ ಆಗಿದ್ದು, ಆ ನಂತರ ಯಾವ ಪ್ರಮುಖ ನಗರದಲ್ಲಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

LPG Price: ಎಲ್​ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ 102 ರೂಪಾಯಿ ಇಳಿಕೆ
ಸಾಂದರ್ಭಿಕ ಚಿತ್ರ
Follow us on

ಜನವರಿ 1, 2022ರ ಹೊಸ ವರ್ಷದಂದು ಗ್ರಾಹಕರಿಗೆ ಸ್ವಲ್ಪ ನಿರಾಳ ಆಗುವಂತೆ ರಾಷ್ಟ್ರೀಯ ತೈಲ ಮಾರುಕಟ್ಟೆ ಕಂಪೆನಿಗಳು ಶನಿವಾರದಿಂದ ಜಾರಿಗೆ ಬರುವಂತೆ 19 ಕೇಜಿ ವಾಣಿಜ್ಯ ಎಲ್​ಪಿಜಿ ಸಿಲಿಂಡರ್ ಬೆಲೆಯನ್ನು ರೂ. 102.50ರಷ್ಟು ಕಡಿತಗೊಳಿಸಿದೆ. ದೆಹಲಿಯಲ್ಲಿ 19 ಕೇಜಿ ವಾಣಿಜ್ಯ ಸಿಲಿಂಡರ್ ರೂ. 1998.50 ಆಗಲಿದೆ ಎಂದು ಮೂಲಗಳು ತಿಳಿಸಿವೆ. 19 ಕೇಜಿ ಸಿಲಿಂಡರ್‌ನ ಅತಿದೊಡ್ಡ ಬಳಕೆದಾರರಾದ ರೆಸ್ಟೋರೆಂಟ್‌ಗಳು, ತಿನಿಸುಗಳ ಮಾರಾಟ ಮಾಡುವವರು ಮತ್ತು ಟೀ ಸ್ಟಾಲ್‌ಗಳಿಗೆ ಇದು ಸ್ವಲ್ಪ ನಿರಾಳವನ್ನು ನೀಡುತ್ತದೆ. ಕೋಲ್ಕತ್ತಾದಲ್ಲಿ 19 ಕೇಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಈಗ 2,072 ರೂಪಾಯಿ, ಮುಂಬೈನಲ್ಲಿ 19 ಕೇಜಿ ಸಿಲಿಂಡರ್‌ನ ವಾಣಿಜ್ಯ ಗ್ಯಾಸ್ ಬೆಲೆ ಈಗ 1,948.5 ರೂ., ಚೆನ್ನೈನಲ್ಲಿ 19 ಕೇಜಿಯ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 2,132 ರೂಪಾಯಿ ಇದೆ.

ಕಳೆದ ತಿಂಗಳು ಡಿಸೆಂಬರ್ 1ರಂದು 19 ಕೇಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 100 ರೂಪಾಯಿಗಳಷ್ಟು ಹೆಚ್ಚಿಸಲಾಯಿತು. ಇದು ದೆಹಲಿಯಲ್ಲಿ 19 ಕೇಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 2,101 ರೂಪಾಯಿಗೆ ತಂದಿತು. ಇದು 2012-13ರ ನಂತರ 19 ಕೇಜಿ ವಾಣಿಜ್ಯ ಸಿಲಿಂಡರ್‌ನ ಎರಡನೇ ಅತಿ ಹೆಚ್ಚು ಬೆಲೆಯಾಗಿದೆ. ಪ್ರತಿ ಸಿಲಿಂಡರ್‌ಗೆ 2,200 ರೂಪಾಯಿ. ಆದರೂ 14.2 ಕೇಜಿ, 5 ಕೇಜಿ, 10 ಕೇಜಿ ಕಾಂಪೋಸಿಟ್ ಅಥವಾ 5 ಕೇಜಿ ಕಾಂಪೋಸಿಟ್ ಸಿಲಿಂಡರ್‌ಗಳ ಇತರ ದೇಶೀಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಇಳಿಕೆ ಇಲ್ಲ ಮತ್ತು ಅವುಗಳ ಬೆಲೆಗಳು ಒಂದೇ ಆಗಿರುತ್ತವೆ.

ಇದಕ್ಕೂ ಮುನ್ನ ನವೆಂಬರ್ 1ರಂದು 19 ಕೇಜಿಯ ವಾಣಿಜ್ಯ ಸಿಲಿಂಡರ್ ಬೆಲೆ 266 ರೂಪಾಯಿಗೆ ಏರಿಕೆಯಾಗಿದ್ದು, ಬೆಲೆಯನ್ನು 2,000.50 ರೂಪಾಯಿಗೆ ಹೆಚ್ಚಿಸಿದೆ. ಹೊಸ ದರ ಕಡಿತದ ನಂತರ 19 ಕೇಜಿ ಸಿಲಿಂಡರ್ ದೆಹಲಿಯಲ್ಲಿ 2,101 ರೂಪಾಯಿಯಿಂದ 1,998.50 ರೂಪಾಯಿಗೆ ಇಳಿದಿದೆ. ಎಲ್‌ಪಿಜಿ ಸಿಲಿಂಡರ್ ದರವನ್ನು ಭಾರತದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರತಿ ತಿಂಗಳು ಪರಿಷ್ಕರಿಸಲಾಗುತ್ತದೆ. ಈ ಹಿಂದೆ ಅಕ್ಟೋಬರ್ 1ರಂದು 19 ಕೇಜಿ ಸಿಲಿಂಡರ್‌ಗಳ ಬೆಲೆಯನ್ನು 43 ರೂಪಾಯಿ ಮತ್ತು ಅಕ್ಟೋಬರ್ 6ರಂದು 19 ಕೇಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ 2.50 ರೂಪಾಯಿ ಇಳಿಕೆಯಾಗಿತ್ತು. ಸೆಪ್ಟೆಂಬರ್ 1ರಂದು 19 ಕೇಜಿ ಸಿಲಿಂಡರ್ ಬೆಲೆ 75 ರೂಪಾಯಿ ಏರಿಕೆ ಆಗಿತ್ತು.

ಇದನ್ನೂ ಓದಿ: Financial Changes: 2022ರ ಜನವರಿಯಿಂದ ಆಗಲಿರುವ 6 ಹಣಕಾಸು ವಿಚಾರದ ಬದಲಾವಣೆಗಳಿವು