ಆತ್ಮನಿರ್ಭರ್ ಭಾರತ್ ರೋಜ್ಗಾರ್ ಯೋಜನೆ (ABRY) ಅಡಿಯಲ್ಲಿ ನೋಂದಣಿ ಸೌಲಭ್ಯವನ್ನು ಮಾರ್ಚ್ 31, 2022ರ ವರೆಗೆ ವಿಸ್ತರಿಸಲಾಗಿದೆ. ABRY ಅಡಿಯಲ್ಲಿ ನೋಂದಣಿ ಸೌಲಭ್ಯದ ದಿನಾಂಕವನ್ನು ವಿಸ್ತರಿಸುವ ಕುರಿತು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿದೆ. ಟ್ವೀಟ್‌ನಲ್ಲಿ, “#ABRY ಅಡಿಯಲ್ಲಿ ನೋಂದಣಿ ಸೌಲಭ್ಯವನ್ನು 31.03.2022 ರವರೆಗೆ ವಿಸ್ತರಿಸಲಾಗಿದೆ,” ಎಂದು ತಿಳಿಸಿದೆ.
ABRY ಯೋಜನೆಯ ಪ್ರಮುಖ ಮುಖ್ಯಾಂಶಗಳು
1) EPFO ನೊಂದಿಗೆ ನೋಂದಾಯಿಸಲಾದ ಅರ್ಹ ಸಂಸ್ಥೆಗಳ ಉದ್ಯೋಗದಾತರು ಮತ್ತು ಹೊಸ ಉದ್ಯೋಗಿಗಳಿಗೆ ಪ್ರೋತ್ಸಾಹ.
2) ಹೊಸ ಉದ್ಯೋಗಿಗಳು ನೋಂದಣಿ ದಿನಾಂಕದಿಂದ ಎರಡು ವರ್ಷಗಳವರೆಗೆ ಪ್ರೋತ್ಸಾಹವನ್ನು ಪಡೆಯುತ್ತಾರೆ.
3) ಪಾವತಿಯ ರೂಪದಲ್ಲಿ ಪ್ರೋತ್ಸಾಹ –
ಎ) ಉದ್ಯೋಗಿಗಳು ಮತ್ತು ಉದ್ಯೋಗದಾತರ ಕೊಡುಗೆ, ಅಂದರೆ 1000 ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ಹೊಸ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ವೇತನದ ಶೇಕಡಾ 24ರಷ್ಟು ಮತ್ತು
ಬಿ) ಕೇವಲ ನೌಕರರ EPF, ಅಂದರೆ 1000ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಲ್ಲಿ ಹೊಸ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ವೇತನದ ಶೇ 12ರಷ್ಟು
4) ಮೇಲಿನ ಉಲ್ಲೇಖದ ಮೇಲೆ ನಿಗದಿತ ಕನಿಷ್ಠ ಸಂಖ್ಯೆಯ ಹೊಸ ಉದ್ಯೋಗಿಗಳನ್ನು ಸೇರಿಸಿದರೆ ಸಂಸ್ಥೆಯು ಪ್ರೋತ್ಸಾಹಕ್ಕೆ ಅರ್ಹವಾಗಿರುತ್ತದೆ
5) ಉದ್ಯೋಗಿಗಳ ಉಲ್ಲೇಖದ ಆಧಾರವನ್ನು 2020ರ ಸೆಪ್ಟೆಂಬರ್ಗೆ ECRನಲ್ಲಿ ಕೊಡುಗೆ ಎಂದು ಇಪಿಎಫ್ ಸದಸ್ಯರ ಸಂಖ್ಯೆಯಾಗಿ ತೆಗೆದುಕೊಳ್ಳಲಾಗಿದೆ
6) ರೂ. 15000 ಕ್ಕಿಂತ ಕಡಿಮೆ ಮಾಸಿಕ ವೇತನದೊಂದಿಗೆ ಸೇರುವ ಹೊಸ ಉದ್ಯೋಗಿಗಳು ನೋಂದಣಿ ದಿನಾಂಕದಿಂದ 24 ತಿಂಗಳ ವೇತನವರೆಗೆ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
7) 1ನೇ ಅಕ್ಟೋಬರ್ 2020ರ ನಂತರ EPFOನಲ್ಲಿ ನೋಂದಾಯಿಸಲಾದ ಸಂಸ್ಥೆಗಳು ಎಲ್ಲ ಹೊಸ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಪ್ರಯೋಜನಗಳನ್ನು ಪಡೆಯುತ್ತವೆ.
Registration facility under #ABRY has been extended till 31.03.2022.#EPFO #Employees @byadavbjp @Rameswar_Teli @PMOIndia @PIB_India @PIBHindi @MIB_India @mygovindia @PTI_News @LabourMinistry @wootaum pic.twitter.com/q0pZEJI9HB
— EPFO (@socialepfo) January 10, 2022
ABRY ಯೋಜನೆ
ABRY ಅಡಿಯಲ್ಲಿ, 1,000 ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಉದ್ಯೋಗಿಗಳು ಮತ್ತು ಉದ್ಯೋಗದಾತರ ಪಾಲು, ಅಂದರೆ ವೇತನದ ಶೇ 24ರಷ್ಟು (ತಲಾ ಶೇ 12ರಷ್ಟು ವೇತನ) ಸರ್ಕಾರ ಪಾವತಿಸುತ್ತದೆ. ಒಂದು ವೇಳೆ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳಿದ್ದಲ್ಲಿ ಶೇ 12ರಷ್ಟು ನೌಕರರ ಕೊಡುಗೆಯನ್ನು ಸರ್ಕಾರವು ಪಾವತಿಸುತ್ತಿದೆ ಎಂದು ಸದನಕ್ಕೆ ತಿಳಿಸಲಾಗಿತ್ತು.
4, ಡಿಸೆಂಬರ್ 2021ರಂತೆ 39.73 ಲಕ್ಷ ಹೊಸ ಉದ್ಯೋಗಿಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ ಮತ್ತು ರೂ. 2612.10 ಕೋಟಿಯ ಪ್ರಯೋಜನಗಳನ್ನು ಅವರ ಖಾತೆಗಳಲ್ಲಿ ಮುಂಗಡವಾಗಿ ಜಮಾ ಮಾಡಲಾಗಿದೆ.
ಇದನ್ನೂ ಓದಿ: ಭಾರತ್ ಎಲೆಕ್ಟ್ರಾನಿಕ್ಸ್ಗೆ ಆತ್ಮನಿರ್ಭರ್ ಪ್ಯಾಕೇಜ್ ಅಡಿ ರೂ. 2400 ಕೋಟಿಯ ಆರ್ಡರ್ ನೀಡಿದ ಎಚ್ಎಎಲ್