ನೀವೇನಾದರೂ ಬ್ಯಾಂಕ್ ಲಾಕರ್ ಬಾಡಿಗೆಗೆ ಪಡೆಯಬೇಕು ಅಂತ ಆಲೋಚನೆ ಮಾಡುತ್ತಿದ್ದೀರಾ? ಅದಕ್ಕೂ ಮುಂಚೆ ಜನವರಿ 1, 2022ರಿಂದ ಜಾರಿಗೆ ಬಂದಿರುವ ಹೊಸ ನಿಯಮಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸೆಪ್ಟೆಂಬರ್‌ನಲ್ಲಿ ಸೇಫ್ ಡೆಪಾಸಿಟ್ ಲಾಕರ್‌ಗೆ ಸಂಬಂಧಿಸಿದಂತೆ ಮತ್ತು ಸೇಫ್ ಕಸ್ಟಡಿಯಲ್ಲಿನ ವಸ್ತುಗಳಿಗೆ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. “ಜನವರಿ 1, 2022ರಿಂದ ಪರಿಷ್ಕೃತ ಸೂಚನೆಗಳು ಜಾರಿಗೆ ಬರುತ್ತವೆ (ನಿರ್ದಿಷ್ಟಪಡಿಸಿದ ಸ್ಥಳಗಳನ್ನು ಹೊರತುಪಡಿಸಿ). ಮತ್ತು ಹೊಸ ಹಾಗೂ ಅಸ್ತಿತ್ವದಲ್ಲಿರುವ ಸೇಫ್ ಡೆಪಾಸಿಟ್ ಲಾಕರ್‌ಗಳು ಮತ್ತು ಬ್ಯಾಂಕ್ಗಳಲ್ಲಿರುವ ವಸ್ತುಗಳ ಸುರಕ್ಷಿತವಾಗಿ ಇಡುವ ಸೌಲಭ್ಯ ಎರಡಕ್ಕೂ ಇದು ಅನ್ವಯಿಸುತ್ತದೆ,” ಎಂದು ಕೇಂದ್ರ ಬ್ಯಾಂಕ್ ಅಧಿಸೂಚನೆ ತಿಳಿಸಿದೆ.
1 ಜನವರಿ 2022ರಿಂದ ಜಾರಿಗೆ ಬರುವ ಹೊಸ ಬ್ಯಾಂಕ್ ಲಾಕರ್ ನಿಯಮಗಳ ಕುರಿತು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ:
1) ಲಾಕರ್ ಹಂಚಿಕೆಯ ಸಮಯದಲ್ಲಿ “ಟರ್ಮ್ ಡೆಪಾಸಿಟ್” ತೆಗೆದುಕೊಳ್ಳಲು ಬ್ಯಾಂಕ್‌ಗಳಿಗೆ ಆರ್‌ಬಿಐ ಅವಕಾಶ ನೀಡಿದೆ. ಇದು ಮೂರು ವರ್ಷಗಳ ಬಾಡಿಗೆ ಮತ್ತು ಲಾಕರ್ ಅನ್ನು ಒಡೆಯುವ ಸಂದರ್ಭ ಎದುರಾದಲ್ಲಿ ತಗುಲುವ ಶುಲ್ಕವನ್ನು ಒಳಗೊಂಡಿರುತ್ತದೆ.
2) ಆದರೆ, ಬ್ಯಾಂಕ್‌ಗಳು ಈಗಾಗಲೇ ಲಾಕರ್ ಹೊಂದಿರುವವರು ಅಥವಾ ತೃಪ್ತಿದಾಯಕ ಆಪರೇಟಿವ್ ಖಾತೆಯನ್ನು ಹೊಂದಿರುವವರಿಂದ ಅಂತಹ ಟರ್ಮ್ ಡೆಪಾಸಿಟ್ಗಳನ್ನು ಒತ್ತಾಯಿಸಬಾರದು ಎಂದು ಅದು ಹೇಳಿದೆ.
3) ಗ್ರಾಹಕರು ಸತತವಾಗಿ ಮೂರು ವರ್ಷಗಳ ಕಾಲ ಬಾಡಿಗೆಯನ್ನು ಪಾವತಿಸದಿದ್ದಲ್ಲಿ ಸರಿಯಾದ ಕಾರ್ಯವಿಧಾನವನ್ನು ಅನುಸರಿಸಿ ಯಾವುದೇ ಲಾಕರ್ ಅನ್ನು ತೆರೆಯಲು ಬ್ಯಾಂಕ್‌ಗಳು ವಿವೇಚನೆಯನ್ನು ಹೊಂದಿರುತ್ತವೆ.
4) ಬ್ಯಾಂಕ್‌ಗಳು ಶಾಖೆಗಳ ಪ್ರಕಾರ ಖಾಲಿ ಇರುವ ಲಾಕರ್‌ಗಳ ಪಟ್ಟಿಯನ್ನು ಹಾಗೆಯೇ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕಾಯುವ ಪಟ್ಟಿಯನ್ನು ನಿರ್ವಹಿಸಬೇಕು.
5) ಲಾಕರ್ ಹಂಚಿಕೆಗಾಗಿ ಎಲ್ಲ ಅರ್ಜಿಗಳ ಸ್ವೀಕೃತಿಯನ್ನು ಬ್ಯಾಂಕ್‌ಗಳು ಅಂಗೀಕರಿಸಬೇಕು ಮತ್ತು ಹಂಚಿಕೆಗೆ ಲಾಕರ್‌ಗಳು ಲಭ್ಯ ಇಲ್ಲದಿದ್ದರೆ ಗ್ರಾಹಕರಿಗೆ ವೇಯ್ಟ್ ಲಿಸ್ಟ್ ಸಂಖ್ಯೆಯನ್ನು ಒದಗಿಸಬೇಕು ಎಂದು ಕೇಂದ್ರ ಬ್ಯಾಂಕ್ ಹೇಳಿದೆ.
6) ಬ್ಯಾಂಕ್‌ಗಳು ನಿರ್ಲಕ್ಷ್ಯದಿಂದ ಲಾಕರ್‌ಗಳಲ್ಲಿನ ವಸ್ತುಗಳಿಗೆ ಯಾವುದೇ ನಷ್ಟ ಅಥವಾ ಹಾನಿ ಸಂಭವಿಸಿದಲ್ಲಿ ಅವರ ಜವಾಬ್ದಾರಿಯನ್ನು ವಿವರಿಸುವುದಕ್ಕೆ ಮಂಡಳಿ-ಅನುಮೋದಿತ ನೀತಿಯನ್ನು ಜಾರಿಗೆ ತರಲು ಸೂಚಿಸಲಾಗಿದೆ.
ಇದನ್ನೂ ಓದಿ: RBI Guidelines For Lockers: ಬ್ಯಾಂಕ್ ಲಾಕರ್ಗಳಿಗೆ ಸಂಬಂಧಿಸಿದಂತೆ ಆರ್ಬಿಐನಿಂದ ಮಹತ್ವದ ಮಾರ್ಗಸೂಚಿ