ಫಂಡ್ ಆಫ್ ಫಂಡ್​ಗಳಲ್ಲಿ ಹೂಡಿಕೆ ಮಾಡುವುದು ಉತ್ತಮವೇ..? ಇಲ್ಲಿದೆ ಮಾಹಿತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 26, 2022 | 3:29 PM

ಯಾವ ರೀತಿಯ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕೆಂದು ಗೊತ್ತಾಗದೆ ಕಷ್ಟಪಡುವ ಹೂಡಿಕೆದಾರರಿಗೆ ಫಂಡ್‌ಗಳ ಫಂಡ್ ಅಂದರೆ ಫಂಡ್ ಆಫ್ ಫಂಡ್ ವರದಾನವೆಂದೇ ಭಾವಿಸಲಾಗಿದೆ. ಆ ಕುರಿತು ಒಂದು ಮಾಹಿತಿ ಇಲ್ಲಿದೆ ನೋಡಿ.

ಫಂಡ್ ಆಫ್ ಫಂಡ್​ಗಳಲ್ಲಿ ಹೂಡಿಕೆ ಮಾಡುವುದು ಉತ್ತಮವೇ..? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಯಾವ ರೀತಿಯ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕೆಂದು ನಿರ್ಧರಿಸಲು ಆಗದೇ ಕಷ್ಟಪಡುವ ಹೂಡಿಕೆದಾರರಿಗೆ ಫಂಡ್‌ಗಳ ಫಂಡ್ ಅಂದರೆ ಫಂಡ್ ಆಫ್ ಫಂಡ್ ವರದಾನವೆಂದೇ ಭಾವಿಸಲಾಗಿದೆ. ಹೂಡಿಕೆದಾರರು ಹೂಡಿಕೆ ಮಾಡುವ ಮೊದಲು ಯಾವ ಅಂಶಗಳನ್ನು ಗಮನಿಸಬೇಕೆಂಬ ಮಾಹಿತಿ ಇಲ್ಲಿದೆ.

ಮಿತವ್ಯಯಕಾರಿ:

ಭಾರತದಲ್ಲಿ ನೀಡಲಾಗುವ ಹೆಚ್ಚಿನ ಸಂಖ್ಯೆಯ ಎಫ್‌ಓಎಫ್‌ಗಳು ಅಂತರರಾಷ್ಟ್ರೀಯ ಹೂಡಿಕೆಗೆ ಲಭ್ಯವಿರುವ ಫಂಡ್‌ಗಳಾಗಿವೆ. ಈ ಸ್ಕೀಮ್‌ಗಳು ಬೇರೊಂದು ದೇಶದಲ್ಲಿ ನೋಂದಾಯಿತವಾದ ಅಂತರರಾಷ್ಟ್ರೀಯ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತವೆ. ಈ ಸಾಗರೋತ್ತರ ನಿಧಿಗಳು, ಇತರ ದೇಶಗಳಲ್ಲಿ ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪನಿಗಳಲ್ಲಿ ಈಕ್ವಿಟಿಗಳನ್ನು ಹೊಂದಿವೆ. ಇದು ಭಾರತೀಯ ಹೂಡಿಕೆದಾರರಿಗೆ ಆಲ್ಫಾಬೆಟ್ ಇಂಕ್., ಆಪಲ್ ಇಂಕ್., ಮೈಕ್ರೋಸಾಫ್ಟ್ ಕಾರ್ಪೊರೇಷನ್ ಮತ್ತು ಟೆಸ್ಲಾ ಇಂಕ್‌ನಂತಹ ಸ್ಟಾಕ್‌ಗಳನ್ನು ಮಿತವ್ಯಯಕಾರಿ ಬೆಲೆಗಳಲ್ಲಿ ಕೊಳ್ಳಲು ಅವಕಾಶ ಕೊಡುತ್ತದೆ.

ತೆರಿಗೆ ಅನುಕೂಲತೆ:

ಈಕ್ವಿಟಿ ಮ್ಯೂಚುಯಲ್‌ ಫಂಡ್‌ ಸ್ಕೀಮ್‌ಗಳಲ್ಲೇ ಫಂಡ್‌ ಹೂಡಿಕೆ ಮಾಡಿದ್ರೂ, ಹೆಚ್ಚಿನ ಎಫ್ಓಎಫ್‌ಗಳ ಮೇಲೆ ಡೆಟ್​ ಫಂಡ್‌ ಸ್ಕೀಮ್‌ಗಳ ಮೇಲೆ ಹಾಕುವಂತೆಯೇ ತೆರಿಗೆ ಹಾಕಲಾಗುತ್ತೆ. ಎಫ್‌ಓಎಫ್‌ ಏನಾದ್ರೂ ತನ್ನ ಫಂಡ್‌ನ 90%ಕ್ಕೂ ಹೆಚ್ಚಿನ ಮೊತ್ತವನ್ನು ಈಕ್ವಿಟಿಗಳಲ್ಲಿ ಹೂಡಿಕೆ ಮಾಡಿದರೆ, ಅದಕ್ಕೆ ಈಕ್ವಿಟಿ ತೆರಿಗೆಯನ್ನು ಕಟ್ಟಬೇಕಾಗುತ್ತೆ.

ಎಕ್ಸ್‌ಪೆನ್ಸ್‌ ರೇಷಿಯೋ ಬಗ್ಗೆ ಎಚ್ಚರವಿರಲಿ:

ಸಾಮಾನ್ಯ ಮ್ಯೂಚುಯಲ್‌ ಫಂಡ್‌ ಎಕ್ಸ್‌ಪೆನ್ಸ್‌ ರೇಷಿಯೋಗೆ ಹೋಲಿಸಿದರೆ,ಎಫ್‌ಓಎಫ್‌ನ ಎಕ್ಸಪೆನ್ಸ್‌ ರೇಷಿಯೋ ಹೆಚ್ಚಿರುತ್ತದೆ. ಇದಕ್ಕೆ ಕಾರಣವೆಂದರೆ ಫಂಡ್‌ ಮ್ಯಾನೇಜರ್ ಈ ಫಂಡ್​ನ ಹೂಡಿಕೆಯನ್ನು ಮತ್ತೊಂದು ಫಂಡ್​ನಲ್ಲಿ ವಿನಿಯೋಗಿಸುತ್ತಾನೆ. ಹೂಡಿಕೆಗೆ ಸರಿಯಾದ ಆಯ್ಕೆ ಪತ್ತೆ ಮಾಡಲು ಹೆಚ್ಚಿನ ಅಪಾಯವನ್ನು ತೊಗೊಂಡಿರ್ತಾನೆ. ಎಕ್ಸ್​ಪೆನ್ಸ್​ ರೇಷಿಯೋ ಹೆಚ್ಚಾಗಲು ಇದು ಮುಖ್ಯ ಕಾರಣ.

ಕಡಿಮೆ ಬಂಡವಾಳವಿದ್ದರೂ ವಿವಿಧ ಬಗೆಯ ಆಸ್ತಿಗಳಲ್ಲಿ ಹೂಡಿಕೆ ಮಾಡುವ ಅವಕಾಶ:

ಕಡಿಮೆ ಬಂಡವಾಳವಿರುವ ವ್ಯಕ್ತಿಯೂ ಅತ್ಯುತ್ತಮ ಫಂಡ್‌ಗಳಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭವನ್ನು ಪಡೆಯಬಹುದು.

ಫಂಡ್‌ ಆಫ್‌ ಫಂಡ್ಸ್‌ಗಳ ವಿಧಗಳು:

ಅಂತರರಾಷ್ಟ್ರೀಯ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಎಫ್‌ಓಎಫ್‌ಗಳೇ ಎಫ್ಓಎಫ್‌ಗಳಲ್ಲ. ಅನೇಕ ವಿಧದ ಎಫ್‌ಒಎಫ್‌ಗಳಿದ್ದು ಇಟಿಎಫ್‌ ಎಫ್ಓಎಫ್‌ಗಳು, ದೇಶೀಯ ಎಫ್ಓಎಫ್‌ಗಳು, ಹಾಗೂ ಚಿನ್ನದ ಎಫ್ಓಎಫ್‌ಗಳು ಅವುಗಳಲ್ಲಿ ಸೇರಿವೆ.

ತೀವ್ರ ಏರಿಳಿತಗಳ ಅಪಾಯ:

ಅಪಾಯದ ಅಂಶವು ಕಡಿಮೆಯಿದ್ದರೂ ಸಕ್ರಿಯ ನಿರ್ವಹಣೆ ಹಾಗೂ ವಿವಿಧ ಬಗೆಯ ಹೂಡಿಕೆಗಳಿಂದ ಕೂಡಿರುವುದರಿಂದ ತೀವ್ರ ಮಾರುಕಟ್ಟೆ ಏರಿಳಿತಗಳ ಅಪಾಯ ಯಾವಾಗಲೂ ಇದ್ದೇ ಇರುತ್ತೆ.

ಸಣ್ಣ ಮೊತ್ತದಿಂದ ಪ್ರಾರಂಭಿಸಿ:

ಸಣ್ಣ ಮೊತ್ತದ ಹೂಡಿಕೆ ಸಾಧ್ಯವಿರುವುದು ಇತರ ಬಗೆಯ ಹೂಡಿಕೆಗಳಿಂದ ಇದಕ್ಕೆ ವಿಶೇಷ ಸ್ಥಾನವನ್ನು ನೀಡಿದೆ. ಕೇವಲ 500/= ರೂಪಾಯಿಗಳಷ್ಟು ಸಣ್ಣ ಮೊತ್ತದ ಹೂಡಿಕೆದಾರರಿಗೂ ಇದು ಸೂಕ್ತವಾಗಿದ್ದು ನಂತರ ದೊಡ್ಡ, ಮಧ್ಯಮ, ಹಾಗೂ ಸಣ್ಣಗಾತ್ರದ ಹೂಡಿಕೆ ಹಾಗೂ ಇತರ ಕಮಾಡಿಟಿಗಳಲ್ಲೂ ಹೂಡಿಕೆಗೆ ಅವಕಾಶ ಇದೆ.

ನಿಮ್ಮ ಅಪಾಯ ತೆಗೆದುಕೊಳ್ಳುವ ಸಾಮರ್ಥ್ಯವನ್ನು ನಿರ್ಧರಿಸಿಕೊಳ್ಳಿ:

ಎಫ್‌ಓಎಫ್‌ಗಳು ಮ್ಯೂಚುಯಲ್‌ ಫಂಡ್‌ಗಳಾಗಿರುವುದರಿಂದ ಹೂಡಿಕೆದಾರರು ಹೂಡಿಕೆ ಮಾಡುವ ಮೊದಲು ತಮ್ಮ ಅಪಾಯ ತಾಳಿಕೊಳ್ಳುವ ಸಾಮರ್ಥ್ಯ ಹಾಗೂ ಅವರು ಹೂಡಿಕೆ ಮಾಡಲು ಉದ್ದೇಶಿಸಿರುವ ಹಣದ ಮೊತ್ತವನ್ನು ನಿರ್ಧರಿಸಿಕೊಳ್ಳಬೇಕು.

ನಿಮ್ಮ ಗುರಿಗಳನ್ನು ಮರೆಯಲೇಬೇಡಿ:

ಒಬ್ಬ ಹೂಡಿಕೆದಾರರಾಗಿ, ತಮ್ಮ ಹೂಡಿಕೆಯ ಗುರಿ ಹಾಗೂ ಉದ್ದೇಶಗಳನ್ನು ಸದಾ ನೆನಪಿನಲ್ಲಿಟ್ಟುಕೊಂಡು ವಿಶ್ಲೇಷಿಸುತ್ತಿರಬೇಕು. ಒಂದು ವೇಳೆ, ದಾರಿ ತಪ್ಪಿದರೆ ಅದು ಅವರ ಒಟ್ಟಾರೆ ಪೋರ್ಟ್‌ಫೋಲಿಯೋದ ಮೇಲೆ ತೀವ್ರ ಪರಿಣಾಮಗಳನ್ನು ಬೀರಬಹುದು.

ಇದನ್ನೂ ಓದಿ;

Union Budget 2022: 10 ವರ್ಷದಲ್ಲಿ ಬಜೆಟ್​ ದಿನದಂದು ಷೇರುಪೇಟೆ ಸೂಚ್ಯಂಕಗಳ ಪರ್ಫಾರ್ಮೆನ್ಸ್ ಹೇಗಿತ್ತು?

Gold and Silver Rate Today: ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ, ಬೆಳ್ಳಿ ಬೆಲೆ ಇಳಿಕೆ; ಬೆಂಗಳೂರು ಹಾಗೂ ಇತರ ನಗರಗಳ ದರ ನೋಡಿ