Money9: ಡಿಮ್ಯಾಟ್ ಖಾತೆಯೂ ಬರಡಾಗಬಹುದು! ಕ್ಷಣ ಕ್ಷಣದ ಎಚ್ಚರಿಕೆಗೆ ಮನಿ9
ಆಧುನಿಕ ಜಗತ್ತಿನಲ್ಲಿ ಎಲ್ಲವೂ ಆನ್ ಲೈನ್ ಮಯ. ಅದರಲ್ಲೂ ಷೇರು ಮಾರುಕಟ್ಟೆ ವಹಿವಾಟು ನಡೆಯುವುದು ಡಿಮ್ಯಾಟ್ ಖಾತೆಗಳಿಂದ, ಸೈಬರ್ ವಂಚಕರು ಬ್ಯಾಂಕ್ ಖಾತೆಗಳನ್ನು ಮಾತ್ರವಲ್ಲ ಡಿಮ್ಯಾಟ್ ಖಾತೆಗಳನ್ನೂ ಟಾರ್ಗೆಟ್ ಮಾಡಿಕೊಂಡಿದ್ದಾರೆ.
ಆಧುನಿಕ ಜಗತ್ತಿನಲ್ಲಿ ಎಲ್ಲವೂ ಆನ್ ಲೈನ್ ಮಯ. ಅದರಲ್ಲೂ ಷೇರು ಮಾರುಕಟ್ಟೆ ವಹಿವಾಟು ನಡೆಯುವುದು ಡಿಮ್ಯಾಟ್ ಖಾತೆಗಳಿಂದ, ಸೈಬರ್ ವಂಚಕರು ಬ್ಯಾಂಕ್ ಖಾತೆಗಳನ್ನು ಮಾತ್ರವಲ್ಲ ಡಿಮ್ಯಾಟ್ ಖಾತೆಗಳನ್ನೂ ಟಾರ್ಗೆಟ್ ಮಾಡಿಕೊಂಡಿದ್ದಾರೆ.
ಹಾಗಾದರೆ ಡಿಮ್ಯಾಟ್ ಖಾತೆ ಬಳಸಿಕೊಂಡು ಯಾವ ರೀತಿ ವಂಚನೆ ನಡೆಯುತ್ತದೆ. ಮನಿ9 ಕನ್ನಡ ಉತ್ತರ ನೀಡುವುದರೊಂದು ಹೇಗೆ ಜಾಗರೂಕರಾಗಿರಬೇಕು ಎಂಬುದನ್ನು ತಿಳಿಸಿಕೊಡುತ್ತದೆ.
ವಂಚಕರು ಜಾಲ ಬೀಸುವುದು ಹೇಗೆ? ಹೊಸ ಹೊಸ ಹೂಡಿಕೆದಾರರು ಪ್ರತಿ ದಿನ ಮಾರುಕಟ್ಟೆಯ ಕಡೆ ಮುಖ ಮಾಡುತ್ತಲೇ ಇದ್ದಾರೆ. ಡಿಮ್ಯಾಟ್ ಖಾತೆ ತೆರೆದುಕೊಂಡರೆ ಮಾತ್ರ ಷೇರು ಮಾರುಕಟ್ಟೆಯಲ್ಲಿ ವಹಿವಾಟು ಸಾಧ್ಯ. ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರೆ ಸೈಬರ್ ಚೋರರು ನಿಮ್ಮ ಖಾತೆಗೆ ಕನ್ನ ಹಾಕಬಹುದು.
ಸಾಮಾನ್ಯ ಜನರನ್ನು ವಂಚನೆ ಜಾಲದಲ್ಲಿ ಬೀಳಿಸಿಕೊಳ್ಳುತ್ತಿದ್ದ ಕಿರಾತಕರು ಇದೀಗ ಐಟಿ ತಜ್ಞರು, ಮಾರುಕಟ್ಟೆ ಪಂಡಿತರ ಬೆನ್ನು ಬಿದ್ದಿದ್ದಾರೆ. ಚಾಲಾಕಿಗಳು ಕ್ಷಣ ಮಾತ್ರದಲ್ಲಿ ಲಕ್ಷಾಧಿಪತಿಯನ್ನು ಬೀದಿಗೆ ತಂದು ನಿಲ್ಲಿಸಬಲ್ಲರು!
ಯಾವ ಡಿಮ್ಯಾಟ್ ಖಾತೆಯಿಂದ ಷೇರು ವಹಿವಾಟು ನಡೆದಿದೆಯೋ.. ಮಾರಾಟ ಮಾಡಲಾಗಿದೆಯೋ.. ಹಣ ಅದೇ ಡಿಮ್ಯಾಟ್ ಖಾತೆಗೆ ಪಾವತಿಯಾಗಬೇಕು. ಆದರೆ ಷೇರು ಮಾರಾಟವನ್ನು ಗ್ರಹಿಸುವ ವಂಚಕರು ಸೈಬರ್ ಕುತಂತ್ರ ಬಳಸಿಕೊಂಡು ಹಣವನ್ನು ಲೂಟಿ ಮಾಡುತ್ತಾರೆ.
ಯಾವುದೇ ರಕ್ತಪಾತವಿಲ್ಲದೆ, ಹಿಂಸೆಯಿಲ್ಲದೆ ದರೋಡೆ ಮಾಡಿಕೊಂಡು ಕಾಣಿಸದಂತೆ ಮಾಯವಾಗುತ್ತಾರೆ. ಹಾಗಾದರೆ ನಿಮ್ಮ ಡಿಮ್ಯಾಟ್ ಖಾತೆ ಸುರಕ್ಷಿತವಾಗಿರಬೇಕೆ? ಯಾವ ರೀತಿ ಎಚ್ಚರದಿಂದ ಇರಬೇಕು ಇದೆಲ್ಲವನ್ನು ತಿಳಿದುಕೊಳ್ಳಲು Money9 ಆಪ್ ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…
ಮನಿ9 ಏನು? ಎತ್ತ? ಹೇಗೆ? Money9 ಒಂದು ಓಟಿಟಿ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಮತ್ತು iOSನಲ್ಲಿ ಲಭ್ಯವಿದೆ. ಹೂಡಿಕೆ, ಉಳಿತಾಯ, ಸುರಕ್ಷತೆ, ಭದ್ರತೆ ಸೇರಿದಂತೆ ಹಣಕಾಸಿನ ವಿಚಾರಗಳನ್ನು ಕನ್ನಡ, ಹಿಂದಿ, ಇಂಗ್ಲಿಷ್, ತೆಲುಗು, ಗುಜರಾತಿ, ಬಾಂಗ್ಲಾ ಮತ್ತು ಮರಾಠಿ ಏಳು ಭಾಷೆಗಳಲ್ಲಿ ನಿಮ್ಮ ಮುಂದಿಡಲಾಗುತ್ತದೆ. ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್, ಪ್ರಾಪರ್ಟಿ, ತೆರಿಗೆ, ಹೊಸ ಪಾಲಿಸಿಗಳು, ಸೈಬರ್ ಎಚ್ಚರಿಕೆ ಸೇರಿದಂತೆ ಅನೇಕ ಸಂಗತಿಗಳು ನಿಮ್ಮ ಸಹಾಯಕ್ಕೆ ನಿಲ್ಲುತ್ತವೆ. ನಿಮ್ಮ ಆರ್ಥಿಕ ತಿಳಿವಳಿಕೆ ಹೆಚ್ಚಿಸಿಕೊಳ್ಳಲು Money9 ನ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಹಣಕಾಸಿನ ಕಿಂಡಿ ತೆರೆಯಿರಿ.
Published On - 2:15 pm, Wed, 27 July 22