ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವು ಗೆಲುವಿನ ಸರಣಿಯನ್ನು ಜನವರಿ 3ನೇ ತಾರೀಕಿನ ಸೋಮವಾರವೂ ಮುಂದುವರೆಸಿತು. ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ತಲಾ ಶೇ 1.5ರಷ್ಟು ಏರಿಕೆಯೊಂದಿಗೆ ಹೊಸ ವರ್ಷವನ್ನು ಉತ್ತಮವಾಗಿ ಪ್ರಾರಂಭಿಸಿತು. ಸೂಚ್ಯಂಕಗಳು ದೃಢವಾಗಿ ತೆರೆದುಕೊಂಡವು ಮತ್ತು ದಿನವು ಮುಂದುವರೆದಂತೆ ಲಾಭವನ್ನು ವಿಸ್ತರಿಸಿತು. ದಿನದ ಮುಕ್ತಾಯದ ವೇಳೆಗೆ ಸೆನ್ಸೆಕ್ಸ್ 929.40 ಪಾಯಿಂಟ್ ಅಥವಾ ಶೇ 1.60ರಷ್ಟು ಏರಿಕೆಯಾಗಿ 59,183.22ಕ್ಕೆ ತಲುಪಿದರೆ, ನಿಫ್ಟಿ 271.70 ಪಾಯಿಂಟ್ ಅಥವಾ ಶೇ 1.57ರಷ್ಟು ಏರಿಕೆಯಾಗಿ 17,625.70ಕ್ಕೆ ತಲುಪಿದೆ.
“ಭಾರತವು ತನ್ನ ಲಸಿಕೆ ಹಾಕುವ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದಂತೆ, ಹೂಡಿಕೆದಾರರು ಹೊಸ ವರ್ಷವನ್ನು ತಮ್ಮ ಶೈಲಿಯಲ್ಲಿ ಪ್ರಾರಂಭಿಸಿದ್ದಾರೆ. ಸಕಾರಾತ್ಮಕ ಜಾಗತಿಕ ಸೂಚನೆಗಳಿಂದ ಉತ್ತೇಜಿತಗೊಂಡ ಇತರ ವಲಯದ ಸೂಚ್ಯಂಕಗಳಿಂದ ಉತ್ತಮ ಬೆಂಬಲದೊಂದಿಗೆ ನಿಫ್ಟಿ ಬ್ಯಾಂಕ್ ಏರಿಕೆಯನ್ನು ಮುನ್ನಡೆಸಿತು” ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. “ಕಳೆದ ಕೆಲವು ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಸೇರ್ಪಡೆಯಲ್ಲಿ ಭಾರತವು ವೇಗವಾಗಿ ಬೆಳವಣಿಗೆಯ ದರವನ್ನು ಸಾಧಿಸಿದಂತೆ, ದೇಶವು ತನ್ನ ನಾನ್-ಫಾಸಿಲ್ ಇಂಧನ ಗುರಿಗಳನ್ನು ತನ್ನ ಬದ್ಧತೆಯ ಗಡುವಿನ ಸುಮಾರು ಒಂದು ದಶಕದ ಮುಂಚಿತವಾಗಿ ಪೂರೈಸಲು ಸಾಧ್ಯವಾಯಿತು ಎಂಬುದು ನಿಜಕ್ಕೂ ಗಮನಾರ್ಹವಾಗಿದೆ.”
“ಮಾರುಕಟ್ಟೆಯ ವಿಸ್ತಾರವು ಅತ್ಯಂತ ಪಾಸಿಟಿವ್ ಆಗಿದ್ದು, ಎಲ್ಲ ವಲಯಗಳಲ್ಲೂ ಸಣ್ಣ ಮತ್ತು ಮಿಡ್‌ಕ್ಯಾಪ್‌ಗಳು ಲಾಭಗಳನ್ನು ದಾಖಲಿಸುತ್ತಿವೆ,” ಎಂದು ವಿಶ್ಲೇಷಕರು ಹೇಳಿದ್ದಾರೆ. ಫಾರ್ಮಾ ಹೊರತುಪಡಿಸಿ ನಿಫ್ಟಿ ವಾಹನ, ಬ್ಯಾಂಕ್, ಮಾಹಿತಿ ತಂತ್ರಜ್ಞಾನ, ಲೋಹ ಮತ್ತು ಪಿಎಸ್‌ಯು ಬ್ಯಾಂಕ್ ಸೂಚ್ಯಂಕಗಳು ಶೇ 1ರಿಂದ 2ರಷ್ಟು ಏರಿಕೆಯೊಂದಿಗೆ ಇತರ ಎಲ್ಲ ವಲಯದ ಸೂಚ್ಯಂಕಗಳು ಏರಿಕೆಯಲ್ಲಿ ಕೊನೆಗೊಂಡಿವೆ.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಕೋಲ್ ಇಂಡಿಯಾ ಶೇ 6.33
ಐಷರ್ ಮೋಟಾರ್ಸ್ ಶೇ 4.90
ಬಜಾಜ್ ಫಿನ್‌ಸರ್ವ್ ಶೇ 3.51
ಬಜಾಜ್ ಫೈನಾನ್ಸ್ ಶೇ 3.47
ಐಸಿಐಸಿಐ ಬ್ಯಾಂಕ್ ಶೇ 3.32
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಸಿಪ್ಲಾ ಶೇ -1.44
ಡಾ ರೆಡ್ಡೀಸ್ ಲ್ಯಾಬ್ಸ್ ಶೇ -1.10
ಮಹೀಂದ್ರಾ ಅಂಡ್ ಮಹೀಂದ್ರಾ ಶೇ -0.88
ಡಿವಿಸ್ ಲ್ಯಾಬ್ಸ್ ಶೇ -0.58
ಟೆಕ್ ಮಹೀಂದ್ರಾ ಶೇ -0.32
ಇದನ್ನೂ ಓದಿ: Multibagger Stocks: ಏನಿದು ಮಲ್ಟಿಬ್ಯಾಗರ್ ಸ್ಟಾಕ್? ಇದನ್ನು ಗುರುತಿಸುವುದು ಹೇಗೆ ತಿಳಿಯಿರಿ