ಐಟಿಆರ್, ಆಧಾರ್, ತೆರಿಗೆ ಯೋಜನೆ ತನಕ 2022ನೇ ಇಸವಿಯಲ್ಲಿನ 5 ಗಡುವು ದಿನಾಂಕಗಳ ಬಗ್ಗೆ ತಿಳಿಯಿರಿ

ಐಟಿಆರ್, ಆಧಾರ್, ತೆರಿಗೆ ಯೋಜನೆ ತನಕ 2022ನೇ ಇಸವಿಯಲ್ಲಿನ 5 ಗಡುವು ದಿನಾಂಕಗಳ ಬಗ್ಗೆ ತಿಳಿಯಿರಿ
ಸಾಂದರ್ಭಿಕ ಚಿತ್ರ

ಐಟಿಆರ್​ನಿಂದ ಆಧಾರ್- ಪ್ಯಾನ್ ಕಾರ್ಡ್ ಜೋಡಣೆ ತನಕ 2022ನೇ ಇಸವಿಯಲ್ಲಿ ಪೂರ್ಣಗೊಳಿಸಬೇಕಾದ 5 ಜವಾಬ್ದಾರಿಗಳ ಗಡುವಿನ ಮಾಹಿತಿ ಈ ಲೇಖನದಲ್ಲಿದೆ.

TV9kannada Web Team

| Edited By: Srinivas Mata

Jan 04, 2022 | 11:34 AM

ಹೊಸ ವರ್ಷದೊಂದಿಗೆ ಹೊಸ ಆರ್ಥಿಕ ಜವಾಬ್ದಾರಿಗಳು ಬರುತ್ತವೆ. ಅಧಿಕಾರಿಗಳಿಂದ ದಂಡ ಹಾಕಿಸಿಕೊಳ್ಳುವುದನ್ನು ತಪ್ಪಿಸಲು ಪ್ರತಿ ವರ್ಷ ಪೂರೈಸಬೇಕಾದ ಹಲವಾರು ಗಡುವುಗಳಿವೆ. 2022ನೇ ಇಸವಿ ಪ್ರಾರಂಭವಾಗುತ್ತಿದ್ದಂತೆ ಸಂಬಂಧಪಟ್ಟವರು ತೆಗೆದುಕೊಳ್ಳಬೇಕಾದ ಕ್ರಮಕ್ಕೆ ಪ್ರಮುಖ ದಿನಾಂಕಗಳು ಯಾವುವು ಅಂತ ನಾವು ನೋಡೋಣ. ಹಣಕ್ಕೆ ಸಂಬಂಧಿಸಿದ ಬದಲಾವಣೆಗಳ ಮೂಲಕ ಮುಂದಕ್ಕೆ ಹೋಗುವುದು ಸಹ ಮುಖ್ಯವಾಗಿದೆ. ಒಂದೋ ಅದನ್ನು ಈಗಾಗಲೇ ಜಾರಿಗೊಳಿಸಲಾಗಿದೆ ಅಥವಾ ಮುಂದೆ ಜಾರಿಗೊಳಿಸಲಾಗುವುದು.

ಜೀವಿತ ಪ್ರಮಾಣಪತ್ರ ಸಲ್ಲಿಕೆ FY22ಗಾಗಿ TDS ಕಡಿತ ಕ್ಲೇಮ್ ಮಾಡುವುದು ಮಾರ್ಚ್ 31: ನೀವು 2021-22ರ ಹಣಕಾಸು ವರ್ಷಕ್ಕೆ ಹಳೆಯ ತೆರಿಗೆ ಪದ್ಧತಿಯನ್ನು ಆರಿಸಿಕೊಂಡಿದ್ದರೆ ಮಾರ್ಚ್ 31, 2022ರೊಳಗೆ ತೆರಿಗೆ ಯೋಜನೆ ಪೂರ್ಣಗೊಳಿಸಲು ಮರೆಯದಿರಿ. ಸರ್ಕಾರ ನೀಡುವ ಆದಾಯ ತೆರಿಗೆ ವಿನಾಯಿತಿಗಳನ್ನು ಪಡೆಯಲು ಉಳಿತಾಯವನ್ನು ಉತ್ತೇಜಿಸಲು ಸೆಕ್ಷನ್ 80C, 80CCD(1B) ಅಡಿಯಲ್ಲಿ ಎಲ್ಲ ತೆರಿಗೆದಾರರು ತಮ್ಮ ಆದಾಯದ ಒಂದು ಭಾಗವನ್ನು ಹೂಡಿಕೆ ಮಾಡಬೇಕು.

ಜೀವ ವಿಮಾ ಪ್ರಮಾಣಪತ್ರ ಸಲ್ಲಿಕೆ ಫೆಬ್ರವರಿ 28: ಸರ್ಕಾರದಿಂದ ಪಿಂಚಣಿ ಪಾವತಿಗಳನ್ನು ಪಡೆಯುವುದನ್ನು ಮುಂದುವರಿಸಲು ಸರ್ಕಾರಿ ಪಿಂಚಣಿದಾರರು ಪ್ರತಿ ವರ್ಷ ಜೀವಿತ ಪುರಾವೆ ಅಥವಾ ಜೀವನ ಪ್ರಮಾಣಪತ್ರವನ್ನು ಒದಗಿಸಬೇಕಾಗುತ್ತದೆ. ಜೀವಿತ ಪ್ರಮಾಣ ಪತ್ರ ಸಲ್ಲಿಸುವ ಗಡುವನ್ನು ಡಿಸೆಂಬರ್ 31ರಿಂದ ಫೆಬ್ರವರಿ 28ರ ವರೆಗೆ ವಿಸ್ತರಿಸಲಾಗಿದೆ.

“ವಿವಿಧ ರಾಜ್ಯಗಳಲ್ಲಿನ ಕೊವಿಡ್- 19 ಸಾಂಕ್ರಾಮಿಕ ರೋಗವನ್ನು ಮತ್ತು ಈ ಕಾಯಿಲೆಗೆ ವಯಸ್ಸಾದ ಜನಸಂಖ್ಯೆಯ ದುರ್ಬಲತೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲ ವಯೋಮಾನದ ಪಿಂಚಣಿದಾರರಿಗೆ ಜೀವಿತ ಪ್ರಮಾಣಪತ್ರ ಸಲ್ಲಿಸಲು ಅಸ್ತಿತ್ವದಲ್ಲಿರುವ 31.12.2021ರ ಸಮಯವನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ಈಗ ಎಲ್ಲ ಕೇಂದ್ರ ಸರ್ಕಾರದ ಪಿಂಚಣಿದಾರರು 28.02.2022ರ ವರೆಗೆ ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಬಹುದು. ಈ ವಿಸ್ತೃತ ಅವಧಿಯಲ್ಲಿ ಪಿಂಚಣಿ ವಿತರಿಸುವ ಅಧಿಕಾರಿಗಳು (ಪಿಡಿಎ) ನಿರಂತರವಾಗಿ ಪಿಂಚಣಿ ಪಾವತಿಸುವುದನ್ನು ಮುಂದುವರಿಸುತ್ತಾರೆ,” ಎಂದು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಅಧಿಕೃತ ಹೇಳಿಕೆ ತಿಳಿಸಿದೆ.

ಐಟಿಆರ್ ವೆರಿಫಿಕೇಷನ್ ಮಾರ್ಚ್ 31: 2020-21ರ ಅಸೆಸ್​ಮನೆಂಟ್ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಡಿಸೆಂಬರ್ 31, 2021 ಕೊನೆಯ ದಿನಾಂಕವಾಗಿತ್ತು. ಆದರೆ ಇ-ವೆರಿಫಿಕಷನ್ ಇನ್ನೂ ಪೂರ್ಣಗೊಳಿಸದವರಿಗೆ ಮಾರ್ಚ್ 31, 2022ರ ಒಳಗೆ ಮಾಡಲು ವಿಸ್ತರಣೆಯನ್ನು ನೀಡಲಾಗಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಭಾನುವಾರ ಇ-ವೆರಿಫಿಕೇಷನ್​ಗೆ ಬಾಕಿ ಇರುವ ಇ-ಫೈಲ್ಡ್ ಐಟಿಆರ್‌ಗಳ ಪರಿಶೀಲನೆಗೆ ಒಂದು ಬಾರಿ ಸಡಿಲಿಕೆ ನೀಡಿದೆ ಎಂದು ಹೇಳಿದೆ. ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ದೋಷಗಳಿವೆ ಎಂಬ ದೂರುಗಳ ನಡುವೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

“ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) AY2020-21ಗಾಗಿ ಇ-ಫೈಲ್ ಮಾಡಿದ ITRಗಳ ಪರಿಶೀಲನೆಗಾಗಿ ಒಂದು ಬಾರಿ ಸಡಿಲಿಕೆಯನ್ನು ಒದಗಿಸಿದೆ. ಇದು ITR-V ಫಾರ್ಮ್ ಅನ್ನು ಸಲ್ಲಿಸದ ಕಾರಣ ಅಥವಾ ಬಾಕಿ ಉಳಿದಿರುವ ಇ-ವೆರಿಫಿಕೇಷನ್​ನಿಂದಾಗಿ ಪರಿಶೀಲನೆಗಾಗಿ ಬಾಕಿ ಉಳಿದಿದೆ,” ಎಂದು ಸುತ್ತೋಲೆ ಹೊರಡಿಸುವ ಮೂಲಕ ಮಂಡಳಿಯು ಟ್ವೀಟ್‌ನಲ್ಲಿ ತಿಳಿಸಿದೆ. ಅಂತಹ ವೆರಿಫಿಕೇಷನ್​ ಅನ್ನು ಫೆಬ್ರವರಿ 28, 2022ರೊಳಗೆ ಪೂರ್ಣಗೊಳಿಸಬೇಕು. ಈ ರಿಟರ್ನ್‌ಗಳನ್ನು ಜೂನ್ 30ರೊಳಗೆ ಪ್ರೊಸೆಸ್​ ಮಾಡಿ, ಆ ನಂತರ ಮರುಪಾವತಿಯನ್ನು ನೀಡಲಾಗುತ್ತದೆ.

ಮುಂಗಡ ತೆರಿಗೆ ಪಾವತಿಗಳು ಮಾರ್ಚ್ 15: 2021-22ರ ಹಣಕಾಸು ವರ್ಷದಲ್ಲಿ ಗಳಿಸಿದ ಆದಾಯಕ್ಕೆ ಮುಂಗಡ ತೆರಿಗೆ ಪಾವತಿಗಳನ್ನು ಮಾಡಲು ಕೊನೆಯ ದಿನಾಂಕ ಮಾರ್ಚ್ 15, 2022. ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಹಣಕಾಸು ವರ್ಷದಲ್ಲಿ ಟಿಡಿಎಸ್ ಆದಾಯ ತೆರಿಗೆಯ ಹೊಣೆಗಾರಿಕೆಯು ತೆರಿಗೆಯ ನಿವ್ವಳ 5,000 ರೂಪಾಯಿಗಳನ್ನು ಮೀರಿದರೆ ಮುಂಗಡ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಉದ್ಯೋಗದಾತರು ಈಗಾಗಲೇ ತಮ್ಮ ಪರವಾಗಿ ಟಿಡಿಎಸ್ ಕಡಿತಗೊಳಿಸಿದ್ದಲ್ಲಿ ಯಾವುದೇ ಆದಾಯದ ಮೂಲವನ್ನು ಹೊಂದಿರದ ಸಂಬಳ ಪಡೆಯುವ ವ್ಯಕ್ತಿಗಳು ಈ ಗಡುವಿನ ಬಗ್ಗೆ ಚಿಂತಿಸಬೇಕಾಗಿಲ್ಲ. ಆದರೆ ಉದ್ಯೋಗದಾತರಿಗೆ ಘೋಷಿಸದ ಆಸ್ತಿಯಿಂದ ಬಾಡಿಗೆ ಅಥವಾ ಬಂಡವಾಳ ಲಾಭ ಅಥವಾ ಬ್ಯಾಂಕ್ ಠೇವಣಿಯಿಂದ ಬಡ್ಡಿಯಂತಹ ಇತರ ಮೂಲಗಳಿಂದ ಒಟ್ಟಾರೆ ಆದಾಯವು ವರ್ಷಕ್ಕೆ ರೂ. 10,000 ಮೀರಿದರೆ ಸಂಬಳ ಪಡೆಯುವ ವೃತ್ತಿಪರರು ಮುಂಗಡ ತೆರಿಗೆಯನ್ನು ಪಾವತಿಸಲು ಜವಾಬ್ದಾರರಾಗಿರುತ್ತಾರೆ.

ಉದಾಹರಣೆಗೆ, ನೀವು ಲಾಭಾಂಶದ ಆದಾಯವನ್ನು ಪಡೆದಿರುವ ಅಥವಾ ಷೇರುಗಳನ್ನು ಮಾರಾಟ ಮಾಡುವ ಮೂಲಕ ಗಣನೀಯ ಬಂಡವಾಳದ ಲಾಭವನ್ನು ಗಳಿಸಿದ ಸಂಬಳದ ವೃತ್ತಿಪರರಾಗಿದ್ದರೆ ಈ ಗಡುವಿನ ಬಗ್ಗೆ ಕಾಳಜಿ ವಹಿಸಬೇಕು.

ಆಧಾರ್-ಪ್ಯಾನ್ ಜೋಡಣೆ ಮಾಡಿ ಮಾರ್ಚ್ 31: ಕೊವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾಗುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಪ್ಯಾನ್‌ನೊಂದಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವ ಕೊನೆಯ ದಿನಾಂಕವನ್ನು ಮಾರ್ಚ್ 31, 2022ಕ್ಕೆ ವಿಸ್ತರಿಸಿದೆ. ಇತ್ತೀಚೆಗೆ ಲೋಕಸಭೆಯು ಅಂಗೀಕರಿಸಿದ ಹಣಕಾಸು ಮಸೂದೆ, 2021ರಲ್ಲಿ ಸರ್ಕಾರವು ತಿದ್ದುಪಡಿಯನ್ನು ಪರಿಚಯಿಸಿದೆ. ಅದರ ಅಡಿಯಲ್ಲಿ ಒಬ್ಬ ವ್ಯಕ್ತಿಯು ಆಧಾರ್‌ನೊಂದಿಗೆ ಪ್ಯಾನ್ ಅನ್ನು ಜೋಡಣೆ ಮಾಡದಿದ್ದಲ್ಲಿ 1,000 ರೂಪಾಯಿವರೆಗೆ ವಿಳಂಬ ಶುಲ್ಕವನ್ನು ಪಾವತಿಸಲು ಹೊಣೆಗಾರರಾಗುತ್ತಾರೆ.

ಇದನ್ನೂ ಓದಿ: Income Tax: ಈ ಐದರಲ್ಲಿ ಹೆಚ್ಚಿನ ಮೌಲ್ಯದ ನಗದು ವಹಿವಾಟಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಬಹುದು

Follow us on

Related Stories

Most Read Stories

Click on your DTH Provider to Add TV9 Kannada