Sovereign Gold Bond Series 9: ಸವರನ್ ಗೋಲ್ಡ್ ಬಾಂಡ್ ಸರಣಿ 9ರ ಸಬ್ಸ್ಕ್ರಿಪ್ಷನ್ ಜ. 10ರಿಂದ
ಸವರನ್ ಗೋಲ್ಡ್ ಬಾಂಡ್ ಸರಣಿ 9ರ ಸಬ್ಸ್ಕ್ರಿಪ್ಷನ್ ಜನವರಿ 10ನೇ ತಾರೀಕಿನ ಸೋಮವಾರದಂದು ಆರಂಭವಾಗಲಿದೆ. ದರ ಮತ್ತಿತರ ವಿವರ ಇಲ್ಲಿದೆ.
ಸವರನ್ ಗೋಲ್ಡ್ ಬಾಂಡ್ ಸ್ಕೀಮ್ 2021-22 (ಸರಣಿ IX) ಸಬ್‌ಸ್ಕ್ರಿಪ್ಶನ್‌ಗಾಗಿ ಭಾರತ ಸರ್ಕಾರವು (Government of India) ದಿನಾಂಕವನ್ನು ಪ್ರಕಟಿಸಿದೆ. ಹೊಸ ಸರಣಿಯ 5-ದಿನದ ಸಬ್ಸ್ಕ್ರಿಪ್ಷನ್ ಜನವರಿ 10ರಂದು ಆರಂಭವಾಗುತ್ತದೆ ಮತ್ತು ಇದು ಜನವರಿ 14, 2022ರ ವರೆಗೆ ಬಿಡ್ಡಿಂಗ್‌ಗೆ ತೆರೆದಿರುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು (RBI) ಭಾರತದ ಸರ್ಕಾರದ ಪರವಾಗಿ ಬಾಂಡ್‌ಗಳನ್ನು ನೀಡುತ್ತದೆ.
ಇಶ್ಯೂ ಬೆಲೆ 2021-22ರ ಹೊಸ ಸಿರೀಸ್ ಸವರನ್ ಗೋಲ್ಡ್ ಬಾಂಡ್ ಯೋಜನೆಯ ವಿತರಣೆ ಬೆಲೆಯನ್ನು ಪ್ರತಿ ಗ್ರಾಮ್ಗೆ ರೂ. 4,786 ಎಂದು ನಿಗದಿಪಡಿಸಲಾಗಿದೆ ಎಂದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ. ಆದ್ದರಿಂದ ಹಳದಿ ಲೋಹದಲ್ಲಿನ ಇತ್ತೀಚಿನ ಕುಸಿತವನ್ನು ಗಣನೆಗೆ ತೆಗೆದುಕೊಂಡು, ಭಾರತ ಸರ್ಕಾರವು ಹೊಸ ಸರಣಿಯ ವಿತರಣೆ ಬೆಲೆಯನ್ನು ಪ್ರತಿ ಗ್ರಾಮ್ಗೆ ರೂ. 5ರಷ್ಟು ಕಡಿತಗೊಳಿಸಿದೆ. ಏಕೆಂದರೆ ಸರಣಿ 8ರ ವಿತರಣೆಯ ಬೆಲೆ ಪ್ರತಿ ಗ್ರಾಮ್ಗೆ ರೂ. 4,791 ಆಗಿದೆ.
ಆನ್‌ಲೈನ್ ಬಿಡ್ಡರ್ಗಳಿಗೆ ಪ್ರತಿಫಲ ಬಾಂಡ್‌ಗೆ ಅರ್ಜಿ ಸಲ್ಲಿಸುವ ಆನ್‌ಲೈನ್ ಬಿಡ್‌ದಾರರು ರೂ. 50 ಸಡಿಲಿಕೆಯನ್ನು ಪಡೆಯುತ್ತಾರೆ. ಏಕೆಂದರೆ ಅಂತಹ ಅರ್ಜಿದಾರರಿಗೆ ಹೊಸ ಸರಣಿಯ ವಿತರಣೆ ಬೆಲೆಯನ್ನು ಪ್ರತಿ ಗ್ರಾಂಗೆ ರೂ. 4,736 ಎಂದು ನಿಗದಿಪಡಿಸಲಾಗಿದೆ. ಆರ್‌ಬಿಐ ಜೊತೆ ಚರ್ಚೆ ನಡೆಸಿದ ಭಾರತ ಸರ್ಕಾರವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹೂಡಿಕೆದಾರರಿಗೆ ಪ್ರತಿ ಗ್ರಾಂಗೆ ರೂ. 50 ರಿಯಾಯಿತಿ ನೀಡಲು ನಿರ್ಧರಿಸಿದೆ. ಅರ್ಜಿಯ ವಿರುದ್ಧ ಪಾವತಿಯನ್ನು ಡಿಜಿಟಲ್ ವಿಧಾನ ಮೂಲಕ ಮಾಡಲಾಗುತ್ತದೆ. “ಅಂತಹ (ಆನ್‌ಲೈನ್ ಅಥವಾ ಡಿಜಿಟಲ್) ಹೂಡಿಕೆದಾರರಿಗೆ ಚಿನ್ನದ ಬಾಂಡ್‌ನ ವಿತರಣೆಯ ಬೆಲೆ ಪ್ರತಿ ಗ್ರಾಮ್ ಚಿನ್ನಕ್ಕೆ ರೂ 4,736 ಆಗಿರುತ್ತದೆ,” ಎಂದು ಆರ್‌ಬಿಐ ಹೇಳಿದೆ.
ಎಲ್ಲಿ ಅರ್ಜಿ ಸಲ್ಲಿಸಬೇಕು ಸವರನ್ ಗೋಲ್ಡ್ ಬಾಂಡ್ ಯೋಜನೆ 2021-22, ಸರಣಿ 9ಕ್ಕೆ ಅರ್ಜಿ ಸಲ್ಲಿಸಲು ಬಯಸುವ ಹೂಡಿಕೆದಾರರು ಬ್ಯಾಂಕ್ಗಳು ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (SHCIL) ಗೊತ್ತುಪಡಿಸಿದ ಅಂಚೆ ಕಚೇರಿಗಳು ಮತ್ತು ಮಾನ್ಯತೆ ಪಡೆದ ಸ್ಟಾಕ್ ಎಕ್ಸ್ಚೇಂಜ್ಗಳು – NSE ಮತ್ತು BSE ಮೂಲಕ ಖರೀದಿ ಮಾಡಬಹುದು.
ಬಾಂಡ್‌ಗಳನ್ನು ಒಂದು ಗ್ರಾಂನ ಮೂಲ ಘಟಕದೊಂದಿಗೆ ಗ್ರಾಂ(ಗಳ) ಚಿನ್ನದ ಗುಣಕಗಳಲ್ಲಿ ಖರೀದಿಸಬಹುದು. ಬಾಂಡ್‌ನ ಅವಧಿಯು 8 ವರ್ಷಗಳ ಅವಧಿಗೆ ಇರುತ್ತದೆ ಮತ್ತು 5ನೇ ವರ್ಷದ ನಂತರ ನಿರ್ಗಮನ ಆಯ್ಕೆಯನ್ನು ಮುಂದಿನ ಬಡ್ಡಿ ಪಾವತಿ ದಿನಾಂಕಗಳಲ್ಲಿ ಬಳಸಬಹುದು.
ಹೂಡಿಕೆ ಮಿತಿ ಕನಿಷ್ಠ ಅನುಮತಿಸುವ ಹೂಡಿಕೆಯು ಒಂದು ಗ್ರಾಂ ಆಗಿದೆ. ಚಂದಾದಾರಿಕೆಯ ಗರಿಷ್ಠ ಮಿತಿಯು ವ್ಯಕ್ತಿಗಳಿಗೆ 4 ಕೇಜಿ, ಹಿಂದೂ ಅವಿಭಕ್ತ ಕುಟುಂಬಗಳಿಗೆ 4 ಕೇಜಿ ಮತ್ತು ಪ್ರತಿ ಹಣಕಾಸು ವರ್ಷಕ್ಕೆ (ಏಪ್ರಿಲ್-ಮಾರ್ಚ್) ಟ್ರಸ್ಟ್‌ಗಳು ಮತ್ತು ಅಂತಹುದೇ ಘಟಕಗಳಿಗೆ 20 ಕೇಜಿ ಇದೆ.
KYC (ನೋ ಯುವರ್ ಕಸ್ಟಮರ್) ಅರ್ಹತೆ ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (KYC) ನಿಯಮಗಳು ಭೌತಿಕ ಚಿನ್ನದ ಖರೀದಿಗೆ ಒಂದೇ ಆಗಿರುತ್ತವೆ. ಸವರನ್ ಗೋಲ್ಡ್ ಬಾಂಡ್ ಯೋಜನೆಯನ್ನು 2015ರ ನವೆಂಬರ್ನಲ್ಲಿ ಭೌತಿಕ ಚಿನ್ನದ ಬೇಡಿಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಪ್ರಾರಂಭಿಸಲಾಯಿತು. ಮತ್ತು ದೇಶೀಯ ಉಳಿತಾಯದ ಒಂದು ಭಾಗವನ್ನು – ಚಿನ್ನದ ಖರೀದಿಗೆ ಬಳಸಸುವುದಕ್ಕೆ ಮತ್ತು ಆರ್ಥಿಕ ಉಳಿತಾಯಕ್ಕೆ ವರ್ಗಾಯಿಸಲು ಆರಂಭಿಸಲಾಯಿತು.
ಇದನ್ನೂ ಓದಿ: Gold Rate: ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ; ಆಭರಣ ಖರೀದಿಸುವ ಬಯಕೆ ಇದ್ದರೆ ದರ ವಿವರ ಪರಿಶೀಲಿಸಿ