Multibagger IPO: ಈ ಡಿಫೆನ್ಸ್ ಷೇರಿನ ಮೇಲಿನ ಹೂಡಿಕೆಯಿಂದ ಮೂರು ತಿಂಗಳಲ್ಲಿ ಶೇ 325ರಷ್ಟು ಲಾಭ

| Updated By: Srinivas Mata

Updated on: Jan 05, 2022 | 2:01 PM

ಈ ಮಲ್ಟಿಬ್ಯಾಗರ್ ಡಿಫೆನ್ಸ್ ಸ್ಟಾಕ್ ಕಳೆದ ಮೂರು ತಿಂಗಳಲ್ಲಿ ಶೇ 325ರಷ್ಟು ರಿಟರ್ನ್ಸ್ ನೀಡಿದೆ. ಯಾವುದು ಆ ಸ್ಟಾಕ್ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

Multibagger IPO: ಈ ಡಿಫೆನ್ಸ್ ಷೇರಿನ ಮೇಲಿನ ಹೂಡಿಕೆಯಿಂದ ಮೂರು ತಿಂಗಳಲ್ಲಿ ಶೇ 325ರಷ್ಟು ಲಾಭ
ಸಾಂದರ್ಭಿಕ ಚಿತ್ರ
Follow us on

2021ನೇ ಇಸವಿಯಲ್ಲಿ ಹಲವು ಮಲ್ಟಿಬ್ಯಾಗರ್ ಸ್ಟಾಕ್‌ಗಳನ್ನು ಷೇರುಪೇಟೆ ನೀಡಿದೆ. ಅಷ್ಟೇ ಅಲ್ಲ, 63 ಐಪಿಒಗಳು ಲಿಸ್ಟಿಂಗ್ ಆಗಿವೆ. ಅದರಲ್ಲಿ 15 ಐಪಿಒ ಹೂಡಿಕೆದಾರರಿಗೆ ಮಲ್ಟಿಬ್ಯಾಗರ್ ರಿಟರ್ನ್ ನೀಡಿದೆ. ಪರಸ್ ಡಿಫೆನ್ಸ್ ಮತ್ತು ಸ್ಪೇಸ್ ಟೆಕ್ನಾಲಜೀಸ್‌ನ ಸಾರ್ವಜನಿಕ ವಿತರಣೆ ಅವುಗಳಲ್ಲಿ ಒಂದು. ಈ ರಕ್ಷಣಾ ಕಂಪೆನಿಯ ಐಪಿಒ 2021ರ ಸೆಪ್ಟೆಂಬರ್​ನಲ್ಲಿ ಪ್ರತಿ ಈಕ್ವಿಟಿ ಷೇರಿಗೆ ರೂ. 165ರಿಂದ ರೂ. 175ರ ದರದ ಬ್ಯಾಂಡ್‌ನೊಂದಿಗೆ ಪ್ರಾಥಮಿಕ ಮಾರುಕಟ್ಟೆಗೆ ಬಂದಿತು. ಇದು ಎನ್​ಎಸ್​ಇ ಮತ್ತು ಬಿಎಸ್​ಇನಲ್ಲಿ ಅಕ್ಟೋಬರ್ 1ನೇ ತಾರೀಕಿನ 2021ರಂದು ಸುಮಾರು ಶೇ 170ರಷ್ಟು ಬಂಪರ್ ಪ್ರೀಮಿಯಂನಲ್ಲಿ ಲಿಸ್ಟ್ ಆಗಿತ್ತು.

ಪರಸ್ ಡಿಫೆನ್ಸ್ ಷೇರು ಬೆಲೆ ಇತಿಹಾಸ
ಪರಸ್ ಡಿಫೆನ್ಸ್ ಷೇರುಗಳು ಎನ್​ಎಸ್​ಇನಲ್ಲಿ ಪ್ರತಿ ಷೇರಿಗೆ ರೂ. 469ಕ್ಕೆ ಮತ್ತು ಬಿಎಸ್​ಇನಲ್ಲಿ ರೂ. 475ರಂತೆ ಲಿಸ್ಟಿಂಗ್ ಆಯಿತು. ಅದರ ಇಶ್ಯೂ ಬೆಲೆ ರೂ. 165ರಿಂದ ರೂ. 175ಕ್ಕೆ ಪ್ರಾರಂಭವಾಯಿತು. ಸ್ಟಾಕ್ ತನ್ನ ದೃಢವಾದ ಕಾರ್ಯಕ್ಷಮತೆಯನ್ನು ಮುಂದುವರೆಸಿತು ಮತ್ತು 22ನೇ ಅಕ್ಟೋಬರ್ 2021ರಂದು ಅದರ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ರೂ. 1,258.20ಕ್ಕೆ ಏರಿತು. ಅದರ ಲಿಸ್ಟಿಂಗ್ ಒಂದು ತಿಂಗಳೊಳಗೆ ಮಲ್ಟಿಬ್ಯಾಗರ್ ರಿಟರ್ನ್ ಅನ್ನು ತಲುಪಿಸಿತು. ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದ ನಂತರ ಈ ರಕ್ಷಣಾ ಸ್ಟಾಕ್ ಕಳೆದ ಎರಡು ತಿಂಗಳಿನಿಂದ 31 ಡಿಸೆಂಬರ್ 2021ರಂದು ರೂ. 743ಕ್ಕೆ ಕೊನೆಗೊಂಡಿದೆ. ಷೇರು ಹಂಚಿಕೆಯ ಸಂದರ್ಭದಲ್ಲಿ ಪಡೆದಂಥವರಿಗೆ ಪರಸ್ ಡಿಫೆನ್ಸ್ ರೂ. 175ರ ಮೇಲೆ ಶೇ 325ರಷ್ಟು ಲಾಭವನ್ನು ಪಡೆದಿದ್ದಾರೆ.

ಹೂಡಿಕೆ ಮೇಲೆ ಪರಿಣಾಮ
ಹಂಚಿಕೆಯ ಸಮಯದಲ್ಲಿ ಪರಸ್ ಡಿಫೆನ್ಸ್ ಷೇರುಗಳನ್ನು ಪಡೆಯಲು ವಿಫಲವಾಗಿ, ಲಿಸ್ಟಿಂಗ್​ನಲ್ಲಿ ಕೆಲವರು ಖರೀದಿಸಿದ್ದರು. ಹೂಡಿಕೆದಾರರು ಪರಸ್ ಡಿಫೆನ್ಸ್ ಸ್ಟಾಕ್ ಅನ್ನು ಲಿಸ್ಟಿಂಗ್ ದಿನಾಂಕದ ಮುಕ್ತಾಯದ ಬೆಲೆಗೆ, ಅಂದರೆ ರೂ. 492.45 ಪ್ರತಿ ಷೇರಿನ ಮಟ್ಟಕ್ಕೆ ಖರೀದಿಸಿದ್ದರೆ, ಈ ಕೌಂಟರ್‌ನಲ್ಲಿ ರೂ. 1 ಲಕ್ಷವನ್ನು ಹೂಡಿಕೆ ಮಾಡಿದರೆ, ಅದರ ಮೊತ್ತವು 2021ರ ಕೊನೆಯಲ್ಲಿ ರೂ. 1.50 ಲಕ್ಷಕ್ಕೆ ಬದಲಾಗುತ್ತಿತ್ತು.

ಹೂಡಿಕೆ ಮೇಲೆ ಪರಿಣಾಮ
ಪರಸ್ ಡಿಫೆನ್ಸ್ ಐಪಿಒದ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ ಪ್ರಕಾರ, ಒಂದು ಸಾರ್ವಜನಿಕ ಸಂಚಿಕೆಯು 85 ಪರಸ್ ಡಿಫೆನ್ಸ್ ಷೇರುಗಳನ್ನು ಒಳಗೊಂಡಿತ್ತು. ಅಂದರೆ ಐಪಿಒದಲ್ಲಿ ಅನುಮತಿಸಲಾದ ಕನಿಷ್ಠ ಹೂಡಿಕೆಯು ರೂ. 14,875 (₹175 x 85). ಹೂಡಿಕೆದಾರರು ಪರಸ್ ಡಿಫೆನ್ಸ್ ಐಪಿಒ ಒಂದನ್ನು ಪಡೆದುಕೊಂಡಿದ್ದರೆ ಮತ್ತು ಅದನ್ನು ಇಲ್ಲಿಯವರೆಗೆ ಕೌಂಟರ್‌ನಲ್ಲಿ ಹೂಡಿಕೆ ಮಾಡಿದ್ದರೆ, ಅದರ ರೂ. 14,875 ಈಗ ರೂ. 63,155 [ರೂ. 14,875 x (743/175)] ಆಗುತ್ತಿತ್ತು.

ಪರಸ್ ಡಿಫೆನ್ಸ್ ಷೇರು ಬೆಲೆ ಗುರಿ
ಪರಸ್ ಡಿಫೆನ್ಸ್ ಷೇರುಗಳು ರೂ. 750ಕ್ಕೆ ಬ್ರೇಕೌಟ್ ನೀಡಬಹುದು. ಆದ್ದರಿಂದ ತಮ್ಮ ಪೋರ್ಟ್‌ಫೋಲಿಯೊದಲ್ಲಿ ಈ ಸ್ಟಾಕ್ ಹೊಂದಿರುವವರು ಕೌಂಟರ್ ಅನ್ನು ಮುಂದುವರಿಸಬೇಕು ಆದರೆ ತಾಜಾ ಹೂಡಿಕೆದಾರರು ಈ ರಕ್ಷಣಾ ಸ್ಟಾಕ್ ಅನ್ನು ರೂ. 750 ಕ್ಕಿಂತ ಮೇಲ್ಮಟ್ಟದಲ್ಲಿ ಖರೀದಿಸಲು ಸಲಹೆ ನೀಡುತ್ತಾರೆ. ಪ್ರತಿ ಷೇರಿಗೆ ರೂ. 800 ಮತ್ತು ರೂ. 850ರ ಒಂದು ತಿಂಗಳ ಗುರಿಯ ಮಟ್ಟ ಹೊಂದಿದೆ. ಆದರೆ ಸ್ಟಾಕ್ ಬ್ರೇಕ್‌ಔಟ್ ನೀಡಲು ವಿಫಲವಾದರೆ ಆ ಸಂದರ್ಭದಲ್ಲಿ ತಾಜಾ ಹೂಡಿಕೆದಾರರು ಪ್ರತಿ ಷೇರಿನ ಮಟ್ಟಕ್ಕೆ ರೂ. 670 ರಿಂದ ರೂ. 680ರಂತೆ ಷೇರುಗಳನ್ನು ಖರೀದಿಸಬಹುದು. ಅಲ್ಪಾವಧಿಗೆ ಈ ಷೇರು ಇಟ್ಟುಕೊಳ್ಳಬಹುದು. ಪ್ರತಿ ಸ್ಟಾಕ್ ಮಟ್ಟಕ್ಕೆ ರೂ. 800ರಿಂದ ರೂ. 850ರ ಗುರಿಯನ್ನು ಹೊಂದಿದೆ ಎನ್ನುತ್ತಾರೆ ವಿಶ್ಲೇಷಕರು.

ಇದನ್ನೂ ಓದಿ: Multibagger Stocks: ಏನಿದು ಮಲ್ಟಿಬ್ಯಾಗರ್ ಸ್ಟಾಕ್? ಇದನ್ನು ಗುರುತಿಸುವುದು ಹೇಗೆ ತಿಳಿಯಿರಿ