ಇಂಟರ್​ನೆಟ್ ಇಲ್ಲದೆ ಗೂಗಲ್ ಪೇ, ಫೋನ್​ಪೇ, ಪೇಟಿಎಂ, ಯುಪಿಐ ಮನಿ ಬಳಸಿ ವಹಿವಾಟು ಹೇಗೆ?

ಇಂಟರ್​ನೆಟ್ ಇಲ್ಲದೆ ಗೂಗಲ್ ಪೇ, ಫೋನ್​ಪೇ, ಪೇಟಿಎಂ, ಯುಪಿಐ ಮನಿ ಬಳಸಿ ವಹಿವಾಟು ಹೇಗೆ?
ಸಾಂದರ್ಭಿಕ ಚಿತ್ರ

ಗೂಗಲ್ ಪೇ, ಫೋನ್​ಪೇ, ಪೇಟಿಎಂ ಮತ್ತು ಯುಪಿಐ ವಹಿವಾಟುಗಳನ್ನು ಇಂಟರ್​ನೆಟ್​ ಇಲ್ಲದೆ ಮಾಡುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

TV9kannada Web Team

| Edited By: Srinivas Mata

Jan 05, 2022 | 10:44 PM

ಯುಪಿಐ (UPI) ಪಾವತಿಗಳು ಅಥವಾ ವ್ಯಾಲೆಟ್ ಪಾವತಿಗಳಂತಹ ಡಿಜಿಟಲ್ ವಹಿವಾಟುಗಳಿಗೆ ಸಾಮಾನ್ಯವಾಗಿ ಸ್ಥಿರ ಇಂಟರ್​ನೆಟ್ ಅಗತ್ಯ. ಆದರೆ ಇಂಟರ್​ನೆಟ್ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಹೊಂದಿಲ್ಲದ ಜನರೂ ಗೂಗಲ್ ಪೇ (Google Pay), ಫೋನ್​ಪೇ (PhonePe), ಪೇಟಿಎಂ (Paytm), ಏರ್​ಟೆಲ್​ ಪೇಮೆಂಟ್ಸ್​ ಬ್ಯಾಂಕ್ (Airtel Payments Bank), ಅಮೆಜಾನ್ ಪೇ (Amazon Pay) ಮತ್ತು ಇತರವುಗಳ ಮೂಲಕವೂ ವಹಿವಾಟು ಮಾಡಬಹುದು. ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಡಿಜಿಟಲ್ ಪಾವತಿ ವಹಿವಾಟು ನಡೆಸಲು ಬಳಕೆದಾರರು ಯುಎಸ್‌ಎಸ್‌ಡಿ ಸೇವೆ ಎಂದೂ ಕರೆಯುವ ‘*99#’ ಅನ್ನು ಡಯಲ್ ಮಾಡಬಹುದು. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಯುಪಿಐ ನೆಟ್‌ವರ್ಕ್ ಅನ್ನು ಪ್ರಾರಂಭಿಸುವ ಸುಮಾರು ನಾಲ್ಕು ವರ್ಷಗಳ ಮೊದಲು 2012ರ ನವೆಂಬರ್​ನಲ್ಲಿ USSD ಸೇವೆಯನ್ನು ಪ್ರಾರಂಭಿಸಿತು. ಈ ಎರಡು ಡಿಜಿಟಲ್ ಪಾವತಿ ವಿಧಾನಗಳನ್ನು ಅಂದಿನಿಂದ ಸಂಯೋಜಿಸಲಾಗಿದೆ. ಇಂಟರ್​ನೆಟ್ ಸಂಪರ್ಕ ಇಲ್ಲದೆಯೂ ಯುಪಿಐ ವಹಿವಾಟುಗಳನ್ನು ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

ಇಂಟರ್​ನೆಟ್ ಇಲ್ಲದೆ ಯುಪಿಐ ಪಾವತಿಗಳನ್ನು ಮಾಡಲು *99# ಸೇವೆಯನ್ನು ಹೇಗೆ ಬಳಸಬಹುದು ಎಂಬುದನ್ನು ಇಲ್ಲಿ ತಿಳಿಸಲಾಗುತ್ತಿದೆ.

ಹಂತ 1: ಇಂಟರ್​ನೆಟ್ ಅಥವಾ ಸ್ಮಾರ್ಟ್‌ಫೋನ್ ಇಲ್ಲದೆ ಡಿಜಿಟಲ್ ವಹಿವಾಟು ನಡೆಸುವ ಅಗತ್ಯ ಇರುವವರು UPI ಖಾತೆಗಾಗಿ BHIM ಅಪ್ಲಿಕೇಷನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಜನರು ಬ್ಯಾಂಕ್ ಖಾತೆಗೆ ಜೋಡಣೆ ಆಗಿರುವ ತಮ್ಮ ಸರಿಯಾದ ಫೋನ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.

ಹಂತ 2: ‘*99#’ ಅನ್ನು ಡಯಲ್ ಮಾಡಿ ಮತ್ತು ಅದು ನಿಮ್ಮನ್ನು ಏಳು ಆಯ್ಕೆಗಳೊಂದಿಗೆ ಸಂಖ್ಯೆಯ ಮೆನುಗೆ ರೀಡೈರೆಕ್ಟ್​ (ಮರು ನಿರ್ದೇಶಿಸುತ್ತದೆ). ಹಣ ಕಳುಹಿಸು, ಹಣವನ್ನು ಸ್ವೀಕರಿಸಿ, ಬ್ಯಾಲೆನ್ಸ್ ಪರಿಶೀಲಿಸಿ, ನನ್ನ ಪ್ರೊಫೈಲ್, ಬಾಕಿ ಇರುವ ವಿನಂತಿಗಳು, ವಹಿವಾಟುಗಳು ಮತ್ತು UPI ಪಿನ್ – ಇವೇ ಆ ಮೆನು.

ಹಂತ 3: ಹಣವನ್ನು ಕಳುಹಿಸಲು, ಟೆಕ್ಸ್ಟ್ ಜಾಗದಲ್ಲಿ ಸಂಖ್ಯೆ 1 ಟೈಪ್ ಮಾಡಿ. ನಿಮ್ಮ UPI ಐಡಿ, ಬ್ಯಾಂಕ್ ಖಾತೆ ಸಂಖ್ಯೆ ಮತ್ತು IFSC ಕೋಡ್ ಅಥವಾ ಫೋನ್ ಸಂಖ್ಯೆಯನ್ನು ಬಳಸಿಕೊಂಡು ವಹಿವಾಟು ನಡೆಸಲು ಇದು ಅನುಮತಿಸುತ್ತದೆ. ನಿಮ್ಮ ಆಯ್ಕೆಯ ವಿಧಾನವನ್ನು ಆರಿಸಿ.

ಹಂತ 4: UPI ಅನ್ನು ಆರಿಸಿದರೆ ನಂತರ ನೀವು ಸ್ವೀಕರಿಸುವವರ UPI ID ಅನ್ನು ನಮೂದಿಸಬೇಕಾಗುತ್ತದೆ. ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿದರೆ ನಂತರ ನೀವು ಫಲಾನುಭವಿಯ ಖಾತೆ ಸಂಖ್ಯೆ ಮತ್ತು IFSC ಕೋಡ್ ಅನ್ನು ನಮೂದಿಸಬೇಕು. ಫೋನ್ ಸಂಖ್ಯೆಯ ಆಯ್ಕೆಗಳಿಗೆ ಹೋದರೆ, ನಂತರ ನೀವು ಸ್ವೀಕರಿಸುವವರ ಫೋನ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.

ಹಂತ 5: ಈಗ ಯಾವುದೇ ಇತರ ಡಿಜಿಟಲ್ ವಹಿವಾಟು ಪ್ಲಾಟ್​ಫಾರ್ಮ್​ನಂತೆ ನೀವು ವರ್ಗಾಯಿಸಲು ಬಯಸುವ ಮೊತ್ತವನ್ನು ನಮೂದಿಸಬೇಕು.

ಹಂತ 6: ಕೊನೆಯ ಹಂತದಲ್ಲಿ ನಿಮ್ಮ UPI ಪಿನ್ ಸಂಖ್ಯೆಯನ್ನು ನಮೂದಿಸಿ. ವಹಿವಾಟನ್ನು ಪೂರ್ಣಗೊಳಿಸಲು ‘ಕಳುಹಿಸು’ (send) ಒತ್ತಿರಿ. ವಹಿವಾಟು ಪೂರ್ಣಗೊಂಡ ನಂತರ ನಿಮ್ಮ ಫೋನ್‌ನಲ್ಲಿ ಗೋಚರಿಸುವ ದೃಢೀಕರಣವನ್ನು ಪಡೆಯುತ್ತೀರಿ. ಭವಿಷ್ಯದ ವಹಿವಾಟುಗಳಿಗಾಗಿ ಫಲಾನುಭವಿಯನ್ನು ಫೇವರಿಟ್ ಆಗಿ ಉಳಿಸಲು ಕೇಳಲಾಗುತ್ತದೆ. ಎಚ್ಚರಿಕೆಯಿಂದ ಇರಿ, ಈ ಸೇವೆಯನ್ನು ಬಳಸುವುದರಿಂದ 0.50ರ (50 ಪೈಸೆ) ಅತ್ಯಲ್ಪ ಶುಲ್ಕ ಆಗುತ್ತದೆ.

ಇದನ್ನೂ ಓದಿ: Digital payments proxy app: ಆನ್​ಲೈನ್ ಡಿಜಿಟಲ್ ಪೇಮೆಂಟ್ ವೇಳೆ ಎಚ್ಚರವಾಗಿಲ್ಲದಿದ್ದರೆ ಪಿಗ್ಗಿ ಬೀಳೋದು ಗ್ಯಾರಂಟಿ

Follow us on

Related Stories

Most Read Stories

Click on your DTH Provider to Add TV9 Kannada