Telangana: ಉಪಚುನಾವಣೆಗೂ ಮುನ್ನ ಬಿಜೆಪಿ ಕಾರ್ಪೊರೇಟರ್‌ನ ಕಾರಿನಲ್ಲಿ 1 ಕೋಟಿ ರೂ. ನಗದು ಪತ್ತೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 18, 2022 | 9:52 AM

ಚೆಲ್ಮೆಡಾ ಚೆಕ್‌ಪೋಸ್ಟ್‌ನಲ್ಲಿ ಸೋಮವಾರ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರಿಗೆ ಬಿಜೆಪಿ ಕಾರ್ಪೊರೇಟರ್‌ನ ಕಾರಿನಲ್ಲಿ 1 ಕೋಟಿ ರೂ. ನಗದು ಸಿಕ್ಕಿದೆ.

Telangana: ಉಪಚುನಾವಣೆಗೂ ಮುನ್ನ ಬಿಜೆಪಿ ಕಾರ್ಪೊರೇಟರ್‌ನ ಕಾರಿನಲ್ಲಿ 1 ಕೋಟಿ ರೂ. ನಗದು ಪತ್ತೆ
Follow us on

ನಲ್ಗೊಂಡ: ತೆಲಂಗಾಣದ ನಲ್ಗೊಂಡ ಜಿಲ್ಲೆಯ ಚೆಲ್ಮೆಡಾ ಚೆಕ್‌ಪೋಸ್ಟ್‌ನಲ್ಲಿ ಸೋಮವಾರ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರಿಗೆ ಬಿಜೆಪಿ ಕಾರ್ಪೊರೇಟರ್‌ನ ಕಾರಿನಲ್ಲಿ 1 ಕೋಟಿ ರೂ. ನಗದು ಸಿಕ್ಕಿದೆ. ಈ ಹಣವು ನವೆಂಬರ್ 3 ರಂದು ನಡೆಯಲಿರುವ ಮುನುಗೋಡು ಉಪಚುನಾವಣೆಗೆ ಮುಂಚಿತವಾಗಿ ಬಿಜೆಪಿ ಕಾರ್ಪೊರೇಟರ್‌ ಕಾರಿನಲ್ಲಿ ಪತ್ತೆಯಾಗಿದೆ

ನಲ್ಗೊಂಡ ಪೊಲೀಸ್ ವರಿಷ್ಠಾಧಿಕಾರಿ ರೆಮಾ ರಾಜೇಶ್ವರಿ ಅವರ ಪ್ರಕಾರ, ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಚೆಲ್ಮೆಡ ಚೆಕ್‌ಪೋಸ್ಟ್‌ನಲ್ಲಿ ಪೊಲೀಸ್ ತಂಡವೊಂದು ವಾಹನ ತಪಾಸಣೆ ನಡೆಸುತ್ತಿದ್ದಾಗ ಟಾಟಾ ಸಫಾರಿಯನ್ನು ತಡೆದಿದ್ದಾರೆ. ಈ ಕಾರನ್ನು ಕರೀಂನಗರದ ಬಿಜೆಪಿ ಕಾರ್ಪೊರೇಟರ್ ವೇಣು ಚಲಾಯಿಸುತ್ತಿದ್ದರು ಎಂದು ಹೇಳಲಾಗಿದೆ. ಈ ಕಾರಿನಲ್ಲಿ 1 ಕೋಟಿ ರೂ. ನಗದು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನು ಓದಿ: ಪೂರ್ವ ಅಂಧೇರಿ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸುವುದಿಲ್ಲ

ಚೆಕ್‌ಪೋಸ್ಟ್‌ ಬಳಿ ಬರುತ್ತಿದ್ದ ಕಾರನ್ನು ಪೊಲೀಸ್ ತಂಡ ತಡೆದು ಪರಿಶೀಲನೆ ಮಾಡಿದ್ದಾರೆ. ಕಾರಿನ ಹಿಂದಿನ ಡಿಕ್ಕಿಯಲ್ಲಿ 1 ಕೋಟಿ ರೂ. ನಗದು ತುಂಬಿದ್ದ ಬ್ಯಾಗ್ ಪೊಲೀಸರಿಗೆ ಸಿಕ್ಕಿದೆ. ನಂತರ ವೇಣು ಅವರನ್ನು ವಿಚಾರಣೆ ನಡೆಸಲಾಗಿದೆ ಆದರೆ ಹಣವನ್ನು ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂಬುದರ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲ, ಈ ಹಣದ ಲೆಕ್ಕಕ್ಕೆ ದಾಖಲೆಗಳು ಕೂಡ ಇರಲಿಲ್ಲ ಎಂದು ಹೇಳಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ. ನಲ್ಗೊಂಡ ಜಿಲ್ಲೆಯ ಮುನುಗೋಡು ಗ್ರಾಮವು ನವೆಂಬರ್ 3ರಂದು ಉಪಚುನಾವಣೆ ಬರುತ್ತಿದ್ದು ಇದೀಗ ಇಂತಹ ಪ್ರಕರಣ ಪತ್ತೆಯಾಗಿರುವುದು ಅನುಮಾನವನ್ನು ಸೃಷ್ಟಿಸಿದೆ.

Published On - 9:50 am, Tue, 18 October 22