Shocking News: ಏಳು ತಿಂಗಳ ಮಗುವಿನ ಕರುಳು ತಿಂದ ಬೀದಿ ನಾಯಿ, ಚಿಕಿತ್ಸೆ ಫಲಿಸದೇ ಮಗು ಸಾವು

ಕಾರ್ಮಿಕರೊಬ್ಬರ ಏಳು ತಿಂಗಳ ಮಗುವನ್ನು ಬೀದಿ ನಾಯಿ ಕೊಂದು ಹಾಕಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ಸೋಮವಾರ ಸಂಜೆ ನಡೆದಿದೆ.

Shocking News: ಏಳು ತಿಂಗಳ ಮಗುವಿನ ಕರುಳು ತಿಂದ ಬೀದಿ ನಾಯಿ, ಚಿಕಿತ್ಸೆ ಫಲಿಸದೇ ಮಗು ಸಾವು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 18, 2022 | 12:25 PM

ನೋಯ್ಡಾ: ಕಾರ್ಮಿಕರೊಬ್ಬರ ಏಳು ತಿಂಗಳ ಮಗುವನ್ನು ಬೀದಿ ನಾಯಿ ಕೊಂದು ಹಾಕಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ಸೋಮವಾರ ಸಂಜೆ ನಡೆದಿದೆ. ಅಂಬೆಗಾಲಿಡುತ್ತಿದ್ದ ಮಗುವನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮಗು ಐಸಿಯುನಲ್ಲಿ ಕೊನೆ ಉಸಿರೆಳೆದಿದೆ. ಬೀದಿ ನಾಯಿ ದಾಳಿಯಿಂದ ಮಗುವಿನ ಕರುಳು ಹೊರ ಬಂದಿದೆ. ನೋಯ್ಡಾದ ಯಥಾರ್ಥ್ ಆಸ್ಪತ್ರೆಯಲ್ಲಿ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.

ರಾತ್ರಿಯಿಡೀ ಚಿಂತಾಜನಕ ಸ್ಥಿತಿಯಲ್ಲಿದ್ದ ಮಗು ಇಂದು ಬೆಳಗ್ಗೆ (ಮಂಗಳವಾರ) ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಸೆಕ್ಟರ್ 100 ರಲ್ಲಿರುವ ಲೋಟಸ್ ಬೌಲೆವಾರ್ಡ್ ಎಂಬ ನೋಯ್ಡಾ ಹೌಸಿಂಗ್ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ.

ಇದೀಗ ಈ ಬಗ್ಗೆ ಅಕ್ರೋಶಗೊಂಡಿರುವ ನೋಯ್ಡಾ ಹೌಸಿಂಗ್ ಸೊಸೈಟಿ ನಿವಾಸಿಗಳು ಒಂದೆಡೆ ಸೇರಿ ನೋಯ್ಡಾ ಪ್ರಾಧಿಕಾರ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ನೋಯ್ಡಾ ಹೌಸಿಂಗ್ ಸೊಸೈಟಿ ನಿವಾಸಿಗಳೊಬ್ಬರ ಪ್ರಕಾರ, ಈ ಹೌಸಿಂಗ್​ನ ನೆಲಮಾಳಿಗೆಯಲ್ಲಿ ಅನೇಕ ಬೀದಿ ನಾಯಿಗಳು ವಾಸಿಸುತ್ತಿವೆ. ಈ ನಾಯಿಗಳಿಗೆ ಹೌಸಿಂಗ್ ಒಳಗೆ ಅನ್ನ ನೀಡಲಾಗುತ್ತಿದೆ. ನೋಯ್ಡಾ ಹೌಸಿಂಗ್ ಸೊಸೈಟಿ ಕಟ್ಟಡದ ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದು, ಈ ಕಾರಣಕ್ಕೆ ಕಾರ್ಮಿಕರು ಇಲ್ಲಿ ವಾಸವಾಗಿದ್ದಾರೆ ಎಂದು ಹೇಳಿದ್ದಾರೆ.

ಇದನ್ನು ಓದಿ:  Shocking News: ಆಂಧ್ರಪ್ರದೇಶದಲ್ಲಿ ವಿಷದ ಇಂಜೆಕ್ಷನ್ ಚುಚ್ಚಿ 18 ನಾಯಿಗಳ ಹತ್ಯೆ

ಈ ಬೀದಿ ನಾಯಿಗಳು ಅನೇಕ ಬಾರಿ ನಮ್ಮ ಮೇಲೆ ದಾಳಿ ಮಾಡಿದೆ ಇದೇನು ಮೊದಲ ಘಟನೆಯಲ್ಲ, ಇದು ಪ್ರತಿ 3-4 ತಿಂಗಳಿಗೊಮ್ಮೆ ಸಂಭವಿಸುತ್ತಿದೆ. ನಾವು ಈ ಬಗ್ಗೆ ನೋಯ್ಡಾ ಪ್ರಾಧಿಕಾರ ಮತ್ತು ಎಒಎಗೆ ದೂರು ನೀಡಿದ್ದೇವೆ, ಆದರೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿ ಹೇಳಿದರು.

ಈ ಬಗ್ಗೆ ನೋಯ್ಡಾ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯ ನಂತರ, ನೋಯ್ಡಾ ಹೌಸಿಂಗ್ ಸೊಸೈಟಿ AOA ಕಾರ್ಯದರ್ಶಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ AOA ಅಧ್ಯಕ್ಷರು ನೋಯ್ಡಾ ಪ್ರಾಧಿಕಾರದೊಂದಿಗೆ ಮಾತನಾಡಿದ್ದಾರೆ ತಕ್ಷಣ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ.

Published On - 10:41 am, Tue, 18 October 22

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ