ಅಗ್ನಿ ದುರಂತದಲ್ಲಿ 10 ಮಕ್ಕಳು ಸಜೀವ ದಹನ: ಟ್ವಿಟರ್​ನಲ್ಲಿ ಸಂತಾಪ ಸೂಚಿಸಿದ ಪ್ರಧಾನಿ ಮೋದಿ

|

Updated on: Jan 09, 2021 | 10:35 AM

ಟ್ವೀಟ್​ ಮಾಡಿರುವ ಪ್ರದಾನಿ ಮೋದಿ, ಮಹಾರಾಷ್ಟ್ರದ ಭಂಡಾರದಲ್ಲಿ ಹೃದಯ ಕದಡುವ ದುರಂತ ನಡೆದು ಹೋಗಿದೆ. ನಾವು ಅಮೂಲ್ಯವಾದ ಯುವ ಜೀವಗಳನ್ನು ಕಳೆದುಕೊಂಡಿದ್ದೇವೆ.

ಅಗ್ನಿ ದುರಂತದಲ್ಲಿ 10 ಮಕ್ಕಳು ಸಜೀವ ದಹನ: ಟ್ವಿಟರ್​ನಲ್ಲಿ ಸಂತಾಪ ಸೂಚಿಸಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿ
Follow us on

ಮಹಾರಾಷ್ಟ್ರ: ಶುಕ್ರವಾರ ತಡರಾತ್ರಿ ಸಂಭವಿಸಿದ್ದ ಭೀಕರ ಅಗ್ನಿ ದುರಂತದಲ್ಲಿ ಹತ್ತು ಮಕ್ಕಳು ಸಜೀವ ದಹನವಾಗಿದ್ದರು. ಈ ಮನ ಕಲುಕುವ ಘಟನೆಗೆ ಪ್ರಧಾನಿ ಮೋದಿ ಟ್ವಿಟರ್​ನಲ್ಲಿ ಸಂತಾಪ ಸೂಚಿಸಿದ್ದಾರೆ.

ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಮಹಾರಾಷ್ಟ್ರದ ಭಂಡಾರದಲ್ಲಿ ಹೃದಯ ಕದಡುವ ದುರಂತ ನಡೆದು ಹೋಗಿದೆ. ನಾವು ಅಮೂಲ್ಯವಾದ ಯುವ ಜೀವಗಳನ್ನು ಕಳೆದುಕೊಂಡಿದ್ದೇವೆ. ಎಲ್ಲಾ ದುಃಖಿತ ಕುಟುಂಬಗಳೊಂದಿಗೆ ನಾನಿದ್ದೇನೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ.

ಸಾರ್ವಜನಿಕ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 10 ಮಕ್ಕಳು ಸಜೀವದಹನ

Published On - 10:27 am, Sat, 9 January 21