ಛತ್​ ಪೂಜೆ ನೆರವೇರಿಸಿ ಮನೆಗೆ ಹೋಗುತ್ತಿದ್ದ 10 ಮಂದಿ ಸಾವು; ಟ್ರಕ್​ ಚಾಲಕನ ನಿರ್ಲಕ್ಷ್ಯಕ್ಕೆ ಮಹಿಳೆಯರು, ಮಕ್ಕಳು ಬಲಿ

| Updated By: Lakshmi Hegde

Updated on: Nov 11, 2021 | 2:08 PM

ಛತ್​​ ಪೂಜೆಯನ್ನು ನೆರವೇರಿಸಿ ಒಂದೇ ಆಟೋದಲ್ಲಿ ಮನೆಗೆ ವಾಪಸ್​ ಹೋಗುತ್ತಿದ್ದರು. ಎದುರುಗಡೆಯಿಂದ ಬಂದ ಟ್ರಕ್​ ಈ ಆಟೋಕ್ಕೆ ಡಿಕ್ಕಿಯಾಗಿದೆ ಎಂದು ಸ್ಥಳೀಯರ ಪೊಲೀಸರು ಮಾಹಿತಿ ನೀಡಿದ್ದಾರೆ. 

ಛತ್​ ಪೂಜೆ ನೆರವೇರಿಸಿ ಮನೆಗೆ ಹೋಗುತ್ತಿದ್ದ 10 ಮಂದಿ ಸಾವು; ಟ್ರಕ್​ ಚಾಲಕನ ನಿರ್ಲಕ್ಷ್ಯಕ್ಕೆ ಮಹಿಳೆಯರು, ಮಕ್ಕಳು ಬಲಿ
ಅಸ್ಸಾಂ ಅಪಘಾತ
Follow us on

ಛತ್​​ ಪೂಜೆ ನೆರವೇರಿಸಿ ಆಟೋದಲ್ಲಿ ವಾಪಸ್​ ಮನೆಗೆ ಹೋಗುತ್ತಿದ್ದ 10ಮಂದಿ ದುರ್ಮರಣಕ್ಕೀಡಾದ ಘಟನೆ ಅಸ್ಸಾಂ-ತ್ರಿಪುರ ಗಡಿಯಲ್ಲಿ ನಡೆದಿದೆ. ಅಸ್ಸಾಂನ ಕರೀಮ್​ಗಂಜ್​​ನ ಎನ್​ಎಚ್​-8 ಹೆದ್ದಾರಿಯಲ್ಲಿ  ಹೋಗುತ್ತಿದ್ದ ಆಟೋಕ್ಕೆ ಟ್ರಕ್​ವೊಂದು ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ನಡೆದಿದ್ದು, 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.  

ಮೂವರು ಪುರುಷರು, ಐವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಇವರೆಲ್ಲ ಛತ್​​ ಪೂಜೆಯನ್ನು ನೆರವೇರಿಸಿ ಒಂದೇ ಆಟೋದಲ್ಲಿ ಮನೆಗೆ ವಾಪಸ್​ ಹೋಗುತ್ತಿದ್ದರು. ಎದುರುಗಡೆಯಿಂದ ಬಂದ ಟ್ರಕ್​ ಈ ಆಟೋಕ್ಕೆ ಡಿಕ್ಕಿಯಾಗಿದೆ ಎಂದು ಸ್ಥಳೀಯರ ಪೊಲೀಸರು ಮಾಹಿತಿ ನೀಡಿದ್ದಾರೆ.  ಅಪಘಾತವನ್ನು ಕಣ್ಣಾರೆ ನೋಡಿದವರು ಹೇಳಿರುವ ಪ್ರಕಾರ ತಪ್ಪು ಟ್ರಕ್​ ಚಾಲಕನದೇ ಆಗಿದೆ. ಮಿತಿಮೀರಿದ ವೇಗದಲ್ಲಿ ಆತ ಬರುತ್ತಿದ್ದ. ಹೀಗಾಗಿ ಎದುರು ಬಂದ ಆಟೋವನ್ನು ತಪ್ಪಿಸಲು ಅವನಿಗೆ ಆಗಲಿಲ್ಲ ಎಂದು ಹೇಳಿದ್ದಾರೆ.

ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿ ಅಸ್ಸಾಂನ ಅರಣ್ಯ ಮತ್ತು ಅಬಕಾರಿ ಸಚಿವ ಪರಿಮಳ್​ ಶುಕ್ಲವೈದ್ಯ ಟ್ವೀಟ್​ ಮಾಡಿದ್ದಾರೆ. ಟ್ರಕ್ ಚಾಲಕನನ್ನು ಶೀಘ್ರವೇ ಬಂಧಿಸುವ ಭರವಸೆಯನ್ನೂ ನೀಡಿದ್ದಾರೆ.

ಇದನ್ನೂ ಓದಿ: ತೃತೀಯ ಲಿಂಗಿಗಳಿಗೆ ಉದ್ಯೋಗದಲ್ಲಿ ಮೀಸಲಾತಿಗೆ ಮದ್ರಾಸ್​ ಹೈಕೋರ್ಟ್​ ಅನುಮತಿ