ದೆಹಲಿಯಲ್ಲಿ ಭಾರೀ ಮಳೆ; ರಕ್ಷಣಾ ಸಚಿವ ಪ್ರಯಾಣಿಸುತ್ತಿದ್ದ ವಿಮಾನ ಸೇರಿ 11 ವಿಮಾನಗಳ ಮಾರ್ಗ ಬದಲು

| Updated By: ಸುಷ್ಮಾ ಚಕ್ರೆ

Updated on: May 21, 2022 | 12:58 PM

ಪ್ರತಿಕೂಲ ಹವಾಮಾನದಿಂದಾಗಿ ದೆಹಲಿಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ವಿಮಾನ ಸೇರಿದಂತೆ 11 ವಿಮಾನಗಳನ್ನು ಅಹಮದಾಬಾದ್, ಜೈಪುರ, ಲಕ್ನೋ ಮತ್ತು ಆಗ್ರಾಕ್ಕೆ ತಿರುಗಿಸಲಾಗಿದೆ.

ದೆಹಲಿಯಲ್ಲಿ ಭಾರೀ ಮಳೆ; ರಕ್ಷಣಾ ಸಚಿವ ಪ್ರಯಾಣಿಸುತ್ತಿದ್ದ ವಿಮಾನ ಸೇರಿ 11 ವಿಮಾನಗಳ ಮಾರ್ಗ ಬದಲು
ದೆಹಲಿ ವಿಮಾನ
Follow us on

ನವದೆಹಲಿ: ಭಾರೀ ಮಳೆಯಿಂದ (Delhi Rain) ದೆಹಲಿಯಲ್ಲಿ ಪ್ರತಿಕೂಲ ಹವಾಮಾನ ಉಂಟಾಗಿರುವ ಹಿನ್ನೆಲೆಯಲ್ಲಿ ಇಂದು 11 ವಿಮಾನಗಳನ್ನು ಬೇರೆ ನಿಲ್ದಾಣಗಳಿಗೆ ತಿರುಗಿಸಲಾಗಿದೆ. ಈ 11 ವಿಮಾನಗಳಲ್ಲಿ ಪೈಕಿ ಒಂದರಲ್ಲಿ ಕೇಂದ್ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಪ್ರಯಾಣಿಸುತ್ತಿದ್ದ ವಿಮಾನವೂ ಸೇರಿದೆ. ಮೂಲಗಳ ಪ್ರಕಾರ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುಜರಾತ್‌ನ ವಡೋದರಾದ ಶ್ರೀ ಸ್ವಾಮಿನಾರಾಯಣ ದೇವಸ್ಥಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಂತರ ದೆಹಲಿಗೆ ಹಿಂತಿರುಗುತ್ತಿದ್ದರು. ಈ ವೇಳೆ ಭಾರೀ ಮಳೆಯಿಂದಾಗಿ ಅವರಿದ್ದ ವಿಮಾನವನ್ನು ಆಗ್ರಾಗೆ ತಿರುಗಿಸಲಾಯಿತು.

ಪ್ರತಿಕೂಲ ಹವಾಮಾನದಿಂದಾಗಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ವಿಮಾನ ಸೇರಿದಂತೆ 11 ವಿಮಾನಗಳನ್ನು ಅಹಮದಾಬಾದ್, ಜೈಪುರ, ಲಕ್ನೋ ಮತ್ತು ಆಗ್ರಾಕ್ಕೆ ತಿರುಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. (Source)

ಇದನ್ನೂ ಓದಿ: Karnataka Rain: ಮಲೆನಾಡಿನಲ್ಲಿ ಮಳೆಯ ಅಬ್ಬರ ಇಳಿಕೆ; ಕರಾವಳಿಯಲ್ಲಿ ಇನ್ನೆರಡು ದಿನ ಭಾರೀ ಮಳೆ

ಇದನ್ನೂ ಓದಿ
NSE co-location scam case: NSE ಕೋ ಲೋಕೇಷನ್ ಹಗರಣ; ಮುಂಬೈ, ಕೋಲ್ಕತಾ ಸೇರಿ 10 ಸ್ಥಳಗಳಲ್ಲಿ ಸಿಬಿಐ ಶೋಧ
Rahul Gandhi: ‘ಮಾತುಗಳನ್ನು ಕೇಳಿಸಿಕೊಳ್ಳುವ ಮನೋಭಾವ ಪ್ರಧಾನಿಯವರಿಗಿಲ್ಲ’; ಲಂಡನ್​ನಲ್ಲಿ ರಾಹುಲ್ ಗಾಂಧಿ ವಾಗ್ದಾಳಿ 
Monkeypox: ಒಂದೊಂದೇ ದೇಶಕ್ಕೆ ಲಗ್ಗೆ ಇಡುತ್ತಿದೆ ಮಂಕಿಪಾಕ್ಸ್: ವಿಶ್ವಸಂಸ್ಥೆ ಎಚ್ಚರಿಕೆ

ಕೆಟ್ಟ ಹವಾಮಾನದಿಂದಾಗಿ, ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳು ಪರಿಣಾಮ ಬೀರುತ್ತವೆ. ನವೀಕರಿಸಿದ ವಿಮಾನ ಪ್ರಯಾಣದ ಮಾಹಿತಿಗಾಗಿ ಸಂಬಂಧಿಸಿದ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ಪ್ರಯಾಣಿಕರಿಗೆ ವಿನಂತಿಸಲಾಗಿದೆ ಎಂದು ವಿಮಾನಯಾನ ಸಚಿವಾಲಯ ಟ್ವೀಟ್ ಮಾಡಿದೆ.

ಪಂಜಾಬ್ ಮತ್ತು ಹರಿಯಾಣದಲ್ಲಿ ಚಾಲ್ತಿಯಲ್ಲಿರುವ ಸೈಕ್ಲೋನಿಕ್ ಪರಿಚಲನೆಯಿಂದಾಗಿ ಇಂದು ದೆಹಲಿಯಲ್ಲಿ ಗುಡುಗು ಸಹಿತ ಮಳೆಯಾಗುತ್ತದೆ ಎಂದು IMD ಹೇಳಿದೆ. ಮಂಗಳವಾರದ ವೇಳೆಗೆ ದೆಹಲಿಯಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:57 pm, Sat, 21 May 22