NSE co-location scam case: NSE ಕೋ ಲೋಕೇಷನ್ ಹಗರಣ; ಮುಂಬೈ, ಕೋಲ್ಕತಾ ಸೇರಿ 10 ಸ್ಥಳಗಳಲ್ಲಿ ಸಿಬಿಐ ಶೋಧ
NSE co-location scam case | CBI Searches: NSE ಕೋ ಲೋಕೇಷನ್ ಹಗರಣದಲ್ಲಿ (NSE co-location scam case) ಬ್ರೋಕರ್, ಟ್ರೇಡರ್ಗಳ ಮೇಲೆ ಸಿಬಿಐ (CBI Raid) ದಾಳಿ ನಡೆಸಿದೆ.
ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಕೋ ಲೋಕೇಷನ್ ಹಗರಣದಲ್ಲಿ (NSE co-location scam case) ಬ್ರೋಕರ್, ಟ್ರೇಡರ್ಗಳ ಮೇಲೆ ಸಿಬಿಐ (CBI Raid) ದಾಳಿ ನಡೆಸಿದೆ. ಮುಂಬೈ, ಗಾಂಧಿನಗರ, ಗುರುಗ್ರಾಮ, ಕೋಲ್ಕತಾ ಸೇರಿದಂತೆ ಹತ್ತು ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ನಡೆಸುತ್ತಿದೆ ಎಂದು ಎಎನ್ಐ ವರದಿ ಮಾಡಿದೆ. ಈ ಪ್ರಕರಣದಲ್ಲಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಮಾಜಿ ಸಿಇಒ ಮತ್ತು ಎಂಡಿ ಚಿತ್ರಾ ರಾಮಕೃಷ್ಣ ಮತ್ತು ಗ್ರೂಪ್ ಆಪರೇಟಿಂಗ್ ಆಫೀಸರ್ ಆನಂದ್ ಸುಬ್ರಮಣಿಯನ್ ವಿರುದ್ಧ ಕೇಂದ್ರೀಯ ಸಂಸ್ಥೆ ಚಾರ್ಜ್‌ಶೀಟ್ ಸಲ್ಲಿಸಿದೆ. ಎನ್‌ಎಸ್‌ಇ ಅಧಿಕಾರಿಗಳು ಕೆಲವು ಬ್ರೋಕರ್ಗಳಿಗೆ ತಮ್ಮ ಅಧಿಕಾರಾವಧಿಯಲ್ಲಿ ಪ್ರಾಶಸ್ತ್ಯವನ್ನು ನೀಡಿದ್ದರು. ಅದರಿಂದ ಮಾಡಲಾಗಿರುವ ಅಕ್ರಮ ಲಾಭದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.
ಎಎನ್ಐ ಟ್ವೀಟ್ ಇಲ್ಲಿದೆ:
CBI conducting searches against brokers at more than 10 locations in Delhi, Mumbai, Kolkata, Gandhinagar, Noida and Gurugram in connection with the NSE co-location scam case: Sources
— ANI (@ANI) May 21, 2022
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಿತ್ರಾ ರಾಮಕೃಷ್ಣ ಅವರನ್ನು ಸಿಬಿಐ ಮಾರ್ಚ್‌ನಲ್ಲಿ ಬಂಧಿಸಿತ್ತು. ಎನ್‌ಎಸ್‌ಇ ಕೋ-ಲೋಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಡಿಗೆ ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಸಲಹೆಗಾರರಾಗಿದ್ದ ಆನಂದ್ ಸುಬ್ರಮಣಿಯನ್ ಅವರನ್ನು ಫೆಬ್ರವರಿ ತಿಂಗಳಲ್ಲಿ ಬಂಧಿಸಲಾಗಿತ್ತು.
ಇತ್ತೀಚೆಗೆ (ಮೇ.18) (NSE) ಚಿತ್ರಾ ರಾಮಕೃಷ್ಣ ಅವರು ಕೋ-ಲೋಕೇಷನ್ ಪ್ರಕರಣದಲ್ಲಿ ಜಾಮೀನು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ತಲ್ವಂತ್ ಸಿಂಗ್ ಅವರ ಪೀಠವು ಈ ಪ್ರಕರಣದ ವಿಚಾರಣೆಗೆ ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:00 pm, Sat, 21 May 22