Indore: 11 ವರ್ಷದ ಬಾಲಕನನ್ನು ವಿವಸ್ತ್ರಗೊಳಿಸಿ, ಥಳಿಸಿ, ಧಾರ್ಮಿಕ ಘೋಷಣೆ ಕೂಗುವಂತೆ ಒತ್ತಡ ಹಾಕಿದ್ರು
ಮಧ್ಯಪ್ರದೇಶದ ಇಂದೋರ್ನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ 11 ವರ್ಷದ ಬಾಲಕನೊಬ್ಬನನ್ನು ವಿವಸ್ತ್ರಗೊಳಿಸಿ ಧಾರ್ಮಿಕ ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಲಾಯಿತು ಎಂಬುದು ತಿಳಿದುಬಂದಿದೆ.
ಮಧ್ಯಪ್ರದೇಶದ ಇಂದೋರ್ನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ 11 ವರ್ಷದ ಬಾಲಕನೊಬ್ಬನನ್ನು ವಿವಸ್ತ್ರಗೊಳಿಸಿ ಧಾರ್ಮಿಕ ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಲಾಯಿತು ಎಂಬುದು ತಿಳಿದುಬಂದಿದೆ. ಇದೀಗ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ, ಇದರಲ್ಲಿ ಬಾಲಕ ಧಾರ್ಮಿಕ ಘೋಷಣೆಗಳನ್ನು ಕೂಗುತ್ತಿರುವುದನ್ನು ಕಾಣಬಹುದು. ಪ್ರಕರಣದ ವಿಡಿಯೋ ಹೊರಬಿದ್ದ ಬಳಿಕ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿ ಕೂಡ ಅಪ್ರಾಪ್ತನಾಗಿದ್ದಾನೆ, ಈ ಪ್ರಕರಣವು ನಿಪಾನಿಯಾ ಪ್ರದೇಶದಲ್ಲಿ ನಡೆದಿದೆ. ತಾನು ಸ್ಟಾರ್ ಸ್ಕ್ವೇರ್ ಬಳಿ ಆಟವಾಡುತ್ತಿದ್ದಾಗ, ಆರೋಪಿಗಳು ಬೈಪಾಸ್ ಬಳಿ ಆಟಿಕೆಗಳನ್ನು ವಿತರಿಸುವುದಾಗಿ ತಿಳಿಸಿದ್ದರು.
ಆರೋಪಿಗಳು ಆಟಿಕೆಯ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಬಾಲಕನನ್ನು ಥಳಿಸಿ, ಬಲವಂತವಾಗಿ ಬಟ್ಟೆ ಬಿಚ್ಚಿಸಿ, ಬಳಿಕ ಧಾರ್ಮಿಕ ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಲಾಯಿತು.
ಮತ್ತಷ್ಟು ಓದಿ: ಕಳ್ಳತನ ಆರೋಪ, ಸಾರಿಗೆ ಸಂಸ್ಥೆಯ ಸಿಬ್ಬಂದಿಯನ್ನು ಕಂಬಕ್ಕೆ ಕಟ್ಟಿಹಾಕಿ ಉಸಿರು ನಿಲ್ಲುವವರೆಗೆ ಥಳಿಸಿ, ಆಸ್ಪತ್ರೆಯ ಹೊರಗೆ ಎಸೆದ ಪಾಪಿಗಳು
ಆರೋಪಿ ಹಾಗೂ ಸಂತ್ರಸ್ತ ಇಬ್ಬರೂ ಅಪ್ರಾಪ್ತರಾಗಿದ್ದು, ಇಬ್ಬರೂ ಪರಿಸ್ಪರ ಪರಿಚಯವಿದ್ದಾರೆ, ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:35 am, Fri, 14 April 23