ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಸುಮಾರು 18 ಸಾವಿರ ಅಡಿ ಎತ್ತರದಲ್ಲಿ ಹಿಮನದಿ ಸಮೀಪ ಸಿಲುಕಿ, ಸಂಕಷ್ಟಕ್ಕೀಡಾಗಿದ್ದ 12 ಮಂದಿ ಚಾರಣಿಗರನ್ನು ಐಟಿಬಿಪಿ, ಭಾರತೀಯ ಸೇನೆ ಮತ್ತು ನಾಗರಿಕ ಆಡಳಿತ ರಕ್ಷಣಾ ಪಡೆಗಳು ಜಂಟಿಯಾಗಿ ರಕ್ಷಿಸಿದ್ದಾರೆ. ಹಾಗೇ, ಎರಡು ಮೃತದೇಹಗಳೂ ಕೂಡ ಸಿಕ್ಕಿವೆ ಎನ್ನಲಾಗಿದೆ. ಇವರೆಲ್ಲ ಪಶ್ಚಿಮಬಂಗಾಳದವರಾಗಿದ್ದಾರೆ.
ಒಟ್ಟು 14 ಚಾರಣಿಗರು, 11 ಹಮಾಲರು ಖಮೇಂಗರ್ ಹಿಮನದಿಬಳಿ ಸಿಲುಕಿಕೊಂಡಿದ್ದರು. ಇವರೆಲ್ಲ ಸೆಪ್ಟೆಂಬರ್ 15ರಿಂದ ಚಾರಣ ಪ್ರಾರಂಭ ಮಾಡಿದವರು. ಅಂತೂ ಹೇಗೋ ಇಬ್ಬರು ಅಲ್ಲಿಂದ ಪಾರಾಗಿ ಕಾಜಾ ಹಳ್ಳಿಗೆ ಬಂದು, ಅಲ್ಲಿನ ಸಬ್ ಡಿವಿಷನ್ನಲ್ಲಿರುವ ಅಧಿಕಾರಿಗಳ ಬಳಿ ವಿಷಯ ತಿಳಿಸಿದರು. ಇಬ್ಬರು ಮೃತಪಟ್ಟಿದ್ದಾಗಿಯೂ ಹೇಳಿದ್ದಾರೆ. ಕೂಡಲೇ ಕಾರ್ಯಪ್ರವೃತ್ತವಾದ 32 ಜನರ ರಕ್ಷಣಾ ತಂಡ ಮಂಗಳವಾರ ಮುಂಜಾನೆ 3ಗಂಟೆಗೆ ಕಾಜಾ ಗ್ರಾಮದಿಂದ ಹೊರಟರು. ಚಾರಣಿಗರು ಗುಂಪು ಸಿಲುಕಿದ್ದ ಮನಾಲಿ-ಖಾಮಿಂಗರ್ ಪಾಸ್ಗೆ ತೆರಳಿ, ಅವರನ್ನು ರಕ್ಷಿಸಿದ್ದಾರೆ. ಎರಡು ಮೃತದೇಹಗಳನ್ನು ವಾಪಸ್ ತರುವ ಕಾರ್ಯದಲ್ಲಿ ರಕ್ಷಣಾ ತಂಡಗಳು ತೊಡಗಿಕೊಂಡಿವೆ. ಇನ್ನು ಇಂದು ಸಂಜೆಯೊಳಗೆ 12 ಜನ ಚಾರಣಿಗರು ವಾಪಸ್ ಬರುವ ಸಾಧ್ಯತೆ ಇದೆ.
ಮೃತರನ್ನು ಸಂದೀಪ್ ಕುಮಾರ್ ಠಾಕುರ್ತಾ (48) ಮತ್ತು ಭಾಸ್ಕರ್ದೇಬ್ ಮುಖೋಪಾಧ್ಯಾಯ (61) ಎಂದು ಗುರುತಿಸಲಾಗಿದೆ. ಖಾಮಿಂಗರ್ ಪಾಸ್ನ್ನು ಹತ್ತುವಾಗ ಇಬ್ಬರೂ ಮೃತಪಟ್ಟಿದ್ದಾರೆ. ಪರ್ವತಾರೋಹಣ ಮಾಡುತ್ತಿದ್ದಗಾಲೇ ತೀವ್ರ ಅಸ್ವಸ್ಥರಾಗಿ ಸತ್ತಿದ್ದಾರೆ. ಸೆಪ್ಟೆಂಬರ್ 25 ರಂದೇ ಮೃತಪಟ್ಟಿದ್ದು, ಅದಾಗಲೇ ಮೂರು ದಿನ ಕಳೆದು ಹೋಗಿದೆ. ಅದನ್ನು ವಾಪಸ್ ತರುವುದು ಸುಲಭವಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ವಿದ್ಯುತ್ ಬಿಲ್ ಕಡಿಮೆ ಮಾಡುವುದು ಹೇಗೆ? ಕರೆಂಟ್ ಖರ್ಚು ಉಳಿಸಲು ಏನೆಲ್ಲಾ ಮಾಡಬಹುದು? ಇಲ್ಲಿದೆ ವಿವರ
Financial Changes: ಅಕ್ಟೋಬರ್ 1ರಿಂದ ಅನ್ವಯ ಆಗುವಂಥ 5 ಪ್ರಮುಖ ಬದಲಾವಣೆಗಳಿವು
(14 trekkers who stranded near a glacier on the Manali in Himachal Pradesh Rescued)