ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸಿಧು ರಾಜೀನಾಮೆಗೆ ಕಾರಣವೇನು?: ಪಂಜಾಬ್ ರಾಜಕೀಯದಲ್ಲಿನ ಪ್ರಮುಖ ಬೆಳವಣಿಗೆಗಳು ಇಲ್ಲಿವೆ

Punjab Politics ಪಂಜಾಬ್ ಸಚಿವ ಸಂಪುಟಕ್ಕೆ ರಾಣಾ ಗುರ್ಜಿತ್ ಸಿಂಗ್ ಮರಳಿ ಬಂದಿದ್ದರಿಂದ ಸಿಧು ನಿರಾಶೆಗೊಂಡಿದ್ದರು. ಹಲವಾರು ಕಾಂಗ್ರೆಸ್ ನಾಯಕರು ಸಿಂಗ್ ಅವರನ್ನು ಕೈಬಿಡುವಂತೆ ಹೈಕಮಾಂಡ್‌ಗೆ ಪತ್ರ ಬರೆದಿದ್ದರಿಂದ ಕಪುರ್ತಲಾ ಶಾಸಕ ಗುರ್ಜಿತ್ ಸಿಂಗ್ ರಾಣಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕೆಲವು ವಿವಾದಗಳು ಇದ್ದವು.

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸಿಧು ರಾಜೀನಾಮೆಗೆ ಕಾರಣವೇನು?: ಪಂಜಾಬ್ ರಾಜಕೀಯದಲ್ಲಿನ ಪ್ರಮುಖ ಬೆಳವಣಿಗೆಗಳು ಇಲ್ಲಿವೆ
ನವಜೋತ್ ಸಿಂಗ್ ಸಿಧು- ಅಮರಿಂದರ್ ಸಿಂಗ್
TV9kannada Web Team

| Edited By: Rashmi Kallakatta

Sep 28, 2021 | 5:38 PM


 ಪಂಜಾಬ್  ರಾಜ್ಯದಲ್ಲಿ ಹೊಸದಾಗಿ ನೇಮಕಗೊಂಡ ಕಾಂಗ್ರೆಸ್ ಮುಖ್ಯಸ್ಥರಾಗಿದ್ದ ನವಜೋತ್ ಸಿಂಗ್ ಸಿಧು (Navjot Singh Sindhu) ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಪಂಜಾಬ್ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಮುಂದುವರಿದಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ (Captain Amarinder Singh)ಪಂಜಾಬ್​​ನ ಮಾಜಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಕಾಂಗ್ರೆಸ್ ಹೈಕಮಾಂಡ್ ದಲಿತ ಸಮುದಾಯಕ್ಕೆ ಸೇರಿದ ಚರಣ್​​ಜಿತ್ ಸಿಂಗ್ ಚನ್ನಿ (Charanjit Singh Channi) ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು. ರಾಜ್ಯ ರಾಜಕೀಯದಲ್ಲಿ ತಿಕ್ಕಾಟಗಳು ಸದ್ಯ ಮುಗೀತು ಎನ್ನುವಷ್ಟರಲ್ಲಿ ಅಮರಿಂದರ್ ಸಿಂಗ್ ದೆಹಲಿ ಭೇಟಿ ಮತ್ತಷ್ಟು ಊಹಾಪೋಹಗಳನ್ನು ಹುಟ್ಟುಹಾಕಿತು. ಅಮರಿಂದರ್ ಸಿಂಗ್ ದೆಹಲಿಯಲ್ಲಿರುವ ಈ ಹೊತ್ತಲ್ಲೇ ನವಜೋತ್ ಸಿಂಗ್ ಪಂಜಾಬ್ ಪ್ರದೇಶ್ ಕಾಂಗ್ರೆಸ್ ಸಮಿತಿ (Punjab PCC) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪಂಜಾಬ್ ರಾಜ್ಯ ರಾಜಕೀಯದಲ್ಲಿನ ಪ್ರಮುಖ ಬೆಳವಣಿಗೆಗಳು
1. ಅಮರಿಂದರ್ ಅವರ ದೆಹಲಿ ಪ್ರವಾಸ:  ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಎರಡು ದಿನಗಳ ಪ್ರವಾಸ ನಿಮಿತ್ತ ದೆಹಲಿಯದ್ದು ಅವರು ಬಿಜೆಪಿಯ ಹಿರಿಯ ನಾಯಕರನ್ನು ಭೇಟಿಯಾಗಬಹುದು ಎಂಬ ಊಹೆಗಳಿವೆ. ಅವರ ಮಾಧ್ಯಮ ಸಲಹೆಗಾರ ರವೀಣ್ ತುಕ್ರಾಲ್ ಇದು ನಿಜಕ್ಕೂ ಊಹಾಪೋಹ ಎಂದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರೊಂದಿಗಿನ ಭೇಟಿಯು ಒಂದೊಮ್ಮೆ ನಡೆಯುತ್ತದೆ. ಆದರೆ ಅದು ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಬೆಳವಣಿಗೆಗಳ ಪರಿಚಯವಿರುವ ಬಿಜೆಪಿ ಕಾರ್ಯದರ್ಶಿಯೊಬ್ಬರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

2. ಸಿಧು ರಾಜೀನಾಮೆ: ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪ್ರಮುಖ ವಿರೋಧಿಗಳಲ್ಲಿ ಒಬ್ಬರಾಗಿದ್ದ ಮತ್ತು ಪಂಜಾಬ್ ಪಕ್ಷದ ಮುಖ್ಯಸ್ಥರಾಗಿಯೂ ನಿಯುಕ್ತರಾಗಿದ್ದ ನವಜೋತ್ ಸಿಂಗ್ ಸಿಧು ಅವರ ನೇಮಕದ ಎರಡು ತಿಂಗಳ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಿಧು ಅವರನ್ನು ಪಂಜಾಬ್‌ನ ಮುಖ್ಯಮಂತ್ರಿಯನ್ನಾಗಿ ಮಾಡದ ಕಾರಣ ಅತೃಪ್ತಿ ಹೊಂದಿದ್ದರು ಎಂದು ಪಂಜಾಬ್ ರಾಜಕೀಯ ಬೆಳವಣಿಗೆ ಬಗ್ಗೆ ತಿಳಿದಿರುವ ಮೂಲಗಳು ಹೇಳಿವೆ. ಸಿಧು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದು ‘ಪಂಜಾಬ್‌ನ ಭವಿಷ್ಯ ಮತ್ತು ಕಲ್ಯಾಣದ ಬಗ್ಗೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

3. ರಾಣಾ ಗುರ್ಜಿತ್ ಸಿಂಗ್​​ಗೆ ಸ್ಥಾನ: ಪಂಜಾಬ್ ಸಚಿವ ಸಂಪುಟಕ್ಕೆ ರಾಣಾ ಗುರ್ಜಿತ್ ಸಿಂಗ್ ಮರಳಿ ಬಂದಿದ್ದರಿಂದ ಸಿಧು ನಿರಾಶೆಗೊಂಡಿದ್ದರು. ಹಲವಾರು ಕಾಂಗ್ರೆಸ್ ನಾಯಕರು ಸಿಂಗ್ ಅವರನ್ನು ಕೈಬಿಡುವಂತೆ ಹೈಕಮಾಂಡ್‌ಗೆ ಪತ್ರ ಬರೆದಿದ್ದರಿಂದ ಕಪುರ್ತಲಾ ಶಾಸಕ ಗುರ್ಜಿತ್ ಸಿಂಗ್ ರಾಣಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕೆಲವು ವಿವಾದಗಳು ಇದ್ದವು. ರಾಣಾ ಗುರ್ಜಿತ್ ಸಿಂಗ್ ಕಪುರ್ತಲಾವನ್ನು ಪ್ರತಿನಿಧಿಸುತ್ತಿದ್ದರು ಮತ್ತು ಅಮರಿಂದರ್ ಸರ್ಕಾರದಲ್ಲಿ ಮಂತ್ರಿಯಾಗಿದ್ದರು ಆದರೆ ಮರಳು ಗಣಿಗಾರಿಕೆಯ ಹರಾಜಿಗೆ ಸಂಬಂಧಿಸಿ ಆರೋಪದ ಮೇಲೆ 2018 ರಲ್ಲಿ 10 ತಿಂಗಳ ನಂತರ ಗುರ್ಜಿತ್ ಸಿಂಗ್ ರಾಜೀನಾಮೆ ನೀಡಿದ್ದರು.

4. ಖಾತೆ ಹಂಚಿಕೆ ದಿನವೇ ಬಿಕ್ಕಟ್ಟು: ಪಂಜಾಬ್‌ನ ಹೊಸ ಮುಖ್ಯಮಂತ್ರಿ ಚರಣ್​​ಜಿತ್ ಸಿಂಗ್ ಚನ್ನಿ ಅವರು ಮಂಗಳವಾರ ಹೊಸದಾಗಿ ಸೇರ್ಪಡೆಗೊಂಡ ಮಂತ್ರಿಗಳಿಗೆ ಖಾತೆಗಳನ್ನು ನಿಯೋಜಿಸಿದರು. ಈ ಹೊತ್ತಲ್ಲೇ ಸಿಧು ಮತ್ತು ಅಮರಿಂದರ್ ಅವರ ನಡೆ ಮುಂದಿನ ವರ್ಷ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ಗೆ ಅಹಿತಕರವಾಗುವ ಸಾಧ್ಯತೆ ಇದೆ.

5. ಅಮರಿಂದರ್ vs ಸಿಧು: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ದೆಹಲಿಗೆ ತೆರಳುವ ಮೊದಲು ಅವರ ಸಿಧು ವಿರುದ್ಧ ಟ್ವೀಟ್ ಪ್ರಹಾರ ಮಾಡಿದ್ದಾರೆ. ಸಿಧು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಅಮರಿಂದರ್ ಸಿಂಗ್, ಪಂಜಾಬ್ ಮಾಜಿ ಕಾಂಗ್ರೆಸ್ ಮುಖ್ಯಸ್ಥರ ‘ಅಸ್ಥಿರ’ ಸ್ವಭಾವದ ಬಗ್ಗೆ ಅವರ ಟೀಕೆಗಳು ಮಾನ್ಯವಾಗಿವೆ ಎಂದು ಹೇಳಿದರು. “ನಾನು ನಿಮಗೆ ಮೊದಲೇ ಹೇಳಿದ್ದೆ. ಅವರು ಸ್ಥಿರ ವ್ಯಕ್ತಿ ಅಲ್ಲ ಮತ್ತು ಗಡಿ ರಾಜ್ಯ ಪಂಜಾಬ್‌ಗೆ ಸರಿಹೊಂದುವುದಿಲ್ಲ” ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Navjot Singh Sidhu ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ

ಇದನ್ನೂ ಓದಿ: ನವಜೋತ್ ಸಿಂಗ್ ಸಿಧು ಸ್ಥಿರ ವ್ಯಕ್ತಿ ಅಲ್ಲ ಎಂದು ನಾನು ಮೊದಲೇ ಹೇಳಿದ್ದೆ: ಕ್ಯಾಪ್ಟನ್ ಅಮರಿಂದರ್ ಸಿಂಗ್

(Turmoil in Punjab Congress continued after Navjot Singh Sindhu resigns Punjab political developments)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada