35 ವಿಶೇಷ ತಳಿಯ ಬೆಳೆಗಳ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ; ಅಪೌಷ್ಟಿಕತೆ, ಹವಾಮಾನ ಬದಲಾವಣೆ ಸವಾಲು ಎದುರಿಸಲು ನೂತನ ಯತ್ನ

PM Modi: ಜನರಲ್ಲಿ ಅಪೌಷ್ಟಿಕತೆ ಬಗ್ಗೆ ತಿಳಿವಳಿಕೆ ಮೂಡಿಸಲು ಮುಂದಾಗಿ ಎಂದು ಪ್ರಧಾನಿ ಮೋದಿ ಒಲಿಂಪಿಕ್ಸ್​ ಚಾಂಪಿಯನ್​ಗಳಲ್ಲಿ ಮನವಿ ಮಾಡಿದ್ದಾರೆ. ಇದಕ್ಕಾಗಿ ಪ್ರತಿಯೊಬ್ಬರೂ 75 ಶಾಲೆಗಳನ್ನು ದತ್ತು ಪಡೆಯುವಂತೆ ಹೇಳಿದ್ದಾರೆ.

35 ವಿಶೇಷ ತಳಿಯ ಬೆಳೆಗಳ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ; ಅಪೌಷ್ಟಿಕತೆ, ಹವಾಮಾನ ಬದಲಾವಣೆ ಸವಾಲು ಎದುರಿಸಲು ನೂತನ ಯತ್ನ
ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: Lakshmi Hegde

Updated on:Sep 28, 2021 | 4:50 PM

ರೈತರು ಕೃಷಿಗೆ ದೊಡ್ಡ ತೊಡಕಾಗಿರುವ ಎರಡು ಪ್ರಮುಖ ಸವಾಲುಗಳಾದ ಹವಾಮಾನ ಬದಲಾವಣೆ ಮತ್ತು ಅಪೌಷ್ಟಿಕತೆ.  ರೈತರು ಈ ಎರಡೂ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ಬೇಸಾಯ ನಡೆಸಲು ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಭಾರತೀಯ ಕೃಷಿ ಸಂಶೋಧನಾ  ಮಂಡಳಿ (ICAR) ಅಭಿವೃದ್ಧಿಪಡಿಸಿರುವ, ವಿಶೇಷ ಗುಣಲಕ್ಷಣಗಳುಳ್ಳ 35 ತಳಿಯ ಬೆಳೆಗಳನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು.  ಬಳಿಕ ಮಾತನಾಡಿ, ಹವಾಮಾನ ವೈಪರೀತ್ಯದಿಂದ ಬೆಳೆಗಳ ರಕ್ಷಣೆ ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ರೈತರಲ್ಲಿ ಅರಿವು ಮೂಡಿಸುವಂತೆ  ಶಿಕ್ಷಣ ತಜ್ಞರು, ಕೃಷಿ ವಿಜ್ಞಾನಿಗಳು ಮತ್ತು ಎನ್​​ಜಿಒಗಳಿಗೆ ಕರೆ ನೀಡಿದರು. 

ವಿಶೇಷ ಗುಣಲಕ್ಷಣಗಳನ್ನು ಹೊಂದಿರುವ ಒಟ್ಟು 35 ಬೆಳೆ ತಳಿಗಳನ್ನು ವಿಡಿಯೋ ಕಾನ್ಫರೆನ್ಸ್​ ಮೂಲಕ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ, ಇಡೀ ಪರಿಸರ ವ್ಯವಸ್ಥೆ ಮೇಲೆ ಹವಾಮಾನ ಬದಲಾಣೆ ತೀವ್ರವಾಗಿ ಪರಿಣಾಮ ಬೀರುತ್ತಿದೆ. ಅದರಲ್ಲಿ ಕೃಷಿಕ್ಷೇತ್ರವೂ ಹೊರತಾಗಿಲ್ಲ. ಆ ಸವಾಲನ್ನು ಎದುರಿಸಿ, ಕೃಷಿ ಸುಸೂತ್ರವಾಗಿ ನಡೆಯಬೇಕು. ಹಾಗಾಗಬೇಕು ಎಂದರೆ ರೈತರಲ್ಲಿ ಅರಿವು ಮೂಡಬೇಕು. ಇದೀಗ ಲೋಕಾರ್ಪಣೆಗೊಂಡ ಹೊಸ ಬೆಳೆಗಳ ಬಗ್ಗೆ ರೈತರಲ್ಲಿ ತಿಳಿವಳಿಕೆ ಮೂಡಿಸಲು ಅಭಿಯಾನಗಳು ನಡೆಯಬೇಕು. ಶಿಕ್ಷಣ ತಜ್ಞರು, ಕೃಷಿ ವಿಜ್ಞಾನಿಗಳು ಮುಂದಾಗಿ ಅದನ್ನು ಮಾಡಬೇಕು. ಬಲವರ್ಧಿತ ಬೀಜಗಳ ಬಗ್ಗೆ ಅವರಿಗೆ ಸರಿಯಾಗಿ ಮಾಹಿತಿ ನೀಡಬೇಕು. ನಾವೆಲ್ಲರೂ ಒಂದಾಗಿ ಈ ಪ್ರಯತ್ನದಲ್ಲಿ ತೊಡಗಿಕೊಂಡಾಗ ಮಾತ್ರ ಹವಾಮಾನ ವೈಪರೀತ್ಯದಿಂದ  ನಮ್ಮ ದೇಶದ ಕೃಷಿ ಕ್ಷೇತ್ರವನ್ನು ರಕ್ಷಿಸಬಹುದು ಎಂದು ಹೇಳಿದರು. ಈ ಮೂಲಕ ರೈತರು ಸಮೃದ್ಧ ಜೀವನ ನಡೆಸುವ ಜತೆಗೆ ದೇಶದ ಆರೋಗ್ಯ ಭದ್ರತೆಗೂ ಪೂರಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಒಲಿಂಪಿಕ್ಸ್​ ಚಾಂಪಿಯನ್​​ಗಳಲ್ಲಿ ಒಂದು ಮನವಿ ದೇಶಕ್ಕೆ ಹವಾಮಾನ ವೈಪರೀತ್ಯದೊಂದಿಗೆ ಎದುರಾಗಿರುವ ಇನ್ನೊಂದು ಬಹುದೊಡ್ಡ ಸವಾಲು ಅಪೌಷ್ಟಿಕತೆ. ಈ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಿ, ಅಪೌಷ್ಟಿಕತೆ ಕೊನೆಗೊಳಿಸಲು ಸಹಾಯ ಮಾಡಿ ಎಂದು ಪ್ರಧಾನಿ ಮೋದಿ ಒಲಿಂಪಿಕ್ಸ್​ ಚಾಂಪಿಯನ್​ಗಳಲ್ಲಿ ಮನವಿ ಮಾಡಿದ್ದಾರೆ. ಪ್ರತಿ ಅಥ್ಲೀಟ್​​ ಬರುವ ವರ್ಷಗಳಲ್ಲಿ 75 ಶಾಲೆಗಳನ್ನು ದತ್ತು ತೆಗೆದುಕೊಳ್ಳಬೇಕು. ಅವರಿಗೆ ಪೌಷ್ಟಿಕಾಂಶದ ಮಹತ್ವ ತಿಳಿಸಬೇಕು. ಕ್ರೀಡೆ, ದೈಹಿಕ ವ್ಯಾಯಾಮಗಳ ಬಗ್ಗೆಯೂ ಅವರಲ್ಲಿ ಅರಿವು ಮೂಡಿಸಬೇಕು. ಅಪೌಷ್ಟಿಕತೆಯಿಂದ ಎದುರಾಗುವ ಆರೋಗ್ಯ ಸಮಸ್ಯೆಯ ತಿಳಿವಳಿಕೆಯನ್ನು ಮೂಡಿಸಬೇಕು ಎಂದು ಮೋದಿ ಹೇಳಿದ್ದಾರೆ.

ಹವಾಮಾನ ಬದಲಾವಣೆಯಿಂದ ಹೊಸಹೊಸ ಕಾಯಿಲೆಗಳು ಉದ್ಭವಿಸುತ್ತಿವೆ. ಸಾಂಕ್ರಾಮಿಕ ರೋಗಗಳಿಗೂ ಇದೇ ಮುಖ್ಯ ಕಾರಣ. ಬದಲಾಗುತ್ತಿರುವ ಹವಾಮಾನ ಮನುಕುಲದ ಮತ್ತು ಇತರ ಜೀವಿಗಳ ಆರೋಗ್ಯಕ್ಕೆ ಬಹುದೊಡ್ಡ ಅಪಾಯ ತಂದೊಡ್ಡಿದೆ.  ಈ ಬಗ್ಗೆ ನಿರಂತರವಾದ ಸಂಶೋಧನೆ ಅಗತ್ಯವಿದ್ದು, ವಿಜ್ಞಾನ, ಸರ್ಕಾರಗಳು ಮತ್ತು ಸಮಾಜ ಒಟ್ಟಾಗಿ ಕೆಲಸ ಮಾಡಬೇಕು. ಕೃಷಿ ಕ್ಷೇತ್ರಕ್ಕೆ ಎದುರಾಗಿರುವ ಸವಾಲುಗಳನ್ನು ಎದುರಿಸಲು ರೈತ ಮತ್ತು ವಿಜ್ಞಾನಿಗಳ ಸಮುದಾಯ ಒಗ್ಗಟ್ಟಾಗಬೇಕು ಎಂದು ತಿಳಿಸಿದರು.

ಏನಿದು 35 ವಿಶೇಷ ತಳಿಗಳ ಬೆಳೆಗಳು ವಿಶೇಷ ಗುಣಲಕ್ಷಣಗಳಿರುವ 35 ತಳಿಗಳ ಬೆಳೆಗಳ ಬಗ್ಗೆ ಪ್ರಧಾನಮಂತ್ರಿ ಕಚೇರಿ ಮಾಹಿತಿ ನೀಡಿದೆ. ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಹೆಚ್ಚಿನ ಪೋಷಕಾಂಶಹೊಂದಿರುವ ಈ 35 ತಳಿಗಳನ್ನು 2021ರಲ್ಲಿ ಅಭಿವೃದ್ಧಿಪಡಿಸಲಾಗಿದೆ. ಬರಪರಿಸ್ಥಿತಿಯಲ್ಲೂ ಬೆಳೆಯಬಹುದಾದಂತ ಕಡಲೆ, ಮುದುಡುವ ಮತ್ತು ಬರಡು ನಿರೋಧಕ ಬಟಾಣಿ, ಬೇಗನೇ ಕೊಯ್ಲಿಗೆ ಬರುವ ಸೊಯಾಬಿನ್​, ಕಾಯಿಲೆ ನಿರೋಧಕ ಗುಣಹೊಂದಿರುವ ಅಕ್ಕಿ, ಜೈವಿಕ ಬಲವರ್ಧಿತ ತಳಿಗಳ ಗೋಧಿ, ಮುತ್ತು ರಾಗಿ, ಜೋಳ, ಕಡಲೆ, ನವಣೆ ಅಕ್ಕಿ, ಹುರುಳಿ ಇತರ ತಳಿಗಳನ್ನು ಒಳಗೊಂಡಿದೆ.  ಹಾಗೇ, ಇದನ್ನು ಅಪೌಷ್ಟಿಕತೆ ನಿವಾರಣೆಯನ್ನೂ ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಿದ್ದಾಗಿ ಪಿಎಂಒ ಮಾಹಿತಿ ನೀಡಿದೆ.  ಇಂದಿನ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್​ ಕೂಡ ಪಾಲ್ಗೊಂಡಿದ್ದರು.

ಇದನ್ನೂ ಓದಿ:9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಜೈಲು ಶಿಕ್ಷೆಗೊಳಗಾಗಿದ್ದ ಅಪರಾಧಿ ಬಂಧನ

ಟ್ರಾಫಿಕ್ ಜಾಮ್​ನಿಂದ ಸಿಗಲಿದೆ ಇನ್ನು ಮುಕ್ತಿ, ಕೆಲವೇ ದಿನಗಳಲ್ಲಿ ಲಾಂಚ್ ಆಗುತ್ತಿದೆ ಹೈಬ್ರಿಡ್ ಹಾರುವ ಕಾರು!

(PM Modi launches 35 crop varieties through Video Conference)

Published On - 4:25 pm, Tue, 28 September 21

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?