9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಜೈಲು ಶಿಕ್ಷೆಗೊಳಗಾಗಿದ್ದ ಅಪರಾಧಿ ಬಂಧನ
2012ರಲ್ಲಿ ಅಪಘಾತ ಪ್ರಕರಣವೊಂದರಲ್ಲಿ ಆಂಥೋನಿ ರಾಜ್‌ಗೆ ಕೋರ್ಟ್ 10 ತಿಂಗಳು 15 ದಿನ ಜೈಲು ಶಿಕ್ಷೆ ಪ್ರಕಟಿಸಿತ್ತು.
ಬೆಂಗಳೂರು: 9 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಅಪರಾಧಿಯೋರ್ವನನ್ನು ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಅಪರಾಧಿ ಆಂಥೋನಿ ರಾಜ್(44) ಬಂಧಿತ ಅಪರಾಧಿ. 2012ರಲ್ಲಿ ಅಪಘಾತ ಪ್ರಕರಣವೊಂದರಲ್ಲಿ ಆಂಥೋನಿ ರಾಜ್‌ಗೆ ಕೋರ್ಟ್ 10 ತಿಂಗಳು 15 ದಿನ ಜೈಲು ಶಿಕ್ಷೆ ಪ್ರಕಟಿಸಿತ್ತು. ಆದರೆ ಶಿಕ್ಷೆ ಪ್ರಕಟವಾದ ಬಳಿಕ ಆಂಥೋನಿ ರಾಜ್ ತಲೆಮರೆಸಿಕೊಂಡಿದ್ದ. ಇದೀಗ ಪೊಲೀಸರಿಂದ ಬಂಧನಕ್ಕೊಳಪಟ್ಟ ನಂತರ ಆಂಥೋನಿ ರಾಜ್‌ಗೆ ಮತ್ತೆ ದಂಡ ಮತ್ತು ಜೈಲುಶಿಕ್ಷೆಯನ್ನು ಕೋರ್ಟ್ ವಿಧಿಸಿದೆ.
2010ರಲ್ಲಿ ಟ್ರಾಕ್ಟರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಅಂಥೋನಿ ಕೌಸಲ್ ಕುಮಾರ್ (8) ಎಂಬ ಮಗುವಿನ ಮೇಲೆ ಟ್ರಾಕ್ಟರ್ ಹರಿಸಿದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ. ಈ ಸಂಬಂಧ ಐಪಿಸಿ ಸೆಕ್ಷನ್ 279, 304ಎ ಅಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿ ಆಂಥೋನಿ ರಾಜ್ 2012ರಲ್ಲಿ ಕೋರ್ಟ್ 10 ತಿಂಗಳು 15 ದಿನಗಳ ಕಾಲ ಜೈಲು ಶಿಕ್ಷೆ ಪ್ರಕಟಿಸಿತ್ತು. ಆದರೆ ಆರೋಪಿ ಅಂಥೋನಿ ರಾಜ್ ತಲೆಮರೆಸಿಕೊಂಡಿದ್ದ. 9 ವರ್ಷಗಳಿಂದ ಪೊಲೀಸರಿಗೆ ಸಿಗದೆ ಓಡಾಡುತ್ತಿದ್ದ. ಇದೀಗ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಆಂಥೋನಿ ರಾಜ್ನನ್ನು ಬಂಧಿಸಿದ್ದಾರೆ. ಅತಿಯಾಗಿ ಮದ್ಯಪಾನ ಮಾಡ್ತಿದ್ದ ಅಂಥೋನಿ ರಿಹ್ಯಾಬಿಲಿಟೇಷನ್ ಸೆಂಟರ್‌ನಲ್ಲಿದ್ದ. ಕೊನೆಗೂ ಸೋಮನಹಳ್ಳಿ ಸೆಂಟ್ ಮದರ್ ತೆರೆಸ್ ರಿಹಾಬ್ ಸೆಂಟರ್ನಲ್ಲಿ ಇಷ್ಟು ಕಾಲ ಆಂಥೋನಿ ವಾಸವಿದ್ದ. ಇದನ್ನು ಅರಿತ ಪೊಲೀಸರು ಪೊಲೀಸ್ ಕಾನ್ಸ್ಟೇಬಲ್ ಓರ್ವರನ್ನು ರಿಹ್ಯಾಬಿಟೇಶನ್ ಕೇಂದ್ರಕ್ಕೆ ಸೇರಿಸುವ ನೆಪದಲ್ಲಿ ಆಂಥೋನಿ ರಾಜ್ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:
ಮತ್ತೆ ಸರ್ಕಾರದ ಅಂಗಳಕ್ಕೆ ಬಾಬಾಬುಡನ್ಗಿರಿ ದತ್ತಪೀಠ ಪೂಜಾ ವಿಧಾನ ವಿಚಾರ
ಲ್ಯಾಂಡ್ಸ್ಯಾಟ್ 9 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ನಾಸಾ; ಏನಿದರ ವಿಶೇಷತೆ?
(Bengaluru Police arrest convicted felon who has been jailed for 9 years)