ಲ್ಯಾಂಡ್ಸ್ಯಾಟ್ 9 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ನಾಸಾ; ಏನಿದರ ವಿಶೇಷತೆ?
NASA: 2013ರ ಫೆಬ್ರವರಿಯಲ್ಲಿ ಲ್ಯಾಂಡ್ಸೆಟ್ 8ಉಪಗ್ರಹವನ್ನು ನಾಸಾ ಉಡಾವಣೆ ಮಾಡಿತ್ತು. ಇದೀಗ ಉಡಾವಣೆಗೊಂಡಿರುವ ಲ್ಯಾಂಡ್ಸ್ಯಾಟ್ 9 ಪ್ರತಿ 8ದಿನಗಳಿಗೆ ಒಮ್ಮೆ ಅದನ್ನು ಸೇರಿಕೊಳ್ಳಲಿದೆ.
ಯುಎಸ್ನ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ನಿನ್ನೆ (ಸೆ.27) ಪ್ರಬಲ ಭೂ ವೀಕ್ಷಕ ಉಪಗ್ರಹ ಲ್ಯಾಂಡ್ಸ್ಯಾಟ್9 (Landsat 9) ಮತ್ತು ಅದರೊಂದಿಗೆ ನಾಲ್ಕು ಸಣ್ಣ ಉಪಗ್ರಹಗಳನ್ನು ಕ್ಯಾಲಿಫೋರ್ನಿಯಾದಿಂದ ಕಕ್ಷೆಗೆ ಉಡಾವಣೆ ಮಾಡಿದೆ. ನಾಸಾ ಮತ್ತು ಯುಎಸ್ನ ಜಿಯೋಲಾಜಿಕಲ್ ಸರ್ವೇ (USGS)ಯ ಜಂಟಿ ಮಿಷನ್ ಆಗಿರುವ ಈ ಲ್ಯಾಂಡ್ಸ್ಯಾಟ್ ಭೂಮಿಯ ಮೇಲಿನ ನೆಲ ಪ್ರದೇಶ ಮತ್ತು ಕರಾವಳಿ ತೀರಗಳ ವೀಕ್ಷಕ ಆಗಲಿದೆ. ಅಂದಹಾಗೆ ಲ್ಯಾಂಡ್ಸೆಟ್ ಸರಣಿಯ ಮೊದಲ ಉಪಗ್ರಹ ಉಡಾವಣೆ ಆಗಿದ್ದು, 1972ರಲ್ಲಿ. ಇದೀಗ ಲ್ಯಾಂಡ್ಸ್ಯಾಟ್ 9 ಉಡಾವಣೆಯಾಗಿದೆ.
ಸೋಮವಾರ ಕ್ಯಾಲಿಫೋರ್ನಿಯಾದ ವಂಡೆನ್ಬರ್ಗ್ ಸ್ಪೇಸ್ ಫೋರ್ಸ್ನಿಂದ ಅಟ್ಲಾಸ್ ವಿ ರಾಕೆಟ್ (Atlas V rocket) ಮೂಲಕ ಸೋಮವಾರ ಮಧ್ಯಾಹ್ನ 2. 12ಕ್ಕೆ ಉಡಾವಣೆಗೊಂಡ ಲ್ಯಾಂಡ್ ಸ್ಯಾಟ್ 9 ಸುಮಾರು 1 ತಾಸುಗಳ ಬಳಿಕ ವಾಹಕ ರಾಕೆಟ್ನಿಂದ ಬೇರ್ಪಟ್ಟಿದೆ. ಈ ಉಪಗ್ರಹ ಭೂ ಮೇಲ್ಮೈನ ವೀಕ್ಷಣೆ ಮಾಡುವ ಜತೆಗೆ ಹವಾಮಾನ ಬದಾಲವಣೆಯ ಬಗ್ಗೆ ಡಾಟಾ ಒದಗಿಸಲಿದೆ.
And… liftoff! ?
The #Landsat 9 satellite has lifted off from the Vandenberg Space Force Base in California aboard a @ULALaunch Atlas V rocket at 2:12pm ET. pic.twitter.com/O6YXhtf7kT
— NASA (@NASA) September 27, 2021
1972ರಲ್ಲಿ ಮೊದಲ ಬಾರಿಗೆ ಲ್ಯಾಂಡ್ಸ್ಯಾಟ್ ಉಡಾವಣೆಗೊಳಿಸಿದಾಗಿನಿಂದಲೂ ಅದು ಕಕ್ಷೆಯಲ್ಲಿಯೇ ಉಳಿದಿದೆ. 2013ರ ಫೆಬ್ರವರಿಯಲ್ಲಿ ಲ್ಯಾಂಡ್ಸೆಟ್ 8ಉಪಗ್ರಹವನ್ನು ನಾಸಾ ಉಡಾವಣೆ ಮಾಡಿತ್ತು. ಇದೀಗ ಉಡಾವಣೆಗೊಂಡಿರುವ ಲ್ಯಾಂಡ್ಸ್ಯಾಟ್ 9 ಪ್ರತಿ 8ದಿನಗಳಿಗೆ ಒಮ್ಮೆ ,ಲ್ಯಾಂಡ್ಸ್ಯಾಟ್ 8ನ್ನು ಸೇರಿ ಕೊಂಡು ಭೂಮಿಯ ವಿವಿಧ ಭಾಗಗಳ ಫೋಟೋ ಸಂಗ್ರಹಿಸಲಿದೆ. ಇದು ಅರಣ್ಯಗಳು, ಕೃಷಿ, ನೀರಿನ ಗುಣಮಟ್ಟ, ಹಿಮಾಚ್ಛಾದಿತ ಪ್ರದೇಶಗಳ ಮೇಲ್ವಿಚಾರಣೆಗೆ ಸಹಾಯ ಮಾಡುತ್ತದೆ ಎಂದು ನಾಸಾ ತಿಳಿಸಿದೆ.
ಇದನ್ನೂ ಓದಿ: ಮತ್ತೆ ಸರ್ಕಾರದ ಅಂಗಳಕ್ಕೆ ಬಾಬಾಬುಡನ್ಗಿರಿ ದತ್ತಪೀಠ ಪೂಜಾ ವಿಧಾನ ವಿಚಾರ
ಬೆಂಗಳೂರು: ಶಿಥಿಲಗೊಂಡ ಕಟ್ಟಡಗಳ ತೆರವಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸೂಚನೆ
(NASA launched Landsat 9 satellite from Vandenberg Space Force Base in California)