AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jazz Bike: ಜಾಜ್​ ಬೈಕ್ ಅಪ್ಲಿಕೇಶನ್​ ಮಂಗಮಾಯ; ಹಣ ಹೂಡಿದವರಿಗೆ ಪಂಗನಾಮ

ಮಕ್ಕಳ ಮಸ್ಕೂಲ್ ಮಕ್ಕಳ ಫೀಸ್ ಕಟ್ಟಲು, ಮಕ್ಕಳ ಮದುವೆ ಹೀಗೆ ಇತ್ಯಾದಿಗಳಿಗೆ ಕೂಡಿಟ್ಟ ಹಣ ಗುಳುಂ ಆಗಿರೋದು ನಿಜಕ್ಕೂ ಶಾಕಿಂಗ್ ವಿಚಾರ.

Jazz Bike: ಜಾಜ್​ ಬೈಕ್ ಅಪ್ಲಿಕೇಶನ್​ ಮಂಗಮಾಯ; ಹಣ ಹೂಡಿದವರಿಗೆ ಪಂಗನಾಮ
ಎಚ್ಚರ
TV9 Web
| Edited By: |

Updated on: Sep 28, 2021 | 9:54 AM

Share

ನಿಮ್ಮ ಮೊಬೈಲ್ನಲ್ಲಿ ಜಾಝ್ ಬೈಕ್ ಎಂಬ ಅಪ್ಲಿಕೇಷನ್ ಹಾಕಿಕೊಂಡಿದ್ದೀರಾ? ಈಗ ಆ್ಯಪ್ ಕಣ್ಮರೆಯಾಗಿದೆಯೇ ಎಂಬ ಅನುಮಾನ ಕಾಡುತ್ತಿದ್ದರೆ, ಆ ಅನುಮಾನ ನಿಜ. ಯಾಕಂದ್ರೆ ಜಾಝ್ ಬೈಕ್ ಹೆಸರಿನ ಆನ್‌ಲೈನ್ ಅಪ್ಲಿಕೇಷನ್ ಜನರ ಮಂಕುಬೂದಿ ಎರಚಿ ಪರಾರಿಯಾಗಿದೆ.

ಜಾಝ್ ಬೈಕ್ ಹೆಸರಿನ ಆನ್‌ಲೈನ್ ಅಪ್ಲಿಕೇಷನ್ ಹೆಸರಲ್ಲಿ ಸಾರ್ವಜನಿಕರಿಗೆ ಮಕ್ಮಲ್ ಟೋಪಿ ಹಾಕಲಾಗಿದೆ. ಕಳೆದೊಂದು ವಾರದಿಂದ ಜಾಝ್ ಬೈಕ್ ಆಪ್ ಓಪನ್ ಆಗ್ತಿಲ್ಲ. ಅದ್ರಲ್ಲೂ ಕೊರೊನಾ ಸಂಕಷ್ಟದಲ್ಲಿ ಸಾರ್ವಜನಿಕರಿಗೆ ವಂಚನೆ ಪ್ರಕರಣಗಳು ಹೆಚ್ಚಾಗ್ತಿದೆ. ಆನ್ಲೈನ್ ಚೈನ್‌ ಲಿಂಕ್ ಕಂಪನಿಯ ಮಹಾ ಮೋಸದಾಟಕ್ಕೆ ಮುಂದಾಗಿವೆ. ಮಕ್ಕಳ ಫೀಸು, ಮಕ್ಕಳ ಮದುವೆಗೆಂದು ಕೂಡಿಟ್ಟಿದ್ದವರ ಲಕ್ಷ ಲಕ್ಷ ಹಣವನ್ನ ಈ ಕಂಪನಿ ಗುಳುಂ ಮಾಡಿದೆ‌. ಇದೀಗ ಪೊಲೀಸ್ ಠಾಣೆ, ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಲು ನೊಂದವರು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಬರೋಬ್ಬರಿ ಎರಡು ಸಾವಿರಕ್ಕೂ ಹೆಚ್ಚು ಜನರಿಗೆ ಮೋಸ ಆಗಿದೆ. ಎರಡು ಕೋಟಿಗೂ ಹೆಚ್ಚು ಹಣ ನೀಡದೇ ವಂಚನೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬರ್ತಿದೆ. ಜಾಝ್ ಬೈಕ್ ಅಪ್ಲಿಕೇಶನ್ನಿಂದ ಮೋಸ ಹೋದ ಜಯನ್ ಎಂಬುವವರು ತಮ್ಮ ಅಳಲನ್ನು ಟಿವಿ9 ಜತೆ ತೋಡಿಕೊಂಡಿದ್ದಾರೆ.

ಜಾಝ್ ಬೈಕ್ ಹೆಸರಿನ ಆನ್ ಲೈನ್ ಚೈನ್‌ ಲಿಂಕ್ ಆ್ಯಪ್ ವಿರುದ್ದ ನೊಂದವರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ದಿನವೂ ದುಡ್ಡು ಕೊಡುತ್ತೇವೆಂದು ಭರವಸೆ ನೀಡಿ ವಂಚನೆ ಮಾಡಲಾಗಿದೆ ಎಂಬ ಆರೋಪ ಆ್ಯಪ್ ವಿರುದ್ಧ ಕೇಳಿಬಂದಿದೆ. ಮೊದಲು ಭರ್ಜರಿ ಕೊಡುಗೆ ನೀಡಿ ಜಾಜ್ ಬೈಕ್ ಕಂಪನಿ ಗ್ರಾಹಕರು ಸೆಳೆಯುವ ಪ್ರಯತ್ನಕ್ಕೆ ಮುಂದಾಗಿತ್ತು. ಇದೀಗ ತನ್ನ ಆನ್‌ಲೈನ್ ಆಪ್ ಕ್ಲೋಸ್ ಮಾಡಿದೆ ಕಂಪನಿಯ ವಿಳಾಸ ಫೇಕ್, ಕಂಪನಿಯ ಮಾಲಿಕರು ಯಾರು ಗೊತ್ತಿಲ್ಲದೆ ಹಣ ಹಾಕಿದವರ ಪರದಾಡುತ್ತಿದ್ದಾರೆ. ಐದುವರೆ ಸಾವಿರಕ್ಕೆ ಪ್ರತಿದಿನ 340 ರೂ, 31 ಸಾವಿರಕ್ಕೆ ಪ್ರತಿದಿನ 1800 ರೂ, ಲಕ್ಷಕ್ಕೆ ಪ್ರತಿದಿನ ಆರು ಸಾವಿರ ರೂ, 3 ಲಕ್ಷಕ್ಕೆ ಪ್ರತಿದಿನ 18 ಸಾವಿರ ಹಣ ಕೊಡುವುದಾಗೆ ಹೇಳಿ ಚಳ್ಳೆ ಹಣ್ಣು ತಿನ್ನಿಸಿದ್ದಾರೆ. ಈಕುರಿತು ದೂರು ನೀಡಲು ಸಹ ನೊಂದವರು ನಿರ್ಧರಿಸಿದ್ದಾರೆ.

ಮಕ್ಕಳ ಮಸ್ಕೂಲ್ ಮಕ್ಕಳ ಫೀಸ್ ಕಟ್ಟಲು, ಮಕ್ಕಳ ಮದುವೆ ಹೀಗೆ ಇತ್ಯಾದಿಗಳಿಗೆ ಕೂಡಿಟ್ಟ ಹಣ ಗುಳುಂ ಆಗಿರೋದು ನಿಜಕ್ಕೂ ಶಾಕಿಂಗ್ ವಿಚಾರ. ಆದಷ್ಟು ಬೇಗ ಪೊಲೀಸ್ ಇಲಾಖೆ ನೊಂದವರ, ಮೋಸಕ್ಕೊಳಗಾದವರ ಹಣ ವಾಪಾಸ್ ಬರುವಂತೆ ಚುರುಕಾಗಿ ಕಾರ್ಯಚರಣೆ ಮಾಡಬೇಕಿದೆ. ಈ ಲಿಂಕ್​ನಲ್ಲಿಯೂ ಜಾಝ್ ಆ್ಯಪ್​ನಿಂದ ಮೋಸಹೋದವರ ಮತ್ತು ಹಣ ಹಿಂಪಡೆಯುವ ಕೆಲವು ವಿಧಾನಗಳ ಕುರಿತು ಅರಿಯಬಹುದು. https://www.consumercomplaints.in/jazz-bike-fraud-with-money-c2993093

ವರದಿ: ಅನಿಲ್ ಕಲ್ಕೆರೆ, ಟಿವಿ 9, ಬೆಂಗಳೂರು.

ಇದನ್ನೂ ಓದಿ: 

ರಾಜ್ಯೋತ್ಸವ ಪ್ರಶಸ್ತಿಗೆ ಆನ್​ಲೈನ್​ನಲ್ಲಿ ಮೊಬೈಲ್​ ಮೂಲಕವೂ ಅರ್ಜಿ ಸಲ್ಲಿಸಲು ಇದೆ ಅವಕಾಶ 

ಮಕ್ಕಳ ಆನ್​ಲೈನ್ ತರಗತಿಗಳಿಗಾಗಿ ಉತ್ತಮ ಫೀಚರ್​ಗಳುಳ್ಳ ಸ್ಮಾರ್ಟ್ ಫೋನ್ ಕೈಗೆಟಕುವ ಬೆಲೆಯಲ್ಲಿ ಸಿಗುತ್ತಿವೆ

(Jazz Bike investment app scam found in Bengaluru customers wants to complaint police)

Follow Us
TV9 Web
TV9 Web

TV9 Kannada

Read More
ಕೆವಿಎನ್ ಹಾಗೂ ಸುಪ್ರೀತ್ ಬಗ್ಗೆ ನಿರ್ಮಾಪಕ ಉದಯ್ ಮೆಹ್ತಾ ಮಾತು
ಕೆವಿಎನ್ ಹಾಗೂ ಸುಪ್ರೀತ್ ಬಗ್ಗೆ ನಿರ್ಮಾಪಕ ಉದಯ್ ಮೆಹ್ತಾ ಮಾತು
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ