ಮಕ್ಕಳ ಆನ್ಲೈನ್ ತರಗತಿಗಳಿಗಾಗಿ ಉತ್ತಮ ಫೀಚರ್ಗಳುಳ್ಳ ಸ್ಮಾರ್ಟ್ ಫೋನ್ ಕೈಗೆಟಕುವ ಬೆಲೆಯಲ್ಲಿ ಸಿಗುತ್ತಿವೆ
ಆದರೆ, ಸಂತೋಷದ ಸಂಗತಿಯೆಂದರೆ, ರೂ. 6,000 ಕ್ಕಿಂತ ಕಡಿಮೆ ಬೆಲೆಗೆ ಉತ್ತಮ ಫೀಚರ್ ಉಳ್ಳ ಅತ್ಯುತ್ತಮ ಗುಣಮಟ್ಟದ ಸ್ಮಾರ್ಟ್ ಫೋನ್ಗಳು ಈಗಲೂ ಸಿಗುತ್ತಿವೆ.
ಕೋವಿಡ್-19 ಪಿಡುಗು ನಮ್ಮ ಬದುಕಿನ ಶೈಲಿಯನ್ನು ಬದಲಿಸಿಬಿಟ್ಟಿದೆ. ಎರಡಯ ವರ್ಷಗಳ ಹಿಂದೆ ಇದ್ದಂತೆ ಈಗಿಲ್ಲ. ನಮ್ಮ ಜೀವನ ಶೈಲಿಯಲ್ಲಿ ನೂರೆಂಟು ಬದಲಾವಣೆಗಳು. ನಮ್ಮಂತೆ ಮಕ್ಕಳ ಬದುಕಿನಲ್ಲೂ ಮಹತ್ತರ ಚೇಂಜ್ಗಳು. ಮೂರನೇ ಅಲೆ ಭೀತಿಯ್ಲಲೇ ಶಾಲೆಗಳು ಆರಂಭವಾಗಿವೆಯಾದರೂ ಬಹಳಷ್ಟು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಿಲ್ಲ. ಹಾಗಾಗಿ ಹೆಚ್ಚು ಕಡಿಮೆ ಎಲ್ಲ ಶಾಲೆಗಳು ಆಫ್ಲೈನ್ ಮತ್ತು ಆನ್ಲೈನ್ ತರಗತಿಗಳನ್ನು ಜೊತೆಜೊತೆಯಾಗಿ ನಡೆಸುತ್ತಿವೆ. ಓಕೆ, ಆನ್ ಲೈನ್ ತರಗತಿಗಳೆಂದಾಕ್ಷಣ ಮಕ್ಕಳಿಗೆ ಸ್ಮಾರ್ಟ್ ಫೋನ್ ಕೊಡಿಸುವ ಅನಿವಾರ್ಯತೆ ಎದುರಾಗುತ್ತದೆ.
ಮಕ್ಕಳ ಕೈಗಳಿಗೆ ದುಬಾರಿ ಫೋನ್ಗಳನ್ನು ಕೊಡುವುದು ಕಷ್ಟವೇ. ಎಷ್ಟಾದರೂ ಅವರದ್ದು ಹುಡುಗು ಬುದ್ಧಿ. ಕೆಳಗೆ ಬೀಳಿಸುತ್ತಾರೆ, ಹಾಳು ಮಾಡುತ್ತಾರೆ. ಪೆಟ್ರೋಲ್ ಬೆಲೆ ಲೀಟರ್ ಗೆ 100 ರೂ. ಗಳಿಗಿಂತ ಹೆಚ್ಚಾಗಿರುವ ಇವತ್ತಿನ ತುಟ್ಟಿಕಾಲದಲ್ಲಿ ಬಡ, ಕೆಳ-ಮಧ್ಯಮ ಮತ್ತು ಮಧ್ಯಮ ವರ್ಗದ ಕುಟಂಬಗಳು ಮಕ್ಕಳಿಗೆ ಸ್ಮಾರ್ಟ್ ಫೋನ್ ಕೊಡಿಸಲು ಪರದಾಡಬೇಕಾಗುತ್ತದೆ.
ಆದರೆ, ಸಂತೋಷದ ಸಂಗತಿಯೆಂದರೆ, ರೂ. 6,000 ಕ್ಕಿಂತ ಕಡಿಮೆ ಬೆಲೆಗೆ ಉತ್ತಮ ಫೀಚರ್ ಉಳ್ಳ ಅತ್ಯುತ್ತಮ ಗುಣಮಟ್ಟದ ಸ್ಮಾರ್ಟ್ ಫೋನ್ಗಳು ಈಗಲೂ ಸಿಗುತ್ತಿವೆ. ಸ್ಯಾಮ್ಸಂಗ್, ನೊಕಿಯಾ ಮತ್ತು ಕಾರ್ಬನ್ ಕಂಪನಿಗಳು ಕೈಗೆಟಕುವ ದರದಲ್ಲಿ ತಮ್ಮ ಸ್ಮಾರ್ಟ್ ಪೋನ್ಗಳನ್ನು ಮಾರುತ್ತಿವೆ.
ರಿಲಯನ್ಸ್ ಡಿಜಿಟಲ್ ವೆಬ್ಸೈಟ್ನಲ್ಲಿ ಸ್ಯಾಮ್ಸಂಗ್ ಗೆಲಾಕ್ಸಿ ಎಮ್01 ಕೋರ್ ಸ್ಮಾರ್ಟ್ ಪೋನ್ ಕೇವಲ 5,199 ರೂ. ಗಳಿಗೆ ಲಭ್ಯವಿದೆ. ಇದು 5.3 ಇಂಚ್ ಡಿಸ್ಪ್ಲೇ, 8 ಎಮ್ ಪಿ ರೇರ್ ಕೆಮೆರಾ, 5 ಎಮ್ ಪಿ ಸೆಲ್ಫೀ ಕೆಮೆರಾ, 1 ಜಿಬಿ ಆರ್ ಎ ಎಮ್ ಮತ್ತು 16 ಜಿಬಿ ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬರುತ್ತದೆ.
2 ಜಿಬಿ ಆರ್ ಎ ಎಮ್, 32 ಜಿಬಿ ಸ್ಟೋರೇಜ್ ನೊಂದಿಗೆ ಕಾರ್ಬನ್ ಸ್ಮಾರ್ಟ್ ಪೋನ್ ರೂ. 5,498ಕ್ಕೆ ಸಿಗುತ್ತಿದೆ. ಹಾಗೆಯೇ, ನೋಕಿಯಾ, ಸಿ01 ಪ್ಲಸ್ 2 ಜಿಬಿ ಆರ್ ಎ ಎಮ್, 16 ಜಿಬಿ ಸ್ಟೋರೇಜ್ ಮತ್ತು ಇತರ ಫೀಚರ್ಗಳೊಂದಿಗೆ ರೂ. 5,999 ಕ್ಕೆ ಅಮೇಜಾನ್ ಮತ್ತು ನೋಕಿಯ ವೆಬ್ಸೈಟ್ನಲ್ಲಿ ಲಭ್ಯವಿದೆ.
ಇದನ್ನೂ ಓದಿ: Viral Video: ಬಾಂಗ್ರಾ ನೃತ್ಯಕ್ಕೆ ಸಖತ್ತಾಗಿ ಹೆಜ್ಜೆ ಹಾಕಿದ ಪಂಜಾಬ್ ಸಿಎಂ ಚರಣ್ಜಿತ್ ಸಿಂಗ್; ವಿಡಿಯೋ ವೈರಲ್