ಎಲ್ಲ ಕಂಪನಿಗಳ ಷೇರುಗಳು ಹಣವನ್ನು ದ್ವಿಗುಣಗೊಳಿಸಲಾರವು, ಹಣ ಹೂಡುವಾಗ ವಿವೇಚನೆ ಬಳಸಬೇಕು:  ಡಾ ಬಾಲಾಜಿ ರಾವ್

ಎಲ್ಲ ಕಂಪನಿಗಳ ಷೇರುಗಳು ಹಣವನ್ನು ದ್ವಿಗುಣಗೊಳಿಸಲಾರವು, ಹಣ ಹೂಡುವಾಗ ವಿವೇಚನೆ ಬಳಸಬೇಕು: ಡಾ ಬಾಲಾಜಿ ರಾವ್

TV9 Web
| Updated By: preethi shettigar

Updated on: Sep 25, 2021 | 9:02 AM

ಇಪ್ಪತ್ತು ವರ್ಷಗಳ ಹಿಂದೆ ರೂ. 7,000 ಕೊಟ್ಟು ಖರೀದಿಸಿದ ಟೈಟನ್ ಕಂಪನಿಯ 100 ಷೇರುಗಳ ಮೌಲ್ಯ ಇವತ್ತು ರೂ 35 ಲಕ್ಷ ಆಗಿದೆ ಎಂದು ರಾವ್ ಅಂಕಿ-ಅಂಶಗಳನ್ನು ಇಟ್ಟುಕೊಂಡು ಹೇಳುತ್ತಾರೆ.

ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವ ಬಗ್ಗೆ ಗುರುವಾರ ಮಾತು ಆರಂಭಿಸಿದ್ದ ಹೂಡಿಕೆ ತಜ್ಞ ಡಾ ಬಾಲಾಜಿ ರಾವ್ ಡಿಜಿ ಅವರು ಹತ್ತು ವರ್ಷಗಳ ಹಿಂದೆ ಖರೀದಿಸಿದ ವಿವಿಧ ಕಂಪನಿಗಳ ಷೇರುಗಳು ಈಗ ಎಷ್ಟು ಪಟ್ಟು ಹೆಚ್ಚಾಗಿವೆ ಅನ್ನೋದನ್ನು ತಿಳಿಸಿದ್ದರು. ಇಂದು ಅವರು 20 ವರ್ಷಗಳ ಹಿಂದೆ ಖರೀದಿಸಿದ ಅದೇ 100 ಷೇರುಗಳ ಇವತ್ತಿನ ಮಾರ್ಕೆಟ್ ಮೌಲ್ಯ ಏನು ಅನ್ನೋದನ್ನು ವಿವರಿಸಿದ್ದಾರೆ ಮತ್ತು ನಷ್ಟದಲ್ಲಿ ಓಡುವ ಕಂಪನಿಗಳ ಬಗ್ಗೆಯೂ ಮಾತಾಡಿದ್ದಾರೆ

ಇಪ್ಪತ್ತು ವರ್ಷಗಳ ಹಿಂದೆ ರೂ. 7,000 ಕೊಟ್ಟು ಖರೀದಿಸಿದ ಟೈಟನ್ ಕಂಪನಿಯ 100 ಷೇರುಗಳ ಮೌಲ್ಯ ಇವತ್ತು ರೂ 35 ಲಕ್ಷ ಆಗಿದೆ ಎಂದು ರಾವ್ ಅಂಕಿ-ಅಂಶಗಳನ್ನು ಇಟ್ಟುಕೊಂಡು ಹೇಳುತ್ತಾರೆ. ಇದೇ ಅವಧಿಗೆ ರೂ 9,500 ಸಾವಿರ ಕೊಟ್ಟು ಖರೀದಿಸಿದ ಬರ್ಜರ್ ಪೇಂಟ್ಸ್ ಕಂಪನಿಯ 100 ಷೇರುಗಳು 28 ಲಕ್ಷ ರೂ ಗಳ ರಿಟರ್ನ್ಸ್ ನೀಡಿವೆ. 61 ಸಾವಿರ ರೂ.

ಬ್ರಿಟಾನಿಯಾ ಕಂಪನಿ ಷೇರುಗಳು ರೂ 1.46 ಕೋಟಿ ಅಗಿವೆ. 18,000 ರೂ. ಕೋಲ್ಗೇಟ್ ಷೇರುಗಳ ಇಂದಿನ ಮೌಲ್ಯ ರೂ 27 ಲಕ್ಷ. 40,000 ರೂ ಗಳ ಏಷ್ಯನ್ ಪೇಂಟ್ಸ್ ಷೇರುಗಳು 45 ಲಕ್ಷ ರೂ. ದುಡಿದಿವೆ. ರೂ 40,000ಗಳ ಫೆವಿಕಾಲ್ (ಪಿಡಿಲೈಟ್) ಷೇರುಗಳ ಇಂದಿನ ಮಾರ್ಕೆಟ್ ದರ 43 ಲಕ್ಷ ರೂ.

ಹೆಚ್ ಡಿ ಎಫ್ ಬ್ಯಾಂಕ್ ಶೇರುಗಳಲ್ಲಿ ಹೂಡಿದ ರೂ 1,000 ಇವತ್ತು 15 ಲಕ್ಷ ರೂ ಗಳಲ್ಲಿ ಪರಿವರ್ತನೆಯಾಗಿವೆ. ಹಾಗೆಯೇ ಡಾಬರ್ ಸಂಸ್ಥೆಯಲ್ಲಿ ಹೂಡಿದ 65,000 ರೂಪಾಯಿ 20 ವರ್ಷಗಳ ನಂತರ 28 ಲಕ್ಷ ರೂ. ಗಳಾಗಿವೆ.

ಕಂಪನಿಯ ಖ್ಯಾತಿ ಮತ್ತು ವರ್ಚಸ್ಸಿನ ಆಧಾರದಲ್ಲಿ ಹಣ ಹೂಡಿಕೆ ಮಾಡಬೇಕು ಅಂತ ರಾವ್ ಹೇಳುತ್ತಾರೆ. ದಿವಾನ್ ಹೌಸಿಂಗ್, ಯೆಸ್ ಬ್ಯಾಂಕ್, ಅನಿಲ್ ಅಂಬಾನಿಯ ಕಂಪನಿಗಳು, ಕಿಂಗ್ ಫಿಶರ್ ಏರ್ಲೈನ್ಸ್, ಜೆಪಿ ಅಸೋಸಿಯೇಟ್ಸ್, ವೊಡಾಫೋನ್ ಐಡಿಯಾ ಮೊದಲಾದ ಕಂಪನಿಗಳು ನಷ್ಟದಲ್ಲಿ ಓಡುತ್ತಿರುವುದರಿಂದ ಅಂಥ ಕಂಪನಿಗಳಲ್ಲಿ ಹಣ ಹೂಡುವ ಮೊದಲು ಯೋಚಿಸಬೇಕು, ಹೂಡಿಕೆಗೆ ತಿಳುವಳಿಕೆ ಅತ್ಯವಶ್ಯಕವಾಗಿರುತ್ತದೆ ಎಂದು ಅವರು ಹೇಳುತ್ತಾರೆ.

ಅವರು ಹೇಳುವ ತಾತ್ಪರ್ಯವೇನೆಂದರೆ ಎಲ್ಲ ಕಂಪನಿಗಳು ಹೂಡಿಕೆಗೆ ಯೋಗ್ಯವಾಗಿರುವುದಿಲ್ಲ.

ನಮ್ಮ ಗೃಹಬಳಕೆಯ ಶೇಕಡಾ 70 ರಷ್ಟು ಪದಾರ್ಥಗಳನ್ನು ತಯಾರಿಸುವ ಕಂಪನಿಗಳು ಷೇರ್ ಮಾರ್ಕೆಟ್ನಲ್ಲಿ ಲಿಸ್ಟ್ ಆಗಿವೆ. ಈ ಕಂಪನಿಗಳ ಬಗ್ಗೆ ನಾವು ಕೇಳಿಸಿಕೊಂಡಿರುತ್ತೇವೆ. ಹಾಗಾಗಿ ಹಣ ಹೂಡುವಾಗ ವಿವೇಚನೆ ಬಳಸಬೇಕು ಎಂದು ರಾವ್ ಹೇಳುತ್ತಾರೆ.

ಇದನ್ನೂ ಓದಿ:  ಅಲ್ಪಾವಧಿಗೆ ರಿಟರ್ನ್ಸ್ ಬಯಸುವವರು ಷೇರುಗಳಲ್ಲಿ ಹಣ ಹೂಡಲೇಬಾರದು ಎನ್ನುತ್ತಾರೆ ಹೂಡಿಕೆ ತಜ್ಞ ಡಾ ಬಾಲಾಜಿ ರಾವ್