ಬೆಂಗಳೂರು: ಕೊರೊನಾದಿಂದ ಆರ್ಥಿಕ ನಷ್ಟ! ಕಾಲೇಜು ಆರಂಭಿಸಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣು
ವರ್ಷದ ಹಿಂದಷ್ಟೇ ಕಲ್ಪವೃಕ್ಷ ಎನ್ನುವ ಹೆಸರಿನಲ್ಲಿ ಡಿಗ್ರಿ ಕಾಲೇಜನ್ನು ಆರಂಭಿಸಿದ್ದರು. ಆದರೆ ಕೊರೊನಾದಿಂದ ನಷ್ಟವಾಗಿತ್ತು. 20 ಲಕ್ಷದಷ್ಟೂ ನಷ್ಟ ಉಂಟಾದ ಹಿನ್ನೆಲೆ ಪಾರ್ಟ್ನರ್ ಶಿಪ್ನ ಇಬ್ಬರು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರಂತೆ.
ನೆಲಮಂಗಲ: ಆರ್ಥಿಕ ಸಂಕಷ್ಟ ಹಿನ್ನೆಲೆ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾರೆ. 31 ವರ್ಷದ ಕೆಂಪಾಪುರ ನಿವಾಸಿ ಮಂಜುನಾಥ್ ಎಂಬಾತ ಬೆಂಗಳೂರಿನ ಟಿ.ದಾಸರಹಳ್ಳಿಯ ಕಾಲೇಜಿನಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಪಾರ್ಟ್ನರ್ ಶಿಪ್ನಲ್ಲಿ ಡಿಗ್ರಿ ಕಾಲೇಜನ್ನು ಆರಂಭಿಸಿದ್ದರು. ಚಂದ್ರು ಮತ್ತು ಮಲ್ಲಿಕಾರ್ಜುನ ಜೊತೆ ಸೇರಿ ಮಂಜುನಾಥ್ ಕಾಲೇಜು ಆರಂಭ ಮಾಡಿದ್ದರು. ಕೊರೊನಾ ಹಿನ್ನೆಲೆ ಕಾಲೇಜು ನಡೆಸಲು ಕಷ್ಟವಾಗಿತ್ತು. ಹೀಗಾಗಿ ಸ್ನೇಹಿತರು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರಂತೆ. ಮಂಜುನಾಥ್ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಚಂದ್ರು, ಮಲ್ಲಿಕಾರ್ಜುನ ವಿರುದ್ಧ ಪ್ರಕರಣ ದಾಖಲಾಗಿದೆ.
ವರ್ಷದ ಹಿಂದಷ್ಟೇ ಕಲ್ಪವೃಕ್ಷ ಎನ್ನುವ ಹೆಸರಿನಲ್ಲಿ ಡಿಗ್ರಿ ಕಾಲೇಜನ್ನು ಆರಂಭಿಸಿದ್ದರು. ಆದರೆ ಕೊರೊನಾದಿಂದ ನಷ್ಟವಾಗಿತ್ತು. 20 ಲಕ್ಷದಷ್ಟೂ ನಷ್ಟ ಉಂಟಾದ ಹಿನ್ನೆಲೆ ಪಾರ್ಟ್ನರ್ ಶಿಪ್ನ ಇಬ್ಬರು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರಂತೆ. ಕಿರುಕುಳ ಕೊಡುತ್ತಿದ್ದರು ಎಂದು ಮೃತ ಮಂಜುನಾಥ್ ಡೆತ್ನೋಟ್ ಬರೆದು ಕಾಲೇಜಿನಲ್ಲೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತ ಮಂಜುನಾಥ್ 8 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಕಾಲೇಜು ಬಳಿ ಹೋಗುವುದಾಗಿ ಪತ್ನಿಗೆ ತಿಳಿಸಿ ಬಂದಿದ್ದರು. ಮನೆಗೆ ಬರದ ಹಿನ್ನೆಲೆ ಮೃತನ ಪತ್ನಿ ಕಾಲೇಜು ಬಳಿ ಬಂದಿದ್ದಾರೆ. ಪತಿ ಮಂಜುನಾಥ್ ನೇಣಿಗೆ ಶರಣಾಗಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಂಜುನಾಥ್ ಶವವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಹೆಸರಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಸದ್ಯ ಮೃತ ಮಂಜುನಾಥ್ ಪಾರ್ಟ್ನರ್ ಶಿಪ್ನ ಚಂದ್ರು ಹಾಗೂ ಮಲ್ಲಿಕಾರ್ಜುನ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಕಿರುಕುಳ ದೂರು ದಾಖಲಾಗಿದೆ.
ಇದನ್ನೂ ಓದಿ
ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೇ ಹಳಿ ಮೇಲೆ ನಿಂತಿದ್ದ ಯುವತಿಯ ಪ್ರಾಣ ಕಾಪಾಡಿದ ಆಟೋ ಚಾಲಕ; ವಿಡಿಯೋ ವೈರಲ್
20 ಲಕ್ಷ ಸಾಲ ಮಾಡಿಕೊಂಡಿದ್ದ ಕುಟುಂಬದಲ್ಲಿ ದುರಂತ: ನದಿಗೆ ಹಾರಿ ತಾಯಿ-ಮಗು ಆತ್ಮಹತ್ಯೆ; ಇಬ್ಬರು ಮಕ್ಕಳು ಬಚಾವ್
(Bengaluru man commits suicide in Nelamangala college for Financial loss)
Published On - 9:43 am, Wed, 29 September 21