ಶಿವರಾತ್ರಿ ಹಬ್ಬ ಆಚರಣೆ ವೇಳೆ ವಿದ್ಯುತ್ ಸ್ಪರ್ಶಿಸಿ 17 ಮಕ್ಕಳ ಸ್ಥಿತಿ ಚಿಂತಾಜನಕ

ಶಿವರಾತ್ರಿ ಹಬ್ಬ ಆಚರಣೆ ವೇಳೆ ಹದಿನೇಳು ಮಕ್ಕಳು ಮತ್ತು ಮಹಿಳೆಯೊಬ್ಬರಿಗೆ ವಿದ್ಯುತ್ ಸ್ಪರ್ಶಿ ಸುಟ್ಟಗಾಯಗಳಿವೆ. ಇದೀಗ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಳಿ ಬಸ್ತಿ ಪ್ರದೇಶದಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಶಿವರಾತ್ರಿ ಹಬ್ಬ ಆಚರಣೆ ವೇಳೆ ವಿದ್ಯುತ್ ಸ್ಪರ್ಶಿಸಿ 17 ಮಕ್ಕಳ ಸ್ಥಿತಿ ಚಿಂತಾಜನಕ
Follow us
|

Updated on: Mar 08, 2024 | 6:17 PM

ಕೋಟಾ, ಮಾ.8: ರಾಜಸ್ಥಾನದ ಕೋಟಾದಲ್ಲಿ ಇಂದು ಶಿವರಾತ್ರಿ ಹಬ್ಬ ಆಚರಣೆ ವೇಳೆ ಹದಿನೇಳು ಮಕ್ಕಳು ಮತ್ತು ಮಹಿಳೆಯೊಬ್ಬರಿಗೆ ವಿದ್ಯುತ್ ಸ್ಪರ್ಶಿ ಸುಟ್ಟಗಾಯಗಳಿವೆ. ಇದೀಗ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಳಿ ಬಸ್ತಿ ಪ್ರದೇಶದಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಈ ಘಟನೆ ಬಗ್ಗೆ ಕುಂಹಾರಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಅರವಿಂದ ಭಾರಧ್ವಾಜ್ ಅವರು ಮಾಹಿತಿ ನೀಡಿದ್ದಾರೆ, ಅವರರ ಪ್ರಕಾರ, ಮಕ್ಕಳ ತಂಡವು ಮೆರವಣಿಗೆಯ ಭಾಗವಾಗಿತ್ತು ಮತ್ತು ಒಂದು ದೇವಸ್ಥಾನದಿಂದ ಇನ್ನೊಂದು ದೇವಸ್ಥಾನಕ್ಕೆ ಕಲಶವನ್ನು (ಪಾತ್ರೆ) ಹೊತ್ತುಕೊಂಡು ಹೋಗುತ್ತಿದ್ದರು. ಇನ್ನೊಂದು ಕಡೆ ಮಕ್ಕಳು ಕಬ್ಬಿಣದ ರಾಡ್‌ನಲ್ಲಿ ಧ್ವಜವನ್ನು ಹಾರಿಸಿದ್ದರು. ಈ ಸಮಯದಲ್ಲಿ ರಾಡ್ ಮೇಲೆ ಇದ್ದ ಹೈಟೆನ್ಷನ್ ತಂತಿಗೆ ತಗುಲಿ ಮಹಿಳೆಯೊಂದಿಗೆ ಮಕ್ಕಳಿಗೂ ವಿದ್ಯತ್​​ ಸ್ಪರ್ಶಿಸಿದೆ. ಅವರೆಲ್ಲರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಕ್ಕಳ ಪೈಕಿ ಒಬ್ಬರಿಗೆ ಶೇ.70ರಷ್ಟು ಸುಟ್ಟ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.

ಇದನ್ನೂ ಓದಿ: ರಸ್ತೆಯಲ್ಲಿ ನಮಾಜ್ ಮಾಡುತ್ತಿದ್ದ ಜನರಿಗೆ ಒದ್ದ ದೆಹಲಿ ಪೊಲೀಸ್; ಅಧಿಕಾರಿ ಅಮಾನತು

ಇನ್ನು ಗಾಯಗೊಂಡಿರುವವನ್ನು ಕೋಟಾದ ಎಂಬಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಮಕ್ಕಳು 9 ರಿಂದ 16 ವರ್ಷದೊಳಗಿನವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಜಿಲ್ಲಾಧಿಕಾರಿ ರವೀಂದ್ರ ಗೋಸ್ವಾಮಿ ಅವರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಅವರ ಜತೆಗೆ ರಾಜಸ್ಥಾನದ ಇಂಧನ ಸಚಿವ ಹೀರಾಲಾಲ್ ನಗರ್ ಕೂಡ ಭೇಟಿ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ