ದೆಹಲಿ: ಉತ್ತರ ಪ್ರದೇಶದ (Uttar Pradesh) ಲಲಿತಪುರ (Lalitpur) ಜಿಲ್ಲೆಯಲ್ಲಿ17 ವರ್ಷದ ಹುಡುಗಿ ತನ್ನ ತಂದೆ, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷದ ಕೆಲವು ನಾಯಕರು ಮತ್ತು ಆಕೆಯ ಹತ್ತಿರದ ಸಂಬಂಧಿಗಳು ಸೇರಿದಂತೆ 28 ಜನರು ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಲಲಿತಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ತನ್ನ ಎಫ್ಐಆರ್ನಲ್ಲಿ, ಟ್ರಕ್ ಆಪರೇಟರ್ ಆಗಿ ಕೆಲಸ ಮಾಡುತ್ತಿರುವ ತನ್ನ ತಂದೆ 6 ನೇ ತರಗತಿಯಲ್ಲಿದ್ದಾಗ ತನ್ನ ಅಶ್ಲೀಲ ಚಿತ್ರಗಳನ್ನು ತೋರಿಸಿ ಲೈಂಗಿಕ ಕೃತ್ಯಕ್ಕೆ ಒತ್ತಾಯಿಸಿದ್ದರು ಎಂದು ಹುಡುಗಿ ಹೇಳಿದ್ದಾಳೆ. ಅವಳು ನಿರಾಕರಿಸಿದ ನಂತರ, ಅಪ್ಪ ಅವಳಿಗೆ ಹೊಸ ಬಟ್ಟೆಗಳನ್ನು ಕೊಡಿಸಿ ಬೈಕ್ ಸವಾರಿಗೆ ಕರೆದೊಯ್ದು ಏಕಾಂತ ಪ್ರದೇಶದಲ್ಲಿ ಅತ್ಯಾಚಾರ ಮಾಡುತ್ತಿದ್ದ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ತಾಯಿಯನ್ನು ಕೊಲ್ಲುವೆ ಎಂದು ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತೆ ಹೇಳಿದ್ದಾಳೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ಲಲಿತಪುರ ಪೊಲೀಸರು ಬಾಲಕಿಯ ತಂದೆ, ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ತಿಲಕ್ ಯಾದವ್, ಎಸ್ಪಿ ನಗರ ಅಧ್ಯಕ್ಷ ರಾಜೇಶ್ ಜೈನ್ ಜೋಹಿಯಾ, ಬಿಎಸ್ಪಿ ಜಿಲ್ಲಾ ಅಧ್ಯಕ್ಷ ದೀಪಕ್ ಅಹಿರ್ವಾರ್ ಮತ್ತು ಇತರರ ವಿರುದ್ಧ ಸೆಕ್ಷನ್ 354 , 376 -ಡಿ (ಅತ್ಯಾಚಾರ), 323 (ಸ್ವಯಂಪ್ರೇರಣೆಯಿಂದ ನೋವನ್ನು ಉಂಟುಮಾಡುವುದು), 506 (ಕ್ರಿಮಿನಲ್ ಬೆದರಿಕೆ) ಮತ್ತು ಐಪಿಸಿಯ ಇತರ ವಿಭಾಗಗಳು ಮತ್ತು ಪೊಕ್ಸೊ ಕಾಯಿದೆಯ ಸೆಕ್ಷನ್ 5/6 ಅಡಿಯಲ್ಲಿ 28 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ದೂರಿನಲ್ಲಿ ಸಂತ್ರಸ್ತೆ ಮೊದಲ ಘಟನೆಯ ನಂತರ ಆಕೆಯ ತಂದೆ ತನ್ನ ಆಹಾರದಲ್ಲಿ ನಿದ್ದೆ ಬರುವ ಮಾತ್ರೆ ಬೆರೆಸಿ ಕೊಟ್ಟು ಹೋಟೆಲ್‌ಗೆ ಕರೆದೊಯ್ದರು. ಅಲ್ಲಿ ಒಬ್ಬ ಮಹಿಳೆ ತನ್ನನ್ನು ಖಾಲಿ ಕೋಣೆಗೆ ಕಳುಹಿಸಿದಳು. ಅಲ್ಲಿ ಒಬ್ಬ ವ್ಯಕ್ತಿ ಅತ್ಯಾಚಾರ ಮಾಡಿದ್ದಳು ಪ್ರಜ್ಞೆ ಮರಳಿದ ನಂತರ ಮೈಮೇಲೆ ಬಟ್ಟೆ ಮತ್ತು ಧರಿಸಿದ್ದ ಬೂಟುಗಳು ಇರಲಿಲ್ಲ, ಹೊಟ್ಟೆ ನೋವು ಆಗಿತ್ತು.
ಸ್ವಲ್ಪ ಸಮಯದವರೆಗೆ ಅವಳು ಇದೇ ರೀತಿಯ ಕೃತ್ಯಗಳಿಗೆ ಒಳಗಾಗಿದ್ದಳು ಎಂದು ಆಕೆ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಹೇಳಿದೆ.”ಪ್ರತಿ ಬಾರಿ ಹೊಸ ವ್ಯಕ್ತಿಯೊಬ್ಬ ಅವಳನ್ನು ಅಮಾನವೀಯವಾಗಿ ಅತ್ಯಾಚಾರ ಮಾಡುತ್ತಿದ್ದ” ಎಂದು ಸಂತ್ರಸ್ತೆ ಹೇಳಿದ್ದಾಳೆ.
ಕೆಲವು ದಿನಗಳ ನಂತರ “ಒಬ್ಬ ತಿಲಕ್ ಯಾದವ್ ಎಂಬ ವ್ಯಕ್ತಿಯೊಬ್ಬ ಸೇಡು ತೀರಿಸುವಂತೆಆಕೆಯ ಮೇಲೆ ಅಮಾನವೀಯವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ. ನಾನು ಆಕ್ಷೇಪ ವ್ಯಕ್ತ ಪಡಿಸಿದಾಗ, ಅವನು ನಿನ್ನ ತಂದೆಯೇ ಕಳುಹಿಸಿದ್ದಾನೆ ಎಂದು ಹೇಳಿದನು. ತಿಲಕ್ ಅವರ ಸಂಬಂಧಿಕರು ಮತ್ತು ಸ್ನೇಹಿತರು ಕೂಡ ನಿರಂತರವಾಗಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ ಸಂತ್ರಸ್ತೆ ಆಕೆಯ ನಾಲ್ಕು ಚಿಕ್ಕಪ್ಪಂದಿರು ಮತ್ತು ಸೋದರಸಂಬಂಧಿಗಳು ಕೂಡ ಈ ಕೃತ್ಯಕ್ಕೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾಳೆ.
ದೂರು ದಾಖಲಾದ ತಕ್ಷಣ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ತಿಲಕ್ ಯಾದವ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯನ್ನು ನೀಡಿದ್ದು ಆರೋಪವನ್ನು ನಿರಾಕರಿಸಿದರು. ಈ ಪ್ರಕರಣವು ತನ್ನನ್ನು ಮತ್ ಸಹೋದರರನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸುವ ಪ್ರಯತ್ನವಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ವಿವಾಹ ಪೂರ್ವ ಸಮ್ಮತಿ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ; ಚಾಮರಾಜನಗರ ಜಿಲ್ಲಾ ಸೆಷನ್ಸ್ ಕೋರ್ಟ್‌ನಿಂದ ಮಹತ್ವದ ತೀರ್ಪು