Tral Encounter: ಕಾಶ್ಮೀರದ ತ್ರಾಲ್​ನಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಜೈಷ್ ಉಗ್ರ ಸಂಘಟನೆಯ ಕಮಾಂಡರ್ ಹತ್ಯೆ

TV9 Digital Desk

| Edited By: Sushma Chakre

Updated on:Oct 13, 2021 | 4:10 PM

ಆವಂತಿಪುರ ಜಿಲ್ಲೆಯ ತ್ರಾಲ್​ನಲ್ಲಿ ಜೈಷ್-ಇ-ಮೊಹಮ್ಮದ್ ಸಂಘಟನೆಯ ಕಮಾಂಡರ್ ಶ್ಯಾಮ್ ಸೋಫಿಯನ್ನು ಎನ್​ಕೌಂಟರ್​ನಲ್ಲಿ ಕೊಲ್ಲಲಾಗಿದೆ.

Tral Encounter: ಕಾಶ್ಮೀರದ ತ್ರಾಲ್​ನಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಜೈಷ್ ಉಗ್ರ ಸಂಘಟನೆಯ ಕಮಾಂಡರ್ ಹತ್ಯೆ
ಎನ್​ಕೌಂಟರ್​ನಲ್ಲಿ ಹತನಾದ ಜೈಷ್ ಸಂಘಟನೆಯ ಕಮಾಂಡರ್ ಶಾಮ್ ಸೋಫಿ

Follow us on

ಶ್ರೀನಗರ: ಜಮ್ಮು ಕಾಶ್ಮೀರದ ಆವಂತಿಪುರ ಜಿಲ್ಲೆಯ ತ್ರಾಲ್ ಪ್ರದೇಶದಲ್ಲಿ (Tral Encounter) ಇಂದು ನಡೆದ ಎನ್​ಕೌಂಟರ್ ಕಾರ್ಯಾಚರಣೆಯಲ್ಲಿ ಜೈಷ್-ಇ-ಮೊಹಮ್ಮದ್ (JeM) ಸಂಘಟನೆಯ ಮುಖ್ಯ ಕಮಾಂಡರ್​ನನ್ನು ಹತ್ಯೆ ಮಾಡಲಾಗಿದೆ. ಉಗ್ರರು ಮತ್ತು ಭದ್ರತಾ ಪಡೆಯ ಸಿಬ್ಬಂದಿ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಜೈಷ್ ಕಮಾಂಡರ್​ನನ್ನು ಹೊಡೆದುರುಳಿಸಲಾಗಿದೆ.

ಈ ಬಗ್ಗೆ ಕಾಶ್ಮೀರದ ಪೊಲೀಸರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಜೈಷ್-ಇ-ಮೊಹಮ್ಮದ್ ಸಂಘಟನೆಯ ಕಮಾಂಡರ್ ಶ್ಯಾಮ್ ಸೋಫಿಯನ್ನು ಎನ್​ಕೌಂಟರ್​ನಲ್ಲಿ ಕೊಲ್ಲಲಾಗಿದೆ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.

ತ್ರಾಲ್ ಸುತ್ತಮುತ್ತಲೂ ಇನ್ನೂ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಜಮ್ಮು ಕಾಶ್ಮೀರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಎನ್​ಕೌಂಟರ್ ಕಾರ್ಯಾಚರಣೆ ನಡೆಯುತ್ತಿದೆ. ನಿನ್ನೆ ಎಲ್​ಇಟಿ ಸಂಘಟನೆಯ ಐವರು ಉಗ್ರರನ್ನು ಶೋಪಿಯಾನ್​ನಲ್ಲಿ ನಡೆದ ಎನ್​ಕೌಂಟರ್ ವೇಳೆ ಹತ್ಯೆ ಮಾಡಲಾಗಿತ್ತು. ಭಾರತೀಯ ಸೇನಾಪಡೆ ಉಗ್ರರ ಸದ್ದಡಗಿಸಲು ಪಣ ತೊಟ್ಟಿದ್ದು, ಕಾಶ್ಮೀರದ ಸುತ್ತಮುತ್ತ ಉಗ್ರರನ್ನು ಬೇಟೆಯಾಡುತ್ತಿದ್ದಾರೆ.

ಇದನ್ನೂ ಓದಿ: Terrorist Encounter: ಜಮ್ಮು ಕಾಶ್ಮೀರದಲ್ಲಿ ಪೊಲೀಸರಿಂದ ಎಲ್​ಇಟಿ ಉಗ್ರನ ಎನ್​ಕೌಂಟರ್

ಕಾಶ್ಮೀರದಲ್ಲಿ ಮುಂಜಾನೆ ನಡೆದ ಎನ್​ಕೌಂಟರ್​​; ಇಬ್ಬರು ಉಗ್ರರ ಹತ್ಯೆ, ಮೂವರು ಯೋಧರಿಗೆ ಗಾಯ

ತಾಜಾ ಸುದ್ದಿ

Most Read Stories

Click on your DTH Provider to Add TV9 Kannada