ಗರ್ಭಧಾರಣೆಯಾಗಿ 24 ವಾರಗಳವರೆಗೆ ಗರ್ಭಪಾತಕ್ಕೆ ಅವಕಾಶ ನೀಡುವ ಹೊಸ ನಿಯಮಕ್ಕೆ ಕೇಂದ್ರ ಅಧಿಸೂಚನೆ

Abortion law ಹೊಸ ನಿಯಮ ಪ್ರಕಾರ ಕೆಲವು ವರ್ಗಗಳ ಮಹಿಳೆಯರಿಗೆ ಗರ್ಭಧಾರಣೆಯ ಮುಕ್ತಾಯದ ಮೇಲಿನ ಮಿತಿಯನ್ನು 20 ರಿಂದ 24 ವಾರಗಳಿಗೆ ಹೆಚ್ಚಿಸಲಾಗಿದೆ.

ಗರ್ಭಧಾರಣೆಯಾಗಿ 24 ವಾರಗಳವರೆಗೆ ಗರ್ಭಪಾತಕ್ಕೆ ಅವಕಾಶ ನೀಡುವ ಹೊಸ ನಿಯಮಕ್ಕೆ ಕೇಂದ್ರ ಅಧಿಸೂಚನೆ
ಪ್ರಾತಿನಿಧಿಕ ಚಿತ್ರ

ದೆಹಲಿ: ನಿರ್ದಿಷ್ಟ ವರ್ಗಗಳ ಗರ್ಭಿಣಿಯರಿಗೆ 24 ವಾರಗಳವರೆಗೆ ಗರ್ಭಪಾತಕ್ಕೆ (Abortion) ಅವಕಾಶ ನೀಡುವ ಹೊಸ ನಿಯಮಕ್ಕೆ ಕೇಂದ್ರ ಸರ್ಕಾರ ಬುಧವಾರ ಅಧಿಸೂಚನೆ ನೀಡಿದೆ. ಇದರ ಪ್ರಕಾರ ಕೆಲವು ವರ್ಗಗಳ ಮಹಿಳೆಯರಿಗೆ ಗರ್ಭಧಾರಣೆಯ ಮುಕ್ತಾಯದ ಮೇಲಿನ ಮಿತಿಯನ್ನು 20 ರಿಂದ 24 ವಾರಗಳಿಗೆ ಹೆಚ್ಚಿಸಲಾಗಿದೆ. ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ (ತಿದ್ದುಪಡಿ) ನಿಯಮಗಳು, 2021 (Medical Termination of Pregnancy (Amendment) Rules, 2021) ರ ಪ್ರಕಾರ ಈ ವರ್ಗಗಳಲ್ಲಿ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ಅಥವಾ ಸಂಭೋಗದ ಸಂತ್ರಸ್ತರು , ಅಪ್ರಾಪ್ತ ವಯಸ್ಕರು ಮತ್ತು ವೈವಾಹಿಕ ಸ್ಥಿತಿಯು ಬದಲಾಗುತ್ತಿರುವ ಹೊತ್ತಲ್ಲಿ ಗರ್ಭಾವಸ್ಥೆಯಲ್ಲಿದ್ದರೆ (ವಿಧವೆ ಮತ್ತು ವಿಚ್ಛೇದನ ಪಡೆದ ಮಹಿಳೆಯರು) ಮತ್ತು ದೈಹಿಕ ನ್ಯೂನತೆ ಹೊಂದಿರುವ ಮಹಿಳೆಯರನ್ನು ಒಳಗೊಳ್ಳುತ್ತಾರೆ.

ಹೊಸ ನಿಯಮಗಳು ಮಾನಸಿಕ ಅಸ್ವಸ್ಥ ಮಹಿಳೆಯರು, ಭ್ರೂಣಕ್ಕೆ ಸಮಸ್ಯೆ ಇರುವ ಪ್ರಕರಣಗಳಿಂದ ಜೀವಕ್ಕೆ ಅಪಾಯವನ್ನು ಹೊಂದಿದ್ದರೆ ಅಥವಾ ಮಗು ಜನಿಸಿದರೆ  ದೈಹಿಕ ಅಥವಾ ಮಾನಸಿಕ  ವೈಕಲ್ಯತೆಯುಂಟಾದರೆ ಮತ್ತು ಮಾನವೀಯ ನೆಲೆಯಲ್ಲಿ ಗರ್ಭಧರಿಸಿದ ಮಹಿಳೆಯರು ಅಥವಾ ಸರ್ಕಾರ ಘೋಷಿಸಿದ ವಿಪತ್ತು ಅಥವಾ ತುರ್ತು ಪರಿಸ್ಥಿತಿಗಳಲ್ಲಿ ಗರ್ಭಿಣಿಯಾದವರಿಗೆ ಅನ್ವಯವಾಗುತ್ತದೆ.

ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ (ತಿದ್ದುಪಡಿ) ಕಾಯ್ದೆ, 2021 ರ ಅಡಿಯಲ್ಲಿ ಹೊಸ ನಿಯಮಗಳು ಸಂಸತ್ತಿನಲ್ಲಿ ಮಾರ್ಚ್‌ನಲ್ಲಿ ಅಂಗೀಕರಿಸಲ್ಪಟ್ಟಿದೆ.

ಈ ಮೊದಲು ಗರ್ಭಧಾರಣೆಯಾದ 12 ವಾರಗಳ ಒಳಗೆ ಗರ್ಭಪಾತ ಮಾಡುವುದಾದರೆ ಒಬ್ಬರು ವೈದ್ಯರ ಸಲಹೆ, 12 ರಿಂದ 20 ವಾರಗಳ ನಡುವೆ ಗರ್ಭಪಾತ ಮಾಡುವುದಾದರೆ ಇಬ್ಬರು ವೈದ್ಯರ ಸಲಹೆ ಪಡೆಯಬೇಕಿತ್ತು.

ಹೊಸ ನಿಯಮಗಳ ಪ್ರಕಾರ ಭ್ರೂಣದ ವಿರೂಪತೆಯು ಗಣನೀಯ ಅಪಾಯವನ್ನು ಹೊಂದಿದ್ದರೆ ಅದು ಬದುಕಲು ಹೊಂದಿಕೆಯಾಗುವುದಿಲ್ಲ. ಒಂದು ವೇಳೆ ಮಗು ಜನಿಸಿದರೂ ಅದು ದೈಹಿಕ ಅಥವಾ ಮಾನಸಿಕ ವೈಪರೀತ್ಯಗಳಿಂದ ಗಂಭೀರವಾಗಿ ವೈಕಲ್ಯಕ್ಕೀಡಾಗಬಹುದು. ಹೀಗಿರುವಾಗ ಭ್ರೂಣಕ್ಕೆ ತೊಂದರೆ ಇದ್ದ ಪ್ರಕರಣಗಳಲ್ಲಿ 24 ವಾರಗಳ ನಂತರ ಗರ್ಭಾವಸ್ಥೆಯನ್ನು ಕೊನೆಗೊಳಿಸಬಹುದೇ ಎಂಬುದನ್ನು ನಿರ್ಧರಿಸಲು ರಾಜ್ಯ ಮಟ್ಟದ ವೈದ್ಯಕೀಯ ಮಂಡಳಿಯನ್ನು ಸ್ಥಾಪಿಸಲಾಗುವುದು.

ವೈದ್ಯಕೀಯ ಮಂಡಳಿಯ ಕಾರ್ಯವು ಮಹಿಳೆ ಮತ್ತು ಆಕೆಯ ವರದಿಗಳನ್ನು ಪರೀಕ್ಷಿಸಲಿದೆ .  ಆಕೆ ಗರ್ಭಾವಸ್ಥೆಯ ವೈದ್ಯಕೀಯ ಮುಕ್ತಾಯಕ್ಕೆ ಒಪ್ಪಿದರೆ ಮತ್ತು ಗರ್ಭಾವಸ್ಥೆಯ ಮುಕ್ತಾಯ ಅಥವಾ ವಿನಂತಿಯನ್ನು ಸ್ವೀಕರಿಸಿದ ಮೂರು ದಿನಗಳಲ್ಲಿ ವಿನಂತಿಯನ್ನು ತಿರಸ್ಕರಿಸುವ ಬಗ್ಗೆ ಅಭಿಪ್ರಾಯವನ್ನು ನೀಡುವುದಾಗಿದೆ.

ಗರ್ಭಾವಸ್ಥೆಯ ವೈದ್ಯಕೀಯ ಮುಕ್ತಾಯದ ಕೋರಿಕೆಯನ್ನು ಸ್ವೀಕರಿಸಿದ ಐದು ದಿನಗಳಲ್ಲಿ ಸೂಕ್ತ ಸಲಹೆಯೊಂದಿಗೆ ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆಗಳೊಂದಿಗೆ ಸಲಹೆ ನೀಡುವಾಗ ಮುಕ್ತಾಯಗೊಳಿಸುವ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಮಂಡಳಿಗೆ ಜವಾಬ್ದಾರಿ ನೀಡಲಾಗಿದೆ.

ಇದನ್ನೂ ಓದಿ: ವಿದ್ವಾಂಸರೂ ಪ್ರಭಾವಿತರಾಗುವುದು ಚಿಂತೆಗೀಡು ಮಾಡಿದೆ:  ಅಮರ್ತ್ಯ ಸೇನ್ ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್

Read Full Article

Click on your DTH Provider to Add TV9 Kannada