ವಿದ್ವಾಂಸರೂ ಪ್ರಭಾವಿತರಾಗುವುದು ಚಿಂತೆಗೀಡು ಮಾಡಿದೆ: ಅಮರ್ತ್ಯ ಸೇನ್ ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್
Amartya Sen "ನೀವು ಉಲ್ಲೇಖಿಸಿದ ಡಾಕ್ಟರ್ ಅಮರ್ತ್ಯ ಸೇನ್ ಅವರನ್ನು ಗೌರವಿಸುತ್ತೇನೆ" ಮತ್ತು "ನಾನು ಪ್ರತಿಯೊಬ್ಬರ ಬಗ್ಗೆಯೂ ಯೋಚಿಸುತ್ತೇನೆ", "ಅವರು ಭಾರತಕ್ಕೆ ಹೋಗುತ್ತಾರೆ, ಮುಕ್ತವಾಗಿ ತಿರುಗಾಡಿ ಅಲ್ಲಿ ಏನಾಗುತ್ತಿದೆ ಎಂಬುದನ್ನು ಕಂಡುಕೊಳ್ಳುತ್ತಾರೆ. ಅದು ನಮಗೆ ತಿಳಿಯಲು ಸಹಾಯ ಮಾಡುತ್ತದೆ, ನಿರ್ದಿಷ್ಟವಾಗಿ ವಿದ್ವಾಂಸರು, ಅವರು ಸತ್ಯಗಳನ್ನು ಆಧರಿಸಿ ಮಾತನಾಡುತ್ತಾರೆ.
ಬೋಸ್ಟನ್: ಬಿಜೆಪಿ ಸರ್ಕಾರದ ಬಗ್ಗೆ ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್ (Amartya Sen) ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman), ವಿದ್ವಾಂಸರೂ ಈಗ “ಪ್ರಭಾವಿತರಾಗಬಹುದು” ಮತ್ತು ಸತ್ಯಗಳ ಆಧಾರದ ಮೇಲೆ ಕಾಮೆಂಟ್ ಮಾಡುವ ಬದಲು ತಮ್ಮದೇ ಇಷ್ಟಗಳು ಮತ್ತು ಇಷ್ಟವಿಲ್ಲದ ಕಾರಣ ‘ಬಂಧಿಯಾಗಿರಬಹುದು” ಎಂದು ಹೇಳಿದ್ದಾರೆ. ಮೊಸ್ಸಾವರ್-ರಹ್ಮಾನಿ ಸೆಂಟರ್ ಫಾರ್ ಬ್ಯುಸಿನೆಸ್ ಮತ್ತು ಸರ್ಕಾರ ಮಂಗಳವಾರ ಆಯೋಜಿಸಿದ ಸಂವಾದದಲ್ಲಿ ನಿರ್ಮಲಾ ಸೀತಾರಾಮನ್ ಅವರಲ್ಲಿ ಹಾರ್ವರ್ಡ್ ಪ್ರೊಫೆಸರ್ ಲಾರೆನ್ಸ್ ಸಮ್ಮರ್ಸ್ ಅವರು, “ನಮ್ಮ ಸಮುದಾಯದ ಜನರ ಸಂಖ್ಯೆ”, ವಿಶೇಷವಾಗಿ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು ಬಿಜೆಪಿ ಸರ್ಕಾರದ ಬಗ್ಗೆ “ಸಾಕಷ್ಟು ಗೊಂದಲ” ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ. ಸಹಿಷ್ಣುತೆಯ ಪರಂಪರೆಯನ್ನು “ಬಹಳವಾಗಿ ಪ್ರಶ್ನಿಸಲಾಗಿದೆ” ಎಂಬ ಭಾವನೆ ಇದೆ ಎಂದು ಅವರು (ಸೇನ್) ಹೇಳಿದರು. ಮುಸ್ಲಿಂ ಜನರಿಗೆ ನಿಮ್ಮ ಸರ್ಕಾರವು ಕೈಗೊಂಡ ನಿಲುವು ಯುನೈಟೆಡ್ ಸ್ಟೇಟ್ಸ್ ನಡುವೆ ಬರುವ ವಿಷಯವಾಗಿದೆ ಎಂದು ಸಮ್ಮರ್ಸ್ ಹೇಳಿದ್ದಾರೆ.
ಹಾರ್ವರ್ಡ್ ಕೆನಡಿ ಶಾಲೆಯಲ್ಲಿ ನಡೆದ ಸಂವಾದದ ಸಮಯದಲ್ಲಿ ಕೇಳಲಾದ ಈ ಪ್ರಶ್ನೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್ ಅವರು ಬಿಜೆಪಿ ಆಡಳಿತ ನಡೆಸದ ರಾಜ್ಯಗಳಲ್ಲಿ ಹಿಂಸಾಚಾರದ ಸಮಸ್ಯೆಯೂ “ಪ್ರಧಾನ ಮಂತ್ರಿಯ ಬಾಗಿಲಲ್ಲಿರುತ್ತದೆ ಏಕೆಂದರೆ ಅದು ನನ್ನ ನಿರೂಪಣೆಗೆ ಸರಿಹೊಂದುತ್ತದೆ” ಎಂದು ಹೇಳಿದರು.
“ನೀವು ಉಲ್ಲೇಖಿಸಿದ ಡಾಕ್ಟರ್ ಅಮರ್ತ್ಯ ಸೇನ್ ಅವರನ್ನು ಗೌರವಿಸುತ್ತೇನೆ” ಮತ್ತು “ನಾನು ಪ್ರತಿಯೊಬ್ಬರ ಬಗ್ಗೆಯೂ ಯೋಚಿಸುತ್ತೇನೆ”, “ಅವರು ಭಾರತಕ್ಕೆ ಹೋಗುತ್ತಾರೆ, ಮುಕ್ತವಾಗಿ ತಿರುಗಾಡಿ ಅಲ್ಲಿ ಏನಾಗುತ್ತಿದೆ ಎಂಬುದನ್ನು ಕಂಡುಕೊಳ್ಳುತ್ತಾರೆ. ಅದು ನಮಗೆ ತಿಳಿಯಲು ಸಹಾಯ ಮಾಡುತ್ತದೆ, ನಿರ್ದಿಷ್ಟವಾಗಿ ವಿದ್ವಾಂಸರು, ಅವರು ಸತ್ಯಗಳನ್ನು ಆಧರಿಸಿ ಮಾತನಾಡುತ್ತಾರೆ.
ಆದರೆ ಹಾಗಲ್ಲ, ವಿದ್ವಾಂಸರು ಈಗ ಸತ್ಯದ ಆಧಾರದ ಮೇಲೆ ಕಾಮೆಂಟ್ ಮಾಡುವ ಬದಲು ಅವರ ವೈಯಕ್ತಿಕ ಇಷ್ಟಗಳು ಮತ್ತು ಇಷ್ಟವಿಲ್ಲದಿರುವಿಕೆಯಿಂದ ಹೆಚ್ಚು ಪ್ರಭಾವಿತರಾಗಬಹುದು ಎಂಬುದು ಚಿಂತೆಗೀಡು ಮಾಡುತ್ತದೆ. ವಿದ್ವಾಂಸರು ಸಮಚಿತ್ತದಲ್ಲಿರುವುದರ ಬದಲು ತಮ್ಮ ಸ್ವಂತ ಇಷ್ಟಗಳು ಮತ್ತು ಇಷ್ಟಪಡದಿರುವಿಕೆಯಿಂದ ಬಂಧಿತರಾಗಿರುವುದು ನಿಜಕ್ಕೂ ಚಿಂತಾಜನಕವಾಗಿದೆ. ಅವರ ಮುಂದೆ ಇರುವ ಸತ್ಯ ಮತ್ತು ಡೇಟಾವನ್ನು ನೋಡಿ ನಂತರ ಮಾತನಾಡಲಿ ಎಂದು ನಿರ್ಮಲಾ ಹೇಳಿದ್ದಾರೆ.
“ಒಂದು ದೃಷ್ಟಿಕೋನವನ್ನು ಹೊಂದಿರುವುದು ಒಂದು ವಿಷಯ ಮತ್ತು ಅದನ್ನು ಸತ್ಯಗಳ ಮೇಲೆ ಆಧರಿಸಿರುವುದು ಇನ್ನೊಂದು ವಿಷಯ. ಅಭಿಪ್ರಾಯಗಳು ನನ್ನ ಪೂರ್ವಾಗ್ರಹವಾದರೆ, ನಾನು ಅದನ್ನು ಎದುರಿಸಲು ಯಾವುದೇ ಮಾರ್ಗವಿಲ್ಲ” ಎಂದು ಸೀತಾರಾಮನ್ ಹೇಳಿದರು.
“ಕೆಲವೊಮ್ಮೆ ಇದು ನಿದ್ದೆ ಮಾಡುವಂತೆ ನಟಿಸುವವರನ್ನು ಎಬ್ಬಿಸುವ ಪ್ರಯತ್ನವಾಗಿದೆ. ನೀವು ನಿಜವಾಗಿಯೂ ನಿದ್ದೆ ಮಾಡುತ್ತಿದ್ದರೆ, ನಾನು ನಿಮ್ಮ ಭುಜವನ್ನು ತಟ್ಟಿ, ‘ದಯವಿಟ್ಟು ಎದ್ದೇಳಿ’ ಎಂದು ಹೇಳಬಹುದು. ಆದರೆ ನೀವು ನಿದ್ದೆ ಮಾಡುವಂತೆ ನಟಿಸುತ್ತಿದ್ದರೆ, ನೀವು ಏಳುವಿರಾ? “ಕಾನೂನು ಮತ್ತು ಸುವ್ಯವಸ್ಥೆಯು ಪ್ರತಿಯೊಂದು ಪ್ರಾಂತ್ಯಕ್ಕೂ ತನ್ನದೇ ಆದ ವಿಷಯವಾಗಿದೆ.” ಎಂದು ವಿತ್ತ ಸಚಿವೆ ಹೇಳಿದ್ದಾರೆ.
ಅಮೆರಿಕದಲ್ಲಿ ಒಂದು ನಿರ್ದಿಷ್ಟ ರಾಜ್ಯವು ಯಾವುದೇ ಸಮಸ್ಯೆಯನ್ನು ಹೊಂದಿದ್ದರೆ, ಅದು ಅಮೆರಿಕದ ಅಧ್ಯಕ್ಷರು ಎದುರಿಸಬೇಕಾದ ಸಮಸ್ಯೆಯಲ್ಲ. ಅದು ಆ ರಾಜ್ಯದ ಗವರ್ನರ್ ಪರಿಧಿಗೆ ಒಳಪಟ್ಟಿದ್ದು. “ಭಾರತದಲ್ಲಿಯೂ ಸಹ ಇದೇ ಪರಿಸ್ಥಿತಿ ಇದೆ. ಪ್ರಾಂತ್ಯಗಳು ಪ್ರಧಾನ ಮಂತ್ರಿಯು ಸೇರಿರುವ ಪಕ್ಷದಿಂದ ಆಳಲ್ಪಡುವುದಿಲ್ಲ. ನಿನ್ನೆ ರಾತ್ರಿಯ ಹಿಂದಿನ ದಿನವೂ ಅಲ್ಲ, ನಿನ್ನೆ ರಾತ್ರಿಯೂ ಸಹ ರಾಜ್ಯದಲ್ಲಿ ಪ್ರಧಾನಿಯವರ ಪಕ್ಷವಲ್ಲದ ಪಕ್ಷ ಆಡಳಿತ ನಡೆಸುವ ರಾಜ್ಯದಲ್ಲಿ ಅಪರಾಧಗಳು ನಡೆದಿವೆ,ಕಡು ಬಡವರ ಮೇಲೆ ಹಲ್ಲೆಯಾಗಿದೆ, ಕೆಲವರು ಸತ್ತಿದ್ದಾರೆ.
ಆದರೆ ಅದು ಕೂಡ ಪ್ರಧಾನಿಯ ಬಾಗಿಲಲ್ಲಿರುತ್ತದೆ ಏಕೆಂದರೆ ಅದು ನನ್ನ ನಿರೂಪಣೆಗೆ ಸರಿಹೊಂದುತ್ತದೆ. ಅದು ಸರಿಯಲ್ಲ ಏಕೆಂದರೆ ಆ ರಾಜ್ಯದಲ್ಲಿ, ಆ ಪ್ರಾಂತ್ಯದಲ್ಲಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಆ ಪ್ರದೇಶದ ಚುನಾಯಿತ ಮುಖ್ಯಮಂತ್ರಿಯವರು ನಿಯಂತ್ರಿಸುತ್ತಾರೆ, ಅವರು ಪ್ರಧಾನಿ ಮೋದಿಯವರ ಪಕ್ಷದ ವ್ಯಕ್ತಿಯೂ ಅಲ್ಲ.
“ಪ್ರಧಾನಿ (ನರೇಂದ್ರ) ಮೋದಿಯವರನ್ನು ಇಂತಹ ಹೆಸರಿಸಿ, ನಿಂದಿಸಿ ಅವಹೇಳನಕಾರಿ ಪದಗಳಲ್ಲಿ ಟೀಕಿಸಿದವರ ಸಂಖ್ಯೆಯನ್ನು ಹೇಳಿ ಅವರಲ್ಲಿ ಯಾರನ್ನಾದರೂ ಸ್ಪರ್ಶಿಸಲಾಗಿದೆಯೇ, ಅವರನ್ನು ಪ್ರಶ್ನಿಸಲಾಗಿದೆಯೇ. ಆದರೆ ಬಿಜೆಪಿಯೇತರ ಆಡಳಿತದ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರೆ , ಮೊದಲು ಅವರನ್ನು ಬಂಧಿಸಿ ಜೈಲಿಗೆ ಹಾಕಲಾಗುತ್ತದೆ. ಇದು ಸಂಭವಿಸಿದ ರಾಜ್ಯಗಳನ್ನು ನಾನು ಹೆಸರಿಸುತ್ತೇನೆ.
ವಾಸ್ತವವಾಗಿ, ವಿರೋಧ ಪಕ್ಷಕ್ಕೆ ಸೇರಿದ ಒಬ್ಬ ಚುನಾಯಿತ ಮುಖ್ಯಮಂತ್ರಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕಾಗಿ ಅವರಲ್ಲಿ ಕೆಲವರು ಇನ್ನೂ ಜೈಲಿನಲ್ಲಿ ನರಳುತ್ತಿದ್ದಾರೆ. ಪ್ರಧಾನಿ ಮೋದಿಯವರ ಬಗ್ಗೆ ಮಾತನಾಡುವ ಅದೇ ಗುಂಪಿನ ವಿದ್ವಾಂಸರು ಆ ರಾಜ್ಯಗಳ ಬಗ್ಗೆ ಪ್ರತಿಕ್ರಿಯಿಸುತ್ತಾರೆ ಮತ್ತು ಏನಾಗುತ್ತಿದೆ ಎಂದು ಹೇಳುತ್ತಾರೆ – ಭಾರತದ್ದು ಸಹಿಷ್ಣು ಸಂಸ್ಕೃತಿ ಎಂದಿದ್ದಾರೆ ನಿರ್ಮಲಾ.
2014 ರಲ್ಲಿ ಪಿಎಂ ಮೋದಿ ಅಧಿಕಾರಕ್ಕೆ ಬಂದಾಗ, ಚರ್ಚುಗಳ ಮೇಲೆ ಸರಣಿ ದಾಳಿಗಳು ನಡೆದವು ಎಂದು ನೆನಪಿಸಿಕೊಂಡ ನಿರ್ಮಲಾ “ಮತ್ತು ಮತ್ತೆ ಧ್ವನಿಗಳು ಬಂದವು. ಜನರು ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದರು, ನಾವು ದೇಶದಲ್ಲಿ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಯನ್ನು ಹಿ ತಿರುಗಿಸಿ ಈ ಸರ್ಕಾರವು ಅಲ್ಪಸಂಖ್ಯಾತರ ವಿರುದ್ಧವಾಗಿದೆ, ಕ್ರಿಶ್ಚಿಯನ್ನರನ್ನು ನಡೆಸಿಕೊಳ್ಳುವ ರೀತಿಯನ್ನು ನೋಡಿ, ಚರ್ಚುಗಳ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ಹೇಳಿದ್ದರು. ಇದು ಸಂಭವಿಸಿದ ಪ್ರತಿಯೊಂದು ರಾಜ್ಯವು ತನ್ನದೇ ಆದ ತನಿಖೆ, ಸಮಿತಿಗಳು ಮತ್ತು ಪೊಲೀಸ್ ಅನ್ನು ಹೊಂದಿದೆ.
“ಪ್ರಧಾನಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಸರಿಯಾದ ತನಿಖೆಯ ನಂತರ ಈ ಪ್ರತಿಯೊಂದು ದಾಳಿಗಳು ಪ್ರಧಾನಿಗೆ ಸಂಬಂಧವಿಲ್ಲ, ಬಿಜೆಪಿಯೊಂದಿಗೆ ಏನೂ ಇಲ್ಲ, ಯಾವುದೇ ಧರ್ಮ ಸಂಬಂಧಿಯೂ ಅಲ್ಲ ಎಂದು ಸಾಬೀತಾಗಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.
“ಆದರೆ ಪ್ರಧಾನಿಯವರನ್ನೇ ಇದಕ್ಕೆ ದೂರಲಾಯಿತು, ‘ಈ ದೇಶದಲ್ಲಿ ನಾನು ಬದುಕುವುದು ಕಷ್ಟ, ಉಫ್, ನನ್ನ ಅಲ್ಪಸಂಖ್ಯಾತರು ಮನನೊಂದಿದ್ದಾರೆ’ ಎಂದು ಪ್ರಶಸ್ತಿಗಳನ್ನು ಹಿಂತಿರುಗಿಸಲಾಯಿತು ಅವರಲ್ಲಿ ಯಾರಿಗೂ ಧರ್ಮದ ಕೋನದಲ್ಲಿ ಸಂಬಂಧವಿಲ್ಲ ಎಂದು ತಿಳಿದುಬಂದಿದೆ. ಕೋಮುವಾದಿ ಕೋನ ಮತ್ತು ಅವುಗಳಲ್ಲಿ ಯಾವುದೂ ಬಿಜೆಪಿ ಅಥವಾ ಪ್ರಧಾನಿಯೊಂದಿಗೆ ಸಂಬಂಧ ಹೊಂದಿಲ್ಲ ಎಂದು ಅವರು ಹೇಳಿದರು.
ಅದೇ ರೀತಿ 2019 ರ ನಂತರ ಪ್ರಧಾನಿ ಮೋದಿ ಇನ್ನೂ ಉತ್ತಮವಾದ, ಬಲವಾದ ಜನಾದೇಶದೊಂದಿಗೆ ಮರಳಿದಾಗ “ಈ ಜನರ ಗುಂಪು ಕೋಮುಗಲಭೆ, ಕೋಮುವಾದ ಇದೆ ಹೇಳುತ್ತಲೇ ಇದೆ.” ಮತ್ತೆ ಕಾನೂನು ಮತ್ತು ಸುವ್ಯವಸ್ಥೆಯ ಪ್ರಶ್ನೆಯು ರಾಜ್ಯದ ವಿಷಯವಾಗಿದೆ. ಪ್ರತಿಯೊಂದು ರಾಜ್ಯವು ತನ್ನದೇ ವ್ಯಾಪ್ತಿಯನ್ನು ಹೊಂದಿದೆ. ಬಿಜೆಪಿ ಇಲ್ಲದ ರಾಜ್ಯಗಳಲ್ಲೂ ಹಿಂಸಾಚಾರ ನಡೆದಿದೆ. ಅದಕ್ಕೂ ಪ್ರಧಾನಮಂತ್ರಿ ಉತ್ತರಿಸಬೇಕೇ? ಎಂದು ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: PM Gatishakti ಗತಿಶಕ್ತಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ